ಚಳ್ಳಕೆರೆ: ಬೇಸಿಗೆ ರಜೆಯನ್ನು ಗೆಳೆಯರ ಜೊತೆ ಕಳೆಯಲು ಹೋದ 16 ವರ್ಷದ ಬಾಲಕನು ಈಜಲು ಹೋದ ಬಾವಿಯಲ್ಲಿ ನಾಪತ್ತೆಯಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮದಲ್ಲಿ ನಡೆದಿದೆ.
ನೇರಲಗುಂಟೆ ನಿವಾಸಿ ತಿಪ್ಪೇಸ್ವಾಮಿ ಅವರ ಪುತ್ರ ಸೂರ್ಯ ಪ್ರಕಾಶ ಎಂಬವನು, ಚಳ್ಳಕೆರೆ ಪಟ್ಟಣದ ಮಾಕಂಸ್ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ. ಈ ಹಿನ್ನೆಲೆಯಲ್ಲಿ, ಶನಿವಾರ ತನ್ನ ಸ್ನೇಹಿತರೊಂದಿಗೆ ಗ್ರಾಮದಲ್ಲಿರುವ ಕೆರೆಯ ಹಿಂಭಾಗದ ಬಾವಿಗೆ ಈಜಲು ತೆರಳಿದ್ದನು.
ಈ ವೇಳೆ ಅನಿವಾರ್ಯವಾಗಿ ಬಾವಿಗೆ ಬಿದ್ದ ಸೂರ್ಯ ಪ್ರಕಾಶನನ್ನು ಮಿತ್ತಲಿಂದಲೇ ಹುಡುಕಲು ಪ್ರಯತ್ನಿಸಿದರೂ ವಿಫಲವಾಗಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ…
ಬೆಂಗಳೂರು: ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿಯಾಗಿ ಪರಿಗಣಿಸಲ್ಪಡುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಿಂದ ಕಂಗೆಡಿಸಿದೆ. ಈ ನಡುವೆ ಮತ್ತೊಂದು…
ಬೆಂಗಳೂರು, ಮೇ 3: ತಂತ್ರಜ್ಞಾನ ನಗರಿ ಬೆಂಗಳೂರಿಗೆ ಇದೀಗ ಕ್ರೈಂ ಸಿಟಿ ಎಂಬ ಬಿರುದೂ ಜೋಡಿಸುತ್ತಿರುವಂತಾಗಿದೆ. ನೈಸ್ ರಸ್ತೆಯ ಸಮೀಪ…
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ 9ನೇ ಮುಖ್ಯ ರಸ್ತೆಯಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆದ ಆಯಂಬುಲೆನ್ಸ್‍ವೊಂದು ತರಕಾರಿ…
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ತಲವಾರು ತೋರಿಸಿ ಇಬ್ಬರು ನಾಗರಿಕರನ್ನು ಬೆದರಿಸಿರುವ ಘಟನೆ ವರದಿಯಾಗಿದೆ. ಸಂಘಪರಿವಾರದ ಕಾರ್ಯಕರ್ತ…
ಬೆಂಗಳೂರು: ನಗರದ ಟಿ. ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡು ರಸ್ತೆಯಲ್ಲೇ ಯುವತಿಯೊಬ್ಬರ ಕೈ ಹಿಡಿದು ಕಿರುಕುಳ ನೀಡಿದ ಯುವಕನ ವಿರುದ್ದ…