ನವದೆಹಲಿ: 2022ರ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆಧಾರಿತವಾಗಿ ನಿರ್ಮಿತವಾಗಿರುವ ಉದಯಪುರ ಫೈಲ್ಸ್ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ವಿಧಿಸಿದೆ. ಈ ಹಿನ್ನೆಲೆ ಕನ್ಹಯ್ಯಾ ಲಾಲ್ ಅವರ ಪತ್ನಿ ಜಶೋದಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಿತ್ರ ಬಿಡುಗಡೆಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಜಶೋದಾ ಅವರು ಪತ್ರದಲ್ಲಿ, ಕೆಲವು ಮುಸ್ಲಿಂ ಸಂಘಟನೆಗಳು ಹಾಗೂ ನ್ಯಾಯಾಂಗದ ವಕೀಲರು ಈ ಸಿನಿಮಾವನ್ನು ತಡೆಯಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದ್ದಾರೆ. “ಈ ಸಿನಿಮಾ ನನ್ನ ಪತಿಗೆ ನ್ಯಾಯ ನೀಡುವ ಪ್ರಯತ್ನವಾಗಿದೆ. ಆದರೆ ಅದನ್ನು ತಡೆಯುವ ಮೂಲಕ ನನಗೆ ಮತ್ತೊಮ್ಮೆ ನೋವುಂಟಾಗುತ್ತಿದೆ,” ಎಂದು ಅವರು ಪತ್ರದಲ್ಲಿ ಕಣ್ಣೀರಾಗಿದ್ದಾರೆ.
ಈ ಪ್ರಕರಣದ ಹಿನ್ನೆಲೆ 2022ರಲ್ಲಿದೆ. ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯ ನಂತರ, ಬಿಜೆಪಿ ಅವರನ್ನು ಉಚ್ಛಾಟಿಸಿತ್ತು. ಆದರೆ ಕನ್ಹಯ್ಯಾ ಲಾಲ್ ಅವರು ನೂಪುರ್ ಶರ್ಮಾವನ್ನು ಸಾಮಾಜಿಕ ಜಾಲತಾಣದ ಮೂಲಕ ಬೆಂಬಲಿಸಿದ್ದಕ್ಕೆ ಆಕ್ರೋಶಗೊಂಡ ಇಬ್ಬರು—ಮೋಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್—ಅವರು ಕನ್ಹಯ್ಯಾ ಲಾಲ್ ಅವರ ಶಿರಚ್ಛೇದನ ಮಾಡಿದ್ದರು.
ಈ ಭೀಕರ ಘಟನೆಯ ಹಿನ್ನೆಲೆಯನ್ನೇ ಆಧಾರವಿಟ್ಟುಕೊಂಡು ‘ಉದಯಪುರ ಫೈಲ್ಸ್’ ಎಂಬ ಹೆಸರಿನಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಈ ಚಿತ್ರವು ಕೊಲೆಯ ಹಿಂದಿನ ಯಥಾರ್ಥವನ್ನು ಬಹಿರಂಗಪಡಿಸುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಆದರೆ, ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ವ್ಯಕ್ತಿಗಳು ಚಿತ್ರದಲ್ಲಿ ವಿಶಿಷ್ಟ ಸಮುದಾಯವನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಕನ್ಹಯ್ಯಾ ಲಾಲ್ ಪತ್ನಿಯ ಮನವಿ ಪ್ರಧಾನಮಂತ್ರಿ ಗಮನ ಸೆಳೆದಿದ್ದು, ಚಿತ್ರ ಬಿಡುಗಡೆಗೆ ಸರ್ಕಾರ ಬೆಂಬಲ ನೀಡುತ್ತದೆಯೇ ಎಂಬ ನಿರೀಕ್ಷೆ ಮುಂದಿದೆ.
ಮಂಡ್ಯ, ಜುಲೈ 31: "ನಟ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿತನದ ಮೂಲಕ ಕೆಟ್ಟ ಕಾಮೆಂಟ್‌ಗಳು ಮಾಡುತ್ತಿರುವುದು ಅನಾವಶ್ಯಕ.…
ಯಾದಗಿರಿ: ಪ್ರಯಾಣಿಕರ ಪಯಣಕ್ಕೆ ಅವಶ್ಯಕವಾದ ಟಿಕೆಟ್ ನೀಡದೆ, ಸಾರ್ವಜನಿಕ ಸೇವೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಘಟನೆಯೊಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ…
ಪಾಟ್ನಾ, ಜುಲೈ 31 – ಬಿಹಾರ ರಾಜಧಾನಿ ಪಾಟ್ನಾದ ಜಾನಿಪುರ ಪ್ರದೇಶದಲ್ಲಿ ನಡೆದಿರುವ ಒಂದು ಕ್ರೂರ ಮತ್ತು ಮನುಷ್ಯತ್ವವಿರೋಧಿ ಘಟನೆ…
ಚೆನ್ನೈ: ಕಲಾವಿದರ ಜಗತ್ತಿನಲ್ಲಿ ಒಂದು ದುಃಖದ ಸುದ್ದಿ – ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್…
ತುಮಕೂರು: ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಎನ್ನುವವನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿ, “ನಾನು 10 ಸಾವಿರ ರೂಪಾಯಿ ಕೊಡ್ತೀನಿ, ಬಾ”…
ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…