Latest

ಮನೆಯ ಗೌರವಕ್ಕಾಗಿ ಮೂವರು ಬಲಿ: ಮಗಳ ವಿವಾಹ ನಿರ್ಧಾರ ಹಿನ್ನೆಲೆಯಲ್ಲಿ ಕುಟುಂಬದ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಮನನೊಂದು ಕುಟುಂಬದ ಆತ್ಮಹತ್ಯೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಮಗಳು ಮನೆಯವರ ವಿರೋಧವನ್ನು ಮೀರಿ ಪ್ರೀತಿಪಾತ್ರನೊಂದಿಗೆ ಮದುವೆಯಾಗಲು ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ ತಂದೆ, ತಾಯಿ ಹಾಗೂ ಕಿರಿಯ ಮಗಳು ಬದುಕಿಗೆ ಚಿರವಿದಾಯ ಹೇಳಿದ್ದಾರೆ.

ಬೂದನೂರು ಗ್ರಾಮದ ನಿವಾಸಿ ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಮತ್ತು ಕಿರಿಯ ಮಗಳು ಹರ್ಷಿತಾ ಮೃತಪಟ್ಟವರಾಗಿದ್ದು, ಈ ಘಟನೆ ಸ್ಥಳೀಯವಾಗಿ ಭಾರೀ ಕನ್ನಸು ಮೂಡಿಸಿದೆ. ಘಟನೆಯ ಹಿನ್ನೆಲೆಯನ್ನು ತಿಳಿಸುವ ಸ್ಫೋಟಕ ದೆತ್‌ ನೋಟ್‌ವೊಂದು ಸ್ಥಳದಲ್ಲಿ ಪತ್ತೆಯಾಗಿದೆ.

ಡೆತ್‌ ನೋಟ್‌ನಲ್ಲಿ ಮಹದೇವಸ್ವಾಮಿ ತಮ್ಮ ಹೃದಯವಿದ್ರಾವಕ ನೋವಿನ ಕಥನ ಬರೆದಿದ್ದು, ಎರಡು ವರ್ಷಗಳ ಹಿಂದೆ ತಮ್ಮ ಸಹೋದರನ ಪತ್ನಿ ಕೇರಳದ ಕೂಲಿ ಕಾರ್ಮಿಕನೊಂದಿಗೆ ಓಡಿ ಹೋಗಿದ್ದರಿಂದ ಕುಟುಂಬಕ್ಕೆ ಅಪಾರ ಗೌರವಹಾನಿ ಆಗಿದ್ದನ್ನು ಉಲ್ಲೇಖಿಸಿದ್ದಾರೆ. ಆಗಲೇ ಕುಟುಂಬವು ಆತ್ಮಹತ್ಯೆಗೆ ತೀರ್ಮಾನಿಸಿತ್ತು. ಆದರೆ ಸಂಬಂಧಿಕರ ಸಮಾಧಾನದಿಂದ ತಾತ್ಕಾಲಿಕವಾಗಿ ನಿರ್ಧಾರವನ್ನು ಬದಲಾಯಿಸಿದ್ದೇವೆ ಎಂಬುದು ಆ ದೆತ್‌ ನೋಟ್‌ನಲ್ಲಿದೆ.

ಹೀಗೇ ಇದೀಗ ಅವರ ಪುತ್ರಿ ಭರತ್ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿ ಮುಳುಗಿದ್ದಾಳೆ. ಆತನ ಹಿಂದಿನ ಸಂಬಂಧ ವಿಫಲವಾಗಿದ್ದು, ಅವನ ಜೀವನಶೈಲಿ ನಂಬಿಕೆ ಮೂಡಿಸುವುದಕ್ಕೆ ಅಸಾಧ್ಯವಿತ್ತು ಎಂದು ಡೆತ್‌ ನೋಟ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಮಗಳಿಗೆ ಹಲವಾರು ಸಲಹೆ ನೀಡಿದರೂ, ಅವಳು ತನ್ನ ಪ್ರೀತಿಯನ್ನು ಉಳಿಸಿಕೊಂಡು ಯಾವುದೇ ತಕರಾರುಗಳಿಲ್ಲದೆ ನೋಂದಣಿ ಮದುವೆಗೆ ಮುಂದಾಗಿದ್ದಾಳೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಮಗಳ ಭವಿಷ್ಯ ಹಾಳಾಗುವುದು ಕಣ್ಣೆದುರೇ ಕಾಣುತ್ತಿದ್ದರೂ ತಡೆಗಟ್ಟಲಾಗದ ಆಘಾತದಿಂದ ಈ ಭೀಕರ ಕ್ರಮಕ್ಕೆ ಕೈ ಹಾಕಲಾಗಿದೆ ಎಂದು ದೂರಲಾಗಿದೆ.

ಮಹದೇವಸ್ವಾಮಿ ಅವರು ತಮ್ಮ ಆಸ್ತಿ ವಿವರಗಳನ್ನೂ ನಿಖರವಾಗಿ ಬರೆದಿದ್ದು, ಬೂದನೂರು ಹಾಗೂ ಎಚ್.ಡಿ. ಕೋಟೆ ಯಲ್ಲಿನ ಮನೆಗಳೊಂದಿಗೆ ಜಮೀನನ್ನು ತಮ್ಮ ಸಹೋದರನಿಗೆ ವಹಿಸಬೇಕೆಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ಜೊತೆಗೆ ಮನೆಯಲ್ಲಿದ್ದ ರೂ.2.5 ಲಕ್ಷ ನಗದು ಕೂಡ ಸಹೋದರನಿಗೆ ಹಸ್ತಾಂತರಿಸುವಂತೆ ಲಿಖಿತ ಸೂಚನೆ ನೀಡಿದ್ದಾರೆ. ಎಲ್ಲದಕ್ಕೂ ಮಗಳ ಪಾಲು ಇರಬಾರದು ಎಂಬ ಕಟ್ಟುನಿಟ್ಟಾದ ಮಾತನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಈ ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೋಕಾಂತ ಕುಟುಂಬದ ಈ ಹೃದಯವಿದ್ರಾವಕ ಕಥೆ ಗ್ರಾಮದಲ್ಲಿ ತೀವ್ರ ಸಂಚಲನ ಹುಟ್ಟಿಸಿದೆ.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

1 hour ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

7 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

7 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

7 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

7 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

8 hours ago