ಬೆಳಗಾವಿ ಜಿಲ್ಲೆಯ ಬೈರನಟ್ಟಿ ಗ್ರಾಮದಲ್ಲಿ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪಾರ್ವತೆಮ್ಮ ಸೋಮಪ್ಪ ಮುತ್ನಾಳ ಎಂಬ 50 ವರ್ಷದ ಮಹಿಳೆ ಮಗನಾದ ದೇಮಪ್ಪ ಖಾಸಗಿ ಬ್ಯಾಂಕ್ ಮುಚ್ಚಂಡಿಯಿಂದ ಎಮ್ಮೆಯ ಮೇಲೆ ಸಾಲವನ್ನು ತೆಗೆದುಕೊಂಡಿದು. ಇಲ್ಲಿಯವರೆಗೂ ಕಂತುಗಳನ್ನು ಕಟ್ಟುತ್ತಾ ಬಂದಿದ. ಈ ತಿಂಗಳು ಅಂದರೆ ಫೆಬ್ರುವರಿ ತಿಂಗಳ ಕಂತು ಕಟ್ಟುವುದು ತಡವಾದರಿಂದ ದಿನಾಂಕ 15/02/2024 ರ ಬೆಳಿಗ್ಗೆ 10 ಘಂಟೆ ಸುಮಾರಿಗೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಾದ ಸೋಮು ಕಿರಗಾವ ಹಾಗೂ ಹೆಸರು ಗೊತ್ತಿರದ ಇನ್ನೊಬ್ಬ ಸಿಬ್ಬಂದಿ, ಇಬ್ಬರು ಪದೇ ಪದೇ ಮನೆಗೆ ಬಂದು ಒಬ್ಬಳೇ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮರ್ಯಾದೆಗೆ ಹೆದರಿ, ಬೈಯಬೇಡಿ ನಾನು ಏನಾದರೂ ಕುಡಿದು ಸಾಯ್ತೀನಿ ನೋಡಿ ಎಂದಾಗ ಬ್ಯಾಂಕಿನ ಸಿಬ್ಬಂದಿ ನೀನು ವಿಷ ಕುಡಿದು ಸಾಯಿ ಆಗ ನಿನ್ನ ಮಗ ಬರುತ್ತಾನಲ್ಲ ಅವ ಬಂದ ಮೇಲೆ ಸಾಲ ವಸೂಲಿ ಮಾಡುತ್ತೇವೆ ಎಂದು ವಿಷ ಕುಡಿಯಲು ಬ್ಯಾಂಕ್ನ ಸಿಬ್ಬಂದಿಯೇ ಪ್ರಚೋದಿಸಿರುತ್ತಾನೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮಹಿಳೆಯು ವಿಷ ಸೇವಿಸಿದ್ದು ಸ್ಥಳದಿಂದ ಬ್ಯಾಂಕ್ ನ ಸಿಬ್ಬಂದಿಗಳು ಪರಾರಿಯಾಗಿರುತ್ತಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ನೇಸರಗಿ ಠಾಣ ಪೊಲೀಸರು ದೂರನ್ನು ದಾಖಲಿಸಿಕೊಂಡಿರುತ್ತಾರೆ.
ವರದಿ: ಸಂಗಪ್ಪ ಚಲವಾದಿ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…