ಚೆನ್ನೈ: ಪಾ. ರಂಜಿತ್ ನಿರ್ದೇಶನದಲ್ಲಿ ನಟ ಆರ್ಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಹೊಸ ಚಿತ್ರವೊಂದರ ಚಿತ್ರೀಕರಣದ ವೇಳೆ ಭೀಕರ ದುರಂತ ಸಂಭವಿಸಿದ್ದು, ಪ್ರಸಿದ್ಧ ಸ್ಟಂಟ್ಮ್ಯಾನ್ ರಾಜು ಅವರು ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ಶೂಟಿಂಗ್ ಸೆಟ್ನಲ್ಲಿ ನಡೆದಿದೆ. ಚಿತ್ರೀಕರಣದ ಭಾಗವಾಗಿ ಕಾರು ಉರುಳಿಸುವ ಅಪಾಯಕಾರಿ ಸಾಹಸದ ದೃಶ್ಯವೊಂದನ್ನು ಚಿತ್ರಿಸಲು ನಿರ್ಧರಿಸಲಾಗಿತ್ತು. ಈ ದೃಶ್ಯದ ವೇಳೆ ಕೇವಲ ಸೆಕೆಂಡುಗಳ ವ್ಯತ್ಯಾನದಲ್ಲಿ ನಿಯಂತ್ರಣ ತಪ್ಪಿದ ಕಾರು ತೀವ್ರವಾಗಿ ಉರುಳಿ ರಾಜು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸ್ಥಾನದಲ್ಲಿಯೇ ಕೊನೆಯುಸಿರೆಳೆದರು.

ಈ ದುಃಖದ ಸುದ್ದಿ ಹಿಂದೂ ಸಿನಿಮಾ ಇಂಡಸ್ಟ್ರಿಯಲ್ಲಿ ಆಘಾತ ತರಿಸಿದೆ. ನಟ ವಿಶಾಲ್ ಅವರು ತಮ್ಮ ಆಪ್ತರಾಗಿದ್ದ ರಾಜು ಅವರ ಸಾವು ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಇಂದು ಬೆಳಗ್ಗೆ ಈ ಸುದ್ದಿ ಕೇಳಿ ಶಾಕ್‌ನಲ್ಲಿದ್ದೇನೆ. ರಾಜು ನನ್ನ ಅನೇಕ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಮಾಡಿದ್ದರು. ಅವರು ಧೈರ್ಯವಂತರು, ನಿಷ್ಠಾವಂತರು ಮತ್ತು ತಮ್ಮ ಕೆಲಸದ ಬಗ್ಗೆ ಅಪಾರವಾದ ಬದ್ಧತೆ ಹೊಂದಿದ್ದರು. ಈ ನಷ್ಟವನ್ನು ಸಹಿಸಲಾರದೆ ಇದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ರಾಜು ಅವರು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಹಲವು ಪ್ರಮುಖ ಚಿತ್ರಗಳಿಗಾಗಿ ಸಾಹಸ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ, ಸಾಹಸ ಮತ್ತು ನಿಭಾಯಿಸಿದ ಅಪಾಯಕಾರಿ ದೃಶ್ಯಗಳು ಅವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದವು.

ಚಿತ್ರರಂಗದಲ್ಲಿ ಸುರಕ್ಷತೆ ವಿಷಯವಾಗಿ ಮತ್ತೊಮ್ಮೆ ಚರ್ಚೆ ನಡೆಯುತ್ತಿರುವ ಈ ಘಟನೆ, ಸ್ಟಂಟ್ ಕಲಾವಿದರ ಜೀವದ ಅಪಾಯದ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ರಾಜು ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

error: Content is protected !!