ಚಳ್ಳಕೆರೆ: ಬೇಸಿಗೆ ರಜೆಯನ್ನು ಗೆಳೆಯರ ಜೊತೆ ಕಳೆಯಲು ಹೋದ 16 ವರ್ಷದ ಬಾಲಕನು ಈಜಲು ಹೋದ ಬಾವಿಯಲ್ಲಿ ನಾಪತ್ತೆಯಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮದಲ್ಲಿ ನಡೆದಿದೆ.

ನೇರಲಗುಂಟೆ ನಿವಾಸಿ ತಿಪ್ಪೇಸ್ವಾಮಿ ಅವರ ಪುತ್ರ ಸೂರ್ಯ ಪ್ರಕಾಶ ಎಂಬವನು, ಚಳ್ಳಕೆರೆ ಪಟ್ಟಣದ ಮಾಕಂಸ್ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ. ಈ ಹಿನ್ನೆಲೆಯಲ್ಲಿ, ಶನಿವಾರ ತನ್ನ ಸ್ನೇಹಿತರೊಂದಿಗೆ ಗ್ರಾಮದಲ್ಲಿರುವ ಕೆರೆಯ ಹಿಂಭಾಗದ ಬಾವಿಗೆ ಈಜಲು ತೆರಳಿದ್ದನು.

ಈ ವೇಳೆ ಅನಿವಾರ್ಯವಾಗಿ ಬಾವಿಗೆ ಬಿದ್ದ ಸೂರ್ಯ ಪ್ರಕಾಶನನ್ನು ಮಿತ್ತಲಿಂದಲೇ ಹುಡುಕಲು ಪ್ರಯತ್ನಿಸಿದರೂ ವಿಫಲವಾಗಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

error: Content is protected !!