ಮಹಿಳೆಯನ್ನು ಗುರುತಿಸಲಾಗಿದೆ ಗಾಯತ್ರಿ ಎಂದು. ಗಂಡನಾದ ಪಾಪಣ್ಣ ನಿರಂತರವಾಗಿ ಮದ್ಯಕ್ಕಾಗಿ ಹಣ ಬೇಡುತ್ತಿದ್ದನು. ಪತ್ನಿ ಹಣ ನೀಡಲು ನಿರಾಕರಿಸಿದಾಗ ಆಗಾಗ ಜಗಳ ಸೃಷ್ಟಿಯಾಗುತ್ತಿದ್ದಂತೆ ಮಾಹಿತಿ ಲಭ್ಯವಾಗಿದೆ.

ಘಟನೆಯ ದಿನ ಮನೆಯಲ್ಲಿದ್ದವರು ಹೊರಗಡೆ ಹೋಗಿದ್ದ ವೇಳೆ, ಮದ್ಯದ ಅಮಲಿನಲ್ಲಿ ಪಾಪಣ್ಣ ಕೈಯಲ್ಲಿದ್ದ ಮಚ್ಚಿನಿಂದ ಗಾಯತ್ರಿಗೆ ಪ್ರಾಣಾಂತಿಕ ದಾಳಿ ನಡೆಸಿದ್ದಾನೆ. ರಕ್ತದ ಮಡಿಲಲ್ಲಿ ಕುಸಿದ ಗಾಯತ್ರಿ ತಕ್ಷಣವೇ ಪ್ರಾಣ ಕಳೆದುಕೊಂಡಳು.

ಘಟನೆಯ ಬಳಿಕ ಪಾಪಣ್ಣ ಸ್ಥಳದಿಂದ ಪರಾರಿಯಾದರೂ, ಹೆಚ್ಚಿನ ಸಮಯ ಮರೆಮಾಚಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಥಳೀಯರ ಸಹಕಾರದಿಂದ ಪೊಲೀಸರು ಅವನನ್ನು ಶೀಘ್ರವೇ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಮದ್ಯದ ವ್ಯಸನ ಮತ್ತು ಗೃಹ ಕಲಹ ಮತ್ತೊಮ್ಮೆ ಮಹಿಳೆಯ ಜೀವವನ್ನು ಕಸಿದುಕೊಂಡಿರುವ ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!