Latest

ವಿ.ವಿ.ಪುರಂ ಪೊಲೀಸರಿಂದ ಸ್ವತ್ತು ಕಳುವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರ ವಶ.

ದಿನಾಂಕ: ೧೭/೦೬/೨೦೨೨ ರಂದು ಬೆಳಿಗ್ಗೆ ವಿ.ವಿ.ಪುರಂ ಠಾಣಾ ಪೊಲೀಸ್ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಯಾದವಗಿರಿಯ ಬ್ರಿಡ್ಞ್ ಬಳಿ ಶುಭೋದಯ ಪಾಯಿಂಟ್ ಕರ್ತವ್ಯದಲ್ಲಿದ್ದಾಗ, ನಂಬರ್ ಪ್ಲೇಟ್ ಇಲ್ಲದ ಒಂದು ಸ್ಕೂಟರ್‌ನಲ್ಲಿ ಬಂದ ೦೩ ಜನ ಬಾಲಕರನ್ನು ನಿಲ್ಲಿಸಿ ಪ್ರಶ್ನಿಸಲಾಗಿ ಸಮಂಜಸವಾದ ಉತ್ತರವನ್ನು ನೀಡದಿದ್ದಾಗ ಅನುಮಾನ ಬಂದು ವಾಹನವನ್ನು ಪರಿಶೀಲಿಸಲಾಗಿ ಸದರಿ ದ್ವಿಚಕ್ರ ವಾಹನವು ಠಾಣೆಯಲ್ಲಿ ದಾಖಲಾಗಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದ್ದರಿಂದ ಸದರಿಯವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಬಾಲಕರು ಮೈಸೂರು ನಗರ ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಸದರಿ ಕಾನೂನಿನ ಸಂಘರ್ಷಕ್ಕೆ ಒಳಗಾದ ೦೩ ಬಾಲಕರನ್ನು ವಶಕ್ಕೆ ಪಡೆದು, ಇವರಿಂದ ರೂ ೩,೨೫,೦೦೦/- ಬೆಲೆ ಬಾಳುವ ೫ ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆಯ-೦೧, ನರಸಿಂಹರಾಜ ಪೊಲೀಸ್ ಠಾಣೆಯ-೦೨, ಉದಯಗಿರಿ ಪೊಲೀಸ್ ಠಾಣೆಯ-೦೧ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯ-೦೧ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎ.ಸಿ.ಪಿ ರವರಾದ ಶ್ರೀ ಶಿವಶಂಕರ್ ರವರ ಉಸ್ತುವಾರಿಯಲ್ಲಿ ವಿ.ವಿ.ಪುರಂ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜಯಕುಮಾರ. ಎನ್ ಪಿ.ಎಸ್.ಐ ಶ್ರೀ. ಲೇಪಾಕ್ಷ. ಕೆ, ಎ.ಎಸ್.ಐ ಸಿದ್ದರಾಜು.ಹೆಚ್. ಸಿಬ್ಬಂದಿಗಳಾದ ರವಿಗೌಡ. ಎಸ್, ಚಾಮುಂಡಮ್ಮ, ಮಹೇಶ.ಎಸ್, ಪರಶುರಾಮ ರಾಠೋಡ, ಈರಣ್ಣ ಎನ್.ವಿ, ಉಮೇಶ ರವರುಗಳು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಶಿಕ್ಷಕಿಯ ಪ್ರೀತಿ ನಿರಾಕರಣೆ: ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ

ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…

6 days ago

ರೈಲಿನ ಶೌಚಾಲಯದಲ್ಲಿ ರೋಮ್ಯಾನ್ಸ್! ಯುವಕ ಯುವತಿಯ ವಿಡಿಯೋ ವೈರಲ್

ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…

6 days ago

ಚಿತ್ರದಲ್ಲಿ ಡ್ರಗ್ ಪೆಡ್ಲರ್ ಪಾತ್ರ, ವಾಸ್ತವದಲ್ಲೂ ಮಾದಕ ದಂಧೆ – ವಿದೇಶಿ ನಟನ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…

6 days ago

ಅಫ್ಘಾನಿಸ್ತಾನದಲ್ಲಿ ಬಸ್ ಅಪಘಾತ: 71 ಸಾವು, 17 ಮಕ್ಕಳು ಬಲಿಯಾದ ದುರಂತ

ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

6 days ago

ಇನ್‌ಸ್ಟಾಗ್ರಾಂ ಪರಿಚಯ ದುರಂತ: ಬಿಜ್ನೋರ್‌ನಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…

7 days ago

“ಸುಪ್ರೀಂ ತೀರ್ಪಿಗೆ ಬೇಸರಗೊಂಡ ಪ್ರಾಣಿ ಪ್ರೇಮಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ದಾಳಿ”

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ…

7 days ago