Latest

ಪೊಲೀಸ್ ಜೀಪ್ ನೋಡಿ ಎಸ್ಕೇಪ್ ಆಗಲು ಹೋದ ಇಬ್ಬರು ಖದೀಮರು; 7,55,000/-ರೂ. ಮೌಲ್ಯದ 08 ದ್ವಿಚಕ್ರ ವಾಹನಗಳು ಪೊಲೀಸ್ ವಶಕ್ಕೆ.

ಮಾಲೂರು : ದಿನಾಂಕ:28-01-2025 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮಾಲೂರು ಠಾಣಾ ಪಿ.ಎಸ್.ಐ. ಶ್ರೀಮತಿ ಗೀತಮ್ಮ, ಮತ್ತು ಅವರ ತಂಡದವರದ ಕೋದಂಡಪಾಣಿ, ಅನಂತಮೂರ್ತಿ ರವರು ಮಾಲೂರು ಟೌನ್ ನ ಹೊಸೂರು ರಸ್ತೆಯ ಇಂದಿರಾನಗರದ ಕ್ರಾಸ್ ನ ಬಳಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಆಸಾಮಿಗಳು ಹೊಸೂರು ರಸ್ತೆಯಿಂದ ಮಾಲೂರು ಟೌನ್ ಕಡೆಗೆ ಒಂದು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ಅನ್ನು ನೋಡಿ ಪುನಃ ವಾಪಸ್ಸು ಹೋಗಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಅನುಮಾನ ಬಂದು ಸದರಿ ಆಸಾಮಿಗಳಿಬ್ಬರನ್ನು ಮತ್ತು ಪಲ್ಸರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಕೂಲಂಕುಶವಾಗಿ ಆಸಾಮಿಗಳನ್ನು ಅವರ ಹೆಸರು ಮತ್ತು ವಿಳಾಸದ ಬಗ್ಗೆ ಹಾಗೂ ಅವರ ವಶದಲ್ಲಿದ್ದ ಪಲ್ಸರ್ ದ್ವಿಚಕ್ರ ವಾಹನದ ಬಗ್ಗೆ ವಿಚಾರಣೆ ಮಾಡಲಾಗಿ

1) ಅಜಯ್ ಜಿ, ಬಿನ್. ಲೇಟ್ ಗೋಪಾಲ್, 21 ವರ್ಷ, ಟ್ರೋಲೇಕ್ಸ್ ಎಂಬ ಖಾಸಗಿ ಕಂಪನಿಯಲ್ಲಿಕೆಲಸ, ವಾಸ:2ನೇ ಮಹಡಿ, ಮಾರೆಮ್ಮ ದೇವಾಲಯದ ಬಳಿ, 2ನೇ ಬೀದಿ, ಪಾರ್ವತಿನಗರ, ಹೆಬ್ಬಗೋಡಿ, ಬೆಂಗಳೂರು ನಗರ.

2) ಕೊನೇಟಿ ಪೌಲು ರಾಜ್ @ ಪೌಲ್ ರಾಜ್ @ ರಾಜು ಬಿನ್. ಲೇಟ್ ನಾರಾಯಣ, 27 ವರ್ಷ, ಗಾರೆ ಕೆಲಸ, ಹಾಲಿ ವಾಸ: 5ನೇ ಮನೆ, 3ನೇ ಲೈನ್, ರೈಲ್ ಪೇಟೆ, ಕದಿರಿ ಟೌನ್, (ಶ್ರೀ ಸತ್ಯಸಾಯಿ)ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ ರಾಜ್ಯ. ಸ್ವಂತ ವಿಳಾಸ:ನಂ-131, ರಾಮ್ ನಗರ್, ಪಿರಾಲಾ, ಚಿರಾಲಾ ಟೌನ್, ಪ್ರಕಾಶಂ ಜಿಲ್ಲೆ, ಆಂದ್ರಪ್ರದೇಶ. ಆಗಿದ್ದು ಆರೋಫಿತರು ನೀಡಿದ ಮಾಹಿತಿಯ ಮೇರೆಗೆ ಆರೋಪಿತರು ಮಾಲೂರು, ಬೆಂಗಳೂರು, ಬೇರಕಿ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿ ಅವರ ವಶದಲ್ಲಿದ್ದ ಒಟ್ಟು 8 ವಿವಿಧ ರೀತಿಯ

1) KA-08 Y-0616 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
2) TN.-24 AB-7845 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
3) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್
4) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಆರ್.ಎಕ್ಸ್ .ಜಡ್ ಯಮಹಾ ಕಂಪನಿಯ ಬೈಕ್
5 )KA 51 EZ-1150 ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರ ವಾಹನ
6) KA 05 EZ-4116 ಟಿ.ವಿ.ಎಸ್. ಎಕ್ಸ್. ಎಲ್. ದ್ವಿಚಕ್ರ ವಾಹನ
7) KA-51 JC-2883
8) KA – 08 V-7306 ಬಜಾಜ್ ಪಲ್ಸರ್ 150 ಡಿ.ಟಿ.ಎಸ್. ದ್ವಿಚಕ್ರ ವಾಹನ ಸೇರಿ ಒಟ್ಟು 755000/-ರೂಗಳ ಮೌಲ್ಯದ ಬೆಲೆ ಬಾಳುವ ಮೇಲ್ಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಎಂ. ಹೆಚ್. ನಾಗ್ಲೆ, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೀತಮ್ಮ, ವರಲಕ್ಷ್ಮಮ್ಮ, ಮತ್ತು ಎ.ಎಸ್.ಐ. ಮುನೇಗೌಡ, ವೆಂಕಟೇಶ್, ಅಪರಾಧ ವಿಭಾಗದ ಸಿಬ್ಬಂದಿ ಕೋದಂಡಪಾಣಿ, ಅನಂತಮೂರ್ತಿ, ಅಶೋಕ್, ಅನಂತ್, ಕಾನ್ಸ್ ಟೇಬಲ್ ಮೋಹನ್, ವೆಂಕಟೇಶಪ್ಪ, ರಾಜೇಂದ್ರಪ್ರಸಾದ್, ಮಾಂತೇಶ್ ಮಡಿಕೇಶ್ವರ, ಮುನಿಕೃಷ್ಣಪ್ಪ, ನವೀನ್, ನವೀನ್ ಕುಮಾರ್ ಹಾಗೂ ಗೃಹರಕ್ಷಕ ಸಿಬ್ಬಂದಿಯವರಾದ ಕುಮಾರ್ ಹಾಗೂ ಹನುಮಂತಪ್ಪ ರವರ ತಂಡ ಭಾಗವಹಿಸಿದ್ದಾರೆ.

ಈ ಕಾರ್ಯಾಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago