ಪ್ರಿಯಕರನೊಂದಿಗೆ ಲಾಡ್ಜ್ನಲ್ಲಿ ಇದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹಿಂದೆ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದ ಪತ್ನಿ, ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ಯೋಜನೆ ರೂಪಿಸಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರ ಸಹಾಯದಿಂದ ಪತಿ ಈ ಸಂಬಂಧವನ್ನು ಬಯಲಿಗೆಳೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಾಡ್ಜ್ನ ಕೋಣೆಯೊಳಗೆ ಪ್ರಿಯಕರನೊಂದಿಗೆ ಇದ್ದ ವೇಳೆ ಪತ್ನಿಯನ್ನು ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದಾಗ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾಳೆ ಎನ್ನಲಾಗಿದೆ. ಹೋಟೆಲ್ನಲ್ಲಿ ಪೊಲೀಸರೊಂದಿಗೆ ದಾಳಿ ನಡೆಸಿದ ವೇಳೆ ಇಬ್ಬರೂ ಹೊರಬಂದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಸುಮಾರು ಮೂರುವರೆ ವರ್ಷಗಳ ಹಿಂದೆ ಬುಲಂದ್ಶಹರ್ ಜಿಲ್ಲೆಯ ಗಲಾವಟಿ ಪ್ರದೇಶದ ನಿವಾಸಿ ಆಕಾಶ್ ಕುಮಾರ್ ಮತ್ತು ಮಹಿಮಾರಾಣಿ ಅವರ ಮದುವೆ ನಡೆದಿತ್ತು. ಪ್ರೀತಿಸಿ ಮದುವೆಯಾದರೂ ಮಹಿಮಾರಾಣಿ ನಿಖಿಲ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕಾಶ್ ಕುಮಾರ್ ಆರೋಪಿಸಿದ್ದಾರೆ. ಈ ವಿಷಯವಾಗಿ ಹಿಂದೆ ಪ್ರಶ್ನಿಸಿದಾಗ ಪತ್ನಿ ಎಲ್ಲ ಆರೋಪಗಳನ್ನು ತಳ್ಳಿಹಾಕಿ ಯಾವುದೇ ಸಂಬಂಧವಿಲ್ಲ ಎಂದು ಪ್ರಮಾಣ ಮಾಡಿದ್ದಾಳೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪತ್ನಿ ಅಲಿಗಢದಲ್ಲಿ ಇರುವ ತನ್ನ ಸೋದರಿ ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದಳು. ಆದರೆ ನಗರದಲ್ಲಿ ಸುತ್ತಾಡುತ್ತಿದ್ದಾಗ ಆಕಾಶ್ ಕುಮಾರ್ ಅವರಿಗೆ ಪತ್ನಿ ಮಹಿಮಾರಾಣಿ ನಿಖಿಲ್ ಜೊತೆಗೆ ಕಾಣಿಸಿಕೊಂಡಿದ್ದಾಳೆ. ಇದರಿಂದ ಅನುಮಾನಗೊಂಡ ಅವರು ಯಾರಿಗೂ ತಿಳಿಯದಂತೆ ಇಬ್ಬರನ್ನೂ ಹಿಂಬಾಲಿಸಿದ್ದಾರೆ.
ನಂತರ ಇಬ್ಬರೂ ಒಂದು ಹೋಟೆಲ್ಗೆ ಹೋಗಿ ಆಧಾರ್ ಕಾರ್ಡ್ ನೀಡಿ ಕೋಣೆ ಪಡೆದಿದ್ದಾರೆ. ಈ ವೇಳೆ ಆಕಾಶ್ ಕುಮಾರ್ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಆಕಾಶ್ ಕುಮಾರ್ ಹೇಳುವಂತೆ, ಇಬ್ಬರೂ ಹೋಟೆಲ್ನ 303ನೇ ಕೋಣೆಗೆ ಹೋಗಿದ್ದರು. ಪೊಲೀಸರು ಬಂದ ನಂತರ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಬಳಿಕ ಎಲ್ಲರೂ ಸೇರಿ ಕೋಣೆಯತ್ತ ತೆರಳಿದಾಗ ಇಬ್ಬರೂ ಹೊರಗೆ ಬಂದಿದ್ದಾರೆ.
ನಿಖಿಲ್ ಬಟ್ಟೆ ತೊಟ್ಟು ಹೊರಬಂದಿದ್ದಾನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ನಿಖಿಲ್ ಜೊತೆ ಹೊಸ ಜೀವನ ಆರಂಭಿಸಲು ಪತ್ನಿ ಯೋಜನೆ ರೂಪಿಸಿದ್ದಳು ಎಂದು ಆಕಾಶ್ ಕುಮಾರ್ ಆರೋಪಿಸಿದ್ದಾರೆ.
ಮದುವೆಯ ಸಮಯದಲ್ಲಿ 5 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದು, 15 ಲಕ್ಷ ರೂಪಾಯಿ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾಳೆ. ಆದರೆ ಯಾವುದೇ ಹಣ ನೀಡಿಲ್ಲ. ನಮ್ಮದು ಲವ್ ಮ್ಯಾರೇಜ್ ಎಂದು ಆಕಾಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
