
ಚಾಮರಾಜನಗರ: ರಕ್ತಚಂದನ ಸಾಗಾಟಕ್ಕೆ ಸಿನಿಮಾವನ್ನು ನೆನಪಿಸುವಂತಹ ಶೈಲಿಯನ್ನು ಅನುಸರಿಸಿದ ಇಬ್ಬರು ವ್ಯಕ್ತಿಗಳನ್ನು ಸಿಐಡಿ ಫಾರೆಸ್ಟ್ ಸೆಲ್ ಅಧಿಕಾರಿಗಳು ಬಂಧಿಸಿದ್ದಾರೆ.
ಕೊಳ್ಲೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ನಡೆದ ದಾಳಿಯಲ್ಲಿ ತಬ್ರೇಜ್ ಖಾನ್ ಮತ್ತು ಸಾದಿಕ್ ಪಾಷಾ ಎಂಬವರನ್ನು ಪೊಲೀಸರು ಅಟ್ಟಹಾಸಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಬಳಸುತ್ತಿದ್ದ ಟಾಟಾ ಸುಮೋ ವಾಹನವನ್ನು ವಿಶೇಷವಾಗಿ ಅಲ್ಟರ್ ಮಾಡಿ, ಹಿಂಬದಿ ಸೀಟ್ ಕೆಳಗೆ ಖಾಲಿ ಜಾಗ ಸೃಷ್ಟಿಸಿ, ಅದರಲ್ಲಿ ರಕ್ತಚಂದನ ತುಂಡುಗಳನ್ನು ಅಡಗಿಸಿ ಸಾಗಿಸುತ್ತಿದ್ದರು. ಯಾವುದೇ ಅನುಮಾನ ಮೂಡದಂತೆ ಈ ತಂತ್ರವನ್ನು ಬಳಸಿಕೊಂಡಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತರಿಂದ 205 ಕೆ.ಜಿ ತೂಕದ 28 ರಕ್ತಚಂದನ ತುಂಡುಗಳು ಹಾಗೂ ಒಂದು ಟಾಟಾ ಸುಮೋ ವಾಹನ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸುತ್ತಿದ್ದು, ಈ ಕಳ್ಳ ಸಾಗಾಟದ ಹಿನ್ನಲೆಯಲ್ಲಿ ಇನ್ನೂ ಯಾರು ಸಂಪರ್ಕದಲ್ಲಿದ್ದಾರೆ ಎಂಬುದರ ಸುಳಿವು ಹುಡುಕುತ್ತಿದ್ದಾರೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392