ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಪ್ರೇಮಿಗಳಿಬ್ಬರ ಆತ್ಮಹತ್ಯೆ ಪ್ರಕರಣವು ಹೃದಯವಿದ್ರಾವಕ ಘಟನೆಯಾಗಿ ಬೆಳಕಿಗೆ ಬಂದಿದೆ. ಮದುವೆ ವಿಚಾರದಲ್ಲಿ ಮನೆಯವರ ವಿರೋಧ ಎದುರಾದ ಹಿನ್ನೆಲೆ ಪ್ರೇಮಿಗಳ ನಡುವೆ ಉಂಟಾದ ಗಲಾಟೆ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮೃತ ಯುವತಿಯನ್ನು ಪವಿತ್ರಾ ರಾಜಶೇಖರ ಒಂಟಿ (19) ಎಂದು ಗುರುತಿಸಲಾಗಿದ್ದು, ಮನನೊಂದ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದು ಭಯಗೊಂಡ ಪ್ರಿಯಕರ ಕಾರ್ತಿಕ್ ಚನ್ನಪ್ಪ ನಾಯಕ (21) ಕೂಡ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ನಡುವೆ ಮೊದಲು ನಡೆದ ಗಲಾಟೆಯೇ ಈ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಯುವತಿಯ ಪಾಲಕರಿಂದ ದೊರೆಯುವ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

Related News

error: Content is protected !!