ಅಮೆರಿಕದ ಅಟ್ಲಾಂಟಾ ನಗರದ ವಿಮಾನ ನಿಲ್ದಾಣದಿಂದ ಟಾಲಿವುಡ್ ನಟ ಶ್ರೀಧರ್ ರೆಡ್ಡಿಯ ಪುತ್ರ ಮನೀಶ್ ರೆಡ್ಡಿ ನಾಪತ್ತೆಯಾಗಿರುವ ಘಟನೆ ಪೋಷಕರಿಗೆ ಭಾರೀ ಆತಂಕ ಉಂಟುಮಾಡಿದೆ. ಜೂನ್ 22ರಂದು ರಾತ್ರಿ 10 ಗಂಟೆಗೆ ಪುತ್ರನಿಂದ ವೀಡಿಯೊ ಕರೆ ಬಂದಿದ್ದಿದ್ದು, ಅದು ಅವರಿಬ್ಬರ ನಡುವಿನ ಕೊನೆಯ ಸಂಪರ್ಕವಾಗಿತ್ತು ಎಂದು ನಟ ಸ್ಪಷ್ಟಪಡಿಸಿದ್ದಾರೆ.
ಮನೀಶ್ ವಿಡಿಯೋ ಕಾಲ್ ಮಾಡಿದ ನಂತರ ಯಾವುದೇ ರೀತಿಯ ಕರೆ ಅಥವಾ ಸಂದೇಶ ಪೋಷಕರಿಗೆ ಬಂದಿಲ್ಲ. ಆತನ ಮೊಬೈಲ್ ಫೋನ್ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿಯೇ ಪತ್ತೆಯಾಗಿದ್ದು, ಬಳಿಕ ಸಂಪರ್ಕ ಸಂಪೂರ್ಣವಾಗಿ ಕಡಿದಿದೆ. “ಅವನ ಫೋನ್ ಕಳೆದುಹೋಗಿದ್ರೆ, ಇತರ ಫೋನ್ ಮೂಲಕ ಕೈಚೆಲ್ಲಬಹುದು. ಆದರೆ ಅವನು ಹಾಗೆ ಮಾಡಿಲ್ಲ. ಇದರಿಂದ ನಮಗೆ ಆತಂಕ ಆಗುತ್ತಿದೆ,” ಎಂದು ಶ್ರೀಧರ್ ರೆಡ್ಡಿ ಕಣ್ಣೀರಿಟ್ಟಿದ್ದಾರೆ.
ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಜೊತೆಗೆ, ಅಮೆರಿಕದಲ್ಲಿ ಇರುವ ತಮ್ಮ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಶ್ರೀಧರ್ ರೆಡ್ಡಿ, “ಫೋನ್ ಅಲ್ಲಿಯೇ ಇದೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ. ಆದರೆ ಮನೀಶ್ ಎಲ್ಲಿ ಎನ್ನುವುದು ಇನ್ನೂ ಗೊತ್ತಿಲ್ಲ,” ಎಂದು ಹೇಳಿದ್ದಾರೆ.
ಮನೀಶ್ ಅಪಹರಣಕ್ಕೆ ಒಳಗಾಗಿರಬಹುದೆಂಬ ಅನುಮಾನವೂ ಪೋಷಕರಲ್ಲಿ ಹುಟ್ಟಿದ್ದು, ಹಣಕ್ಕಾಗಿ ಯಾರಾದರೂ ಈ ಕೃತ್ಯವೆಸಗಿರಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ, ಅವರು ಭಾರತೀಯ ರಾಯಭಾರಿ ಕಚೇರಿ, ಎನ್.ಆರ್.ಐ ಸಮುದಾಯ ಹಾಗೂ ಸಾರ್ವಜನಿಕರ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
“ದಯವಿಟ್ಟು ನಮ್ಮ ಮಗನ ಪತ್ತೆಗೆ ಸಹಕರಿಸಿ. ಅವನ ಬದುಕು ಸಂಕಟದಲ್ಲಿದೆ. ನಾವು ಆಶಾಕಿರಣವೊಂದನ್ನು ಹಿಡಿದುಕೊಂಡಿದ್ದೇವೆ,” ಎಂದು ಅವರು ಭಾವನಾತ್ಮಕವಾಗಿ ಕೋರಿದ್ದಾರೆ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…