Crime

ಮಾಟ ಮಂತ್ರ ಪರಿಹಾರದ ಹೆಸರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ, ಹಣ ವಂಚಿಸಿದ ಉಸ್ತಾದ್ ಅಬ್ದುಲ್ ಕರೀಮ್ ಬಂಧನ

ಮಂಗಳೂರು: ಮಾಟ ಮಂತ್ರ ಮಾಡಲಾಗಿದೆ ಎಂಬ ಭಯ ಮೂಡಿಸಿ, ಅದರಿಂದ ಪರಿಹಾರ ನೀಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಲ್ಲದೇ, ಲಕ್ಷ ರೂಪಾಯಿಗೂ ಹೆಚ್ಚು ಹಣ ವಂಚಿಸಿದ ಆರೋಪದ ಮೇಲೆ ಮಂಗಳೂರು ಮಹಿಳಾ ಠಾಣೆ ಪೊಲೀಸರು ಗುರುವಾಯನಕೆರೆಯ ಜಿ. ಅಬ್ದುಲ್ ಕರೀಮ್ ಎಂಬಾತನನ್ನು ಬಂಧಿಸಿದ್ದಾರೆ.

2022ರಲ್ಲಿ ಮನೋವೈಕಲ್ಯದಿಂದ ಬಳಲುತ್ತಿದ್ದ ಮಹಿಳೆ, ತಮ್ಮ ಅಕ್ಕನ ಗಂಡನ ಸಲಹೆಯಂತೆ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಬಳಿ ಹೋಗಿದ್ದರು. ಕರೀಮ್, “ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ನಿವಾರಣೆ ಮಾಡಬೇಕು” ಎಂದು ಹೆದರಿಸಿ, ತನ್ನ ಬಳಿ ಚಿಕಿತ್ಸೆ ಪಡೆಯುವಂತೆ ಹೇಳಿದ್ದ.

ಮಾಹಿತಿಯಂತೆ, ಪರಿಹಾರದ ನೆಪದಲ್ಲಿ ಕರೀಮ್ ಆ ಮಹಿಳೆಯನ್ನು ಮರುಮರು ತನ್ನ ಮನೆಗೆ ಬರುವಂತೆ ಮಾಡಿದ. ಪ್ರಾರಂಭದಲ್ಲಿ ಕುರ್‌ಆನ್ ಓದುತ್ತಿದ್ದ ಅಬ್ದುಲ್, ಸಮಯಾವಕಾಶ ನೋಡಿಕೊಂಡು ಮಹಿಳೆಗೆ ದೈಹಿಕ ಕಿರುಕುಳ ನೀಡಿದ. 2022ರ ಫೆಬ್ರವರಿ 10ರಂದು ಮಹಿಳೆ ಒಬ್ಬಳೇ ಕರೀಮ್ ನ ಮನೆಗೆ ಹೋದ ಸಂದರ್ಭದಲ್ಲಿ, ಕರೀಮ್ ಕುರ್‌ಆನ್ ಓದಿ ಆಕೆಯ ಮೇಲೆ ಕೈ ಹಾಕಿ ಅವಾಚ್ಯವಾಗಿ ವರ್ತಿಸಿದ್ದಾನೆ.

ಇಲ್ಲದೆ, ಚಿಕಿತ್ಸೆಗಾಗಿ ಹಣ ಬೇಕೆಂದು ಹೇಳಿ, ಹಂತ ಹಂತವಾಗಿ ಆಕೆಯಿಂದ 1 ಲಕ್ಷಕ್ಕೂ ಹೆಚ್ಚು ರೂಪಾಯಿ ಪಡೆದುಕೊಂಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಶೈಲಿಯಲ್ಲಿ ಕರೀಮ್ ಹಲವಾರು ಮಂದಿಗೆ ಮಾಟ ಮಂತ್ರ ಪರಿಹಾರದ ನಂಬಿಕೆ ಮೂಡಿಸಿ ಹಣ ಪಡೆದು ಮೋಸಮಾಡಿರುವ ಬಗ್ಗೆವೂ ಮಾಹಿತಿ ಲಭಿಸಿವೆ. ಮೌಢ್ಯ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು, ಆತ ಹಲವರ ಭಾವನೆಗಳ ಜೊತೆ ಆಟವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

nazeer ahamad

Recent Posts

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

3 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

3 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

3 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

4 hours ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

4 hours ago