Categories: Latest

ವಿಧವೆಗೆ ಸುಳ್ಳು ಪ್ರೀತಿಯ ಜಾಲ: ಲಕ್ಷಾಂತರ ರೂ. ವಂಚನೆ – ಮೋಸಗಾರನ ವಿರುದ್ಧ ಪ್ರಕರಣ ದಾಖಲು

ಯಾದಗಿರಿ: ಯುವಕನೊಬ್ಬ ವಿಧವೆಯೊಂದನ್ನು ಮದುವೆಯಾಗುವುದಾಗಿ ನಂಬಿಸಿ, ಪ್ರೀತಿಯ ನಾಟಕವಾಡಿ, ದೈಹಿಕ ಸಂಬಂಧ ಬೆಳೆಸಿ, ಆಕೆಯಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಸವಂತಪುರ ಗ್ರಾಮದಲ್ಲಿ ನಡೆದಿದೆ.

ವಿಧವೆಯ ಸಂಕಷ್ಟಕ್ಕೆ ನಕಲಿ ಸಹಾನುಭೂತಿ

ಬಸವಂತಪುರ ಗ್ರಾಮದ ಮಹಿಳೆ ಹತ್ತು ವರ್ಷಗಳ ಹಿಂದೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲ್ಲೂಕಿನ ಅಮೀನಾಪುರ ಗ್ರಾಮದ ಬಸನಗೌಡ ಎಂಬುವರಿಗೆ ವಿವಾಹವಾದರು. ಮದುವೆಯೊಂದೇ ವರ್ಷದಲ್ಲಿ ದಂಪತಿಗೆ ಗಂಡು ಮಗು ಜನಿಸಿತು. ಸಂಸಾರ ಸುಖವಾಗಿ ಸಾಗುತ್ತಿರುವಾಗಲೇ ಗಂಡ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದು, ಇದರಿಂದಾಗಿ ಆಕೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾದರು.

ಗಂಡನ ಅಗಲಿಕೆಯಿಂದ ತವರು ಮನೆಗೆ ಮರಳಿದ ಮಹಿಳೆ, ತಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಬ್ಬೆತುಮಕೂರಿನ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಸ್ವಾಮೀಜಿ ಆಕೆಗೆ ಸಾಂತ್ವನ ಹೇಳಿ ದೇವರ ಆಶೀರ್ವಾದ ಕೋರಿದರು. ಈ ಸಂದರ್ಭ ಅಬ್ಬೆತುಮಕೂರಿನ ಮಠದಲ್ಲಿ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಯಿತು.

ನಂಬಿಕೆ, ಪ್ರೇಮದ ನಾಟಕ ಮತ್ತು ಹಣ ವಂಚನೆ

ಮಾಳಪ್ಪ, ತನ್ನ ಸಿಹಿ ಮಾತುಗಳ ಮೂಲಕ ವಿಧವೆಯ ನಂಬಿಕೆ ಗೆಲ್ಲಲು ಪ್ರಾರಂಭಿಸಿದ. ‘‘ನೀನು ಏಕಾಕಿಯಾಗಿರುವೆ, ನಿನಗೆ ಗಂಡನ ಸ್ಥಾನ ನಾನು ಕೊಡುತ್ತೇನೆ. ನಾವಿಬ್ಬರೂ ಸಂತೋಷದಿಂದ ಸಂಸಾರ ಮಾಡೋಣ’’ ಎಂಬಂತೆ ಭರವಸೆ ನೀಡಿ ಪ್ರೀತಿಯ ನಾಟಕವಾಡಿದ. ಆತನ ಮಾತುಗಳಿಗೆ ಮರುಳಾದ ಮಹಿಳೆ, ತನ್ನ ತೆಲಂಗಾಣದಲ್ಲಿದ್ದ 4.5 ಎಕರೆ ಜಮೀನನ್ನು ಮಾರಾಟ ಮಾಡಿ, ಅಂದಾಜು 80 ಲಕ್ಷ ರೂ. ಹಣ ಪಡೆದರು.

ಆ ಹಣವನ್ನು ಮಾಳಪ್ಪ ಸ್ವತಃ ತೆಗೆದುಕೊಂಡು, ಜೊತೆಗೆ ಮಹಿಳೆಯ ಹಳೆಯ ಆಸ್ತಿ, ಬಂಗಾರಗಳನ್ನು ಸಹ ಮಾರಿಸಿ ಹಣವನ್ನೂ ಲೂಟಿ ಮಾಡಿದ್ದಾನೆ. ಈ ಎಲ್ಲ ವಂಚನೆಯ ನಂತರ ಮಾಳಪ್ಪ ಹೆಜ್ಜೆಹಾಕಿದ್ದು, ಮಹಿಳೆಯನ್ನು ನಿರಾಶೆಗೊಳಿಸಿದ.

ಪೋಲಿಸರಿಗೆ ದೂರು – ನ್ಯಾಯಕ್ಕಾಗಿ ಧರಣಿ

ನ್ಯಾಯಕ್ಕಾಗಿ ಮಹಿಳೆ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ. ನ್ಯಾಯ ಪಡೆಯದೇ ಹಿಂತಿರುಗುವುದಿಲ್ಲವೆಂದು ಮಹಿಳೆ ಯಾದಗಿರಿ ಎಸ್‌ಪಿ ಕಚೇರಿ ಎದುರು ಧರಣಿ ನಡೆಸಿದ್ದಾಳೆ. ‘‘ನ್ಯಾಯ ಸಿಗದಿದ್ದರೆ ಡಿಸೇಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’’ ಎಂದು ಎಚ್ಚರಿಸಿದ್ದಾಳೆ.

ಈ ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ. ವಂಚಿತ ಮಹಿಳೆಗೆ ನ್ಯಾಯ ದೊರೆಯಲು ಸ್ಥಳೀಯರು ಸಹ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

1 hour ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

6 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

7 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

7 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

7 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

7 hours ago