ಬೆಂಗಳೂರು: ನಗರದಲ್ಲಿ ಆಟೋ ಚಾಲಕರಿಗೆ ಸಾರ್ವಜನಿಕ ಖಾಸಗಿ ಕಂಪನಿಗಳ ಜಾಹೀರಾತುಗಳನ್ನಾ ಆಟೋಗಳ ಹಿಂಭಾಗದಲ್ಲಿ ಅಂಟಿಸುವುದು ಇನ್ನುಮೇಲೆ ದಂಡನೀಯ ಅಪರಾಧವಾಗಲಿದೆ. ನಿಯಮಿತ ಅನುಮತಿ ಇಲ್ಲದೆ ಜಾಹೀರಾತು ಹಾಕಿರುವ ಚಾಲಕರ ಮೇಲೆ ಸಾರಿಗೆ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರದಲ್ಲಿ ಹಲವು ಆಟೋಗಳಲ್ಲಿ “ಪ್ಲೇ ಗೇಮ್, ಶಾಪಿಂಗ್ ಆಪ್, ಇನ್ಸ್ಟಿಟ್ಯೂಟ್” ಮುಂತಾದ ಜಾಹೀರಾತು ಪೋಸ್ಟರ್ಗಳನ್ನು ಹಿಂಭಾಗದ ಗಾಜಿನಲ್ಲಿ ಅಥವಾ ಮೈದೆಯಲ್ಲಿ ಅಂಟಿಸಿಕೊಂಡು ಓಡಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಇಲಾಖೆ, ಕೆಲವೇ ದಿನಗಳಲ್ಲಿ ಹಲವು ಆಟೋಗಳಿಗೆ ದಂಡ ವಿಧಿಸಿದೆ.
ನಿಯಮದ ಪ್ರಕಾರ:
ಆಟೋಗಳಲ್ಲಿ ಜಾಹೀರಾತು ಪ್ರದರ್ಶಿಸಲು ಸರ್ಕಾರದಿಂದ ವಾರ್ಷಿಕ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಆಟೋ ಚಾಲಕರು ವರ್ಷಕ್ಕೆ ₹5000 ರೂ. ಹಣವನ್ನು ತೆರಲಾಗುತ್ತದೆ. ಅನುಮತಿ ಇಲ್ಲದೆ ಜಾಹೀರಾತು ಹಾಕುವುದು ನಿಯಮ ಉಲ್ಲಂಘನೆಗೆ ಸಮಾನ, ಮತ್ತು ಇದರಿಂದ ಸಾರ್ವಜನಿಕ ವಾಹನದ ನಿಟ್ಟಿನಲ್ಲಿ ಸುರಕ್ಷತೆಗೂ ಧಕ್ಕೆಯಾಗುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆ ಎಚ್ಚರಿಕೆ:
“ಯಾರೇ ಆಟೋ ಚಾಲಕರು ನಿರ್ಬಂಧವಿಲ್ಲದೆ ತಮ್ಮ ವಾಹನಗಳಲ್ಲಿ ಜಾಹೀರಾತುಗಳನ್ನು ಅಂಟಿಸಿಕೊಂಡು ಓಡಾಡಿದರೆ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿದೆ. ಕಾನೂನನ್ನು ಮೀರಿ ಹಣದ ಆಸೆಗಾಗಿ ಜಾಹೀರಾತು ಹಾಕುವುದು ಗೌರವಯುತ ವ್ಯವಹಾರವಲ್ಲ,” ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
