Latest

ಯೋಗಿ ಆದಿತ್ಯನಾಥ್ ಡೀಪ್ ಫೇಕ್ ವಿಡಿಯೋ ವೈರಲ್..!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಡೀಪ್ ಫೇಕ್ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹರಡಲು ಸಂಬಂಧಿಸಿದಂತೆ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಸ್ಕಲ್ ಕ್ಯಾಪ್ ಧರಿಸಿ, ಸ್ಮೈಲ್ ಮುಖದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಮುಖವನ್ನು ಸ್ಕಾರ್ಫಿನಿಂದ ಮುಚ್ಚಿಕೊಂಡು ಅವರಿಗೆ ನಮಸ್ಕಾರ ಮಾಡುತ್ತಾನೆ.

ವೀಡಿಯೊವು “ಪ್ಯಾರಾ ಇಸ್ಲಾಂ” ಎಂಬ ಫೇಸ್ಬುಕ್ ಖಾತೆಯ ಮೂಲಕ ಹರಡಿದ್ದು, ಈ ಬಗ್ಗೆ ಬಿಜೆಪಿ ಮುಖಂಡ ರಾಜ್ಕುಮಾರ್ ತಿವಾರಿ ಹಜರತ್ ಗಂಜ್ ನರ್ಹಿ ಪ್ರದೇಶದಿಂದ ದೂರು ದಾಖಲಿಸಿದ್ದಾರೆ. ಅವರ ದೂರುಅನುಸಾರ, “ಪ್ಯಾರಾ ಇಸ್ಲಾಂ” ಖಾತೆಯು ಈ ಮಾರ್ಫಿಂಗ್ ವೀಡಿಯೋವನ್ನು ಹಂಚಿಕೊಂಡಿದೆ.

ವೀಡಿಯೋ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣವನ್ನು ಬಿಎನ್ ಎಸ್ ಮತ್ತು ಐಟಿ ಕಾಯ್ದೆಗಳ ವಿವಿಧ ವಿಭಾಗಗಳಡಿ ದಾಖಲಿಸಲಾಗಿದೆ, ಮತ್ತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago