Latest

ಜೊತೆಗೆ ಮಲಗಲು ಗಂಡನಿಗೆ 5 ಸಾವಿರ ರೇಟ್ ಫಿಕ್ಸ್ ಮಾಡಿದ ಪತ್ನಿ; ಟೆಕ್ಕಿಯ ಕಣ್ಣೀರಿನ ಕಥೆ

ಬೆಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಐಆರ್ ಪ್ರಕಾರ, ಹೆಂಡತಿಯ ಕಿರುಕುಳದಿಂದ ಬಳಲಿದ ಟೆಕ್ಕಿಯೊಬ್ಬರು ಪತ್ನಿ ಮತ್ತು ಆಕೆಯ ಮನೆಯವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟೆಕ್ಕಿಯ ಗಂಭೀರ ಆರೋಪಗಳು

2022ರ ಆಗಸ್ಟ್‌ನಲ್ಲಿ ಮದುವೆಯಾಗಿದ್ದ ಈ ಟೆಕ್ಕಿ, ಎರಡು ವರ್ಷಗಳಾದರೂ ಸರಿಯಾದ ದಾಂಪತ್ಯ ಜೀವನ ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಪತ್ನಿ ನಿರಂತರವಾಗಿ ಹಣದ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾಳೆ ಎನ್ನುವುದು ಅವರ ದೂರು.

“ಬಲವಂತವಾಗಿ ಮುಟ್ಟಿದರೆ ಡೆತ್‌ನೋಟ್ ಬರೆದಿಟ್ಟು ಸಾಯುತ್ತೇನೆ ಎಂದು ಪತ್ನಿ ಬ್ಲಾಕ್ ಮೇಲ್ ಮಾಡುತ್ತಾಳೆ. ಜೊತೆ ಮಲಗಲು 5000 ರೂ. ಕೊಡಬೇಕು ಎಂದು ಕೇಳುತ್ತಾಳೆ. ಫೈನಾನ್ಷಿಯಲ್ ಶೋಷಣೆಯ ಜೊತೆಗೆ ದೈಹಿಕ ಹಲ್ಲೆಗೂ ಒಳಗಾದಿದ್ದೇನೆ. ಪತ್ನಿ ನನ್ನ ಮರ್ಮಾಂಗಕ್ಕೆ ಹೊಡೆದು ಕೊಲ್ಲಲು ಪ್ರಯತ್ನಿಸಿದ ಘಟನೆ ಸಹ ನಡೆದಿದೆ,” ಎಂದು ಅವರು ಆರೋಪಿಸಿದ್ದಾರೆ.

ಹಣಕ್ಕಾಗಿ ಪತ್ನಿ ಮತ್ತು ಮನೆಯವರ ಹಿಂಸೆ?

ದೂರು ಪ್ರಕಾರ, ಪತ್ನಿಯ ಮನೆಯವರು ಮನೆ ಕೊಂಡುಕೊಳ್ಳಲು ಲಕ್ಷಾಂತರ ರೂಪಾಯಿ ಬೇಡಿಕೆಯಿಟ್ಟಿದ್ದರು. ಟೆಕ್ಕಿಯು ಹಣ ನೀಡಲು ನಿರಾಕರಿಸಿದ ನಂತರ, ಪತ್ನಿಯ ಕಿರುಕುಳ ಹೆಚ್ಚಾಗಿದೆ.

“ನೀನು ಬದಲಾಯಿಸದ ಹಾದರೇ ನನ್ನ ಬಳಿ ಬರಲ್ಲ. 60 ವರ್ಷ ಆದ್ಮೇಲೆ ಮಾತ್ರ ಮಕ್ಕಳ ಬಗ್ಗೆ ಚಿಂತಿಸೋಣ,” ಎಂದು ಪತ್ನಿ ಹೇಳಿದರೆಂದು ಅವರು ದೂರಿದ್ದಾರೆ.

ಉದ್ಯೋಗ ಕಳೆದುಕೊಂಡ ಟೆಕ್ಕಿ

ಈ ದುಃಖಾಂತ್ಯದ ಪರಿಣಾಮವಾಗಿ, ಟೆಕ್ಕಿಯು ಖಾಸಗಿ ಕಂಪನಿಯೊಂದರಲ್ಲಿ ತನ್ನ ಸಾಫ್ಟ್‌ವೇರ್ ಉದ್ಯೋಗ ಕಳೆದುಕೊಂಡಿದ್ದಾರೆ. “ವರ್ಕ್ ಫ್ರಮ್ ಹೋಮ್ ವೇಳೆ ಪತ್ನಿ ನಿರಂತರವಾಗಿ ಜಗಳ ಮಾಡಿ, ಡ್ಯಾನ್ಸ್ ಮಾಡುತ್ತಾ ತೊಂದರೆ ಕೊಡುತ್ತಿದ್ದಳು. ಅದರಿಂದ ನನ್ನ ಉದ್ಯೋಗವೇ ಕೈ ತಪ್ಪಿತು. ವಿಚ್ಛೇದನ ಕೇಳಿದರೆ 45 ಲಕ್ಷ ರೂ. ನೀಡಬೇಕೆಂದು ಪತ್ನಿ ಬೇಡಿಕೆ ಇಟ್ಟಿದ್ದಾರೆ,” ಎಂದು ಅವರು ದೂರಿದ್ದಾರೆ.

ಪತ್ನಿಯ ಪ್ರತಿಕ್ರಿಯೆ

ಈ ಸಂಬಂಧ ಪೊಲೀಸರು ಪತ್ನಿಯ ಹೇಳಿಕೆ ಪಡೆದುಕೊಂಡಿದ್ದು, “ನಾನು ಆತನ ಜೊತೆ ಬಾಳಲು ಇಚ್ಛಿಸುತ್ತಿಲ್ಲ. ನಮಗೆ ಒಪ್ಪಂದ ಆಗದು,” ಎಂದು ಪ್ರತಿಕ್ರಿಯಿಸಿದ್ದಾಳೆ.

ಈ ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟೆಕ್ಕಿಗಳ ಮೇಲೆ ವರದಕ್ಷಿಣೆ ಕೇಸ್‌ಗಳು ಮತ್ತು ಮಾನಸಿಕ ಹಿಂಸೆ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಘಟನೆಗೆ ನ್ಯಾಯ ಸಿಗಬಹುದಾ ಎಂಬ ಪ್ರಶ್ನೆ ಮೂಡಿದೆ.

ಭ್ರಷ್ಟರ ಬೇಟೆ

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

12 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

14 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

1 day ago