Crime

ಪತಿಯನ್ನು ತರಕಾರಿ ತರಲು ಕಳುಹಿಸಿ ಪ್ರಿಯಕರನೊಂದಿಗೆ ಬೆಡ್ರೂಮ್ನಲ್ಲಿ ಪತ್ನಿ ರೋಮ್ಯಾನ್ಸ್; ಮುಂದೆ ನಡೆದದ್ದೇ ಗೌರ ದುರಂತ!

ಪತಿ ಕೊಡಲಿಯಿಂದ ಪತ್ನಿ ಹಾಗು ಪತ್ನಿ ಪ್ರಿಯಕರನನ್ನು ಕೊಚ್ಚಿ ಕೊಂದಿರುವ ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಖತಿ ಬಾಬಾ ಕಾಲೋನಿಯಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿಯೇ ಇಬ್ಬರನ್ನು ಕೊಲೆ ಮಾಡಿದ್ದಾನೆ. ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದಿರುವುದಾಗಿ ಆರೋಪಿ ರವಿಯು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಖಾತಿ ಬಾಬಾ ಕಾಲೋನಿ ನಿವಾಸಿಯು ರವಿ ವಂಶಕರ್ ವೃತ್ತಿಯಲ್ಲಿ ಚಾಲಕನಾಗಿದ್ದನು. ಪತ್ನಿ ಪೂಜಾಳ ನಡವಳಿಕೆಯ ಬಗ್ಗೆ ಅನುಮಾನವಿದ್ದ ಕಾರಣ ಆಕೆಯ ಮೇಲೆ ಕಣ್ಣಿಟ್ಟಿದ್ದನು. ಹೀಗಿರುವಾಗ ಶುಕ್ರವಾರದಂದು ಆತನ ಪತ್ನಿ ಮಾರುಕಟ್ಟೆಯಿಂದ ತರಕಾರಿ ತರುವಂತೆ ಹೇಳಿದ್ದಾಳೆ. ಇತ್ತ ಪತ್ನಿಯು ಇಲ್ಲದ್ದನ್ನು ನೋಡಿ ಪೂಜಾ ತನ್ನ ಪ್ರಿಯಕರ ರವಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ. ಆದರೆ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಗಂಡನಿಗೆ ಪೂಜಾಳ ಮೇಲೆ ಅನುಮಾನವಿದ್ದ ಕಾರಣ ಅರ್ಧ ದಾರಿಯಿಂದಲೇ ಮನೆಗೆ ವಾಪಾಸ್ಸಾಗಿದ್ದಾನೆ. ಆದರೆ ಪತಿ ರವಿಯು ಮನೆಗೆ ಹಿಂದಿರುಗಿದಾಗ ಪೂಜಾಳು ಪ್ರಿಯಕರನ ಜೊತೆಗೆ ಕೋಣೆಯಲ್ಲಿರುವುದನ್ನು ಕಂಡಿದ್ದಾನೆ. ಇದನ್ನು ಕಣ್ಣಾರೆ ಕಂಡ ಕೋಪದಿಂದ ಪತ್ನಿ ಪೂಜಾಳ ಬಳಿ ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಆದರೆ ಹೆಂಡತಿ ಬಾಗಿಲು ತೆರೆಯದ ಕಾರಣ ರವಿಯ ಕೋಪವು ನೆತ್ತಿಗೇರಿದೆ.
ಮನೆಯ ಅಂಗಳದಲ್ಲಿಯೇ ಇದ್ದ ಕೊಡಲಿಯನ್ನು ಎತ್ತಿಕೊಂಡು ಜೋರಾಗಿ ಕೂಗಾಡಲು ಆರಂಭಿಸಿದ್ದಾನೆ. ಆ ಬಳಿಕ ಪೂಜಾಳ ಪ್ರಿಯಕರ ಬಾಗಿಲು ತೆರೆದಾಗ ರವಿ ಕೊಡಲಿಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇತ್ತ ಪತ್ನಿ ಪೂಜಾಳ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದು, ಕೊಡಲಿಯಿಂದ ಆಕೆಯ ಕತ್ತು ಕಡಿದಿದ್ದಾನೆ. ಇಬ್ಬರೂ ಮನೆಯ ಅಂಗಳದಲ್ಲಿ ವಿಲವಿಲ ಒದ್ದಾಡಿ ಪ್ರಾಣಬಿಟ್ಟಿದ್ದಾರೆ.

ರವಿ ರಕ್ತದಿಂದ ಕೂಡಿದ ಬಟ್ಟೆಯಲ್ಲೇ ಕೈಯಲ್ಲಿ ಕೊಡಲಿಯನ್ನು ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರಿ ತಾನು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸುತ್ತಿದ್ದಂತೆ ಗಾಬರಿಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಕ್ಷಣವೇ ಪೊಲೀಸರ ತಂಡವು ಆತನ ಮನೆಗೆ ತೆರಳಿ ಮನೆಯ ಅಂಗಳದಲ್ಲಿ ಬಿದ್ದಿದ್ದ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ದನಗಳ ಕಳ್ಳತನ ಮಾಡುತ್ತಿದ್ದವನನ್ನು ಹೊಂಚು ಹಾಕಿ ಹಿಡಿದ ಪೊಲೀಸರು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ದನಗಳ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬಂದಿಸಿದ್ದಾರೆ.ಡಿವೈಎಸ್ಪಿ ಮಲ್ಲೇಶ್…

1 day ago

‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ ಸಂಕಷ್ಟ: ವಿವಾದಾತ್ಮಕ ಹಾಡಿಗೆ ಕೇಂದ್ರ ಸರ್ಕಾರ ಬ್ರೇಕ್..!

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ನಿರ್ದೇಶಕ ಪ್ರೇಮ್ ಸಾರಥ್ಯದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ…

2 days ago

ರಸ್ತೆಗಳಲ್ಲಿ ನಮಾಜ್‌ಗೆ ಕರೆ: ಹೈದರಾಬಾದ್ ಮೂಲದ ವ್ಯಕ್ತಿಯ ವಿವಾದಾತ್ಮಕ ವಿಡಿಯೋ ವೈರಲ್

ಈದ್ ಹಬ್ಬದ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್‌ನ ಸೈಯದ್ ಅಯೂಬ್ ಎಂಬಾತನ ವಿಡಿಯೋ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ‘ಹೈದರಾಬಾದ್…

2 days ago

ಭಾರತ ಸೇರಿದಂತೆ ಏಷ್ಯಾದಲ್ಲಿ ದಾಳಿಗೆ ಐಸಿಸ್ ಕರೆ: ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಾರತ ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು…

2 days ago

ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ: ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು..!

ಮೂಡಬಿದಿರೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಮಂಗಳೂರು…

2 days ago

ಮೋದಿ ಮಿಮಿಕ್ರಿ ವಿವಾದ: LPG ಬೆಲೆ ಏರಿಕೆ ವ್ಯಂಗ್ಯಕ್ಕೆ ಶಿಕ್ಷಕ ಅಮಾನತು

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯನ್ನು ಅಣಕಿಸಿ ಅಡುಗೆ ಅನಿಲ (LPG) ಬೆಲೆ ಏರಿಕೆಯನ್ನು ವ್ಯಂಗ್ಯಾತ್ಮಕವಾಗಿ ಹೇಳಿಕೊಂಡಿದ್ದ ಸರ್ಕಾರಿ…

2 days ago