Latest

ಸರಣಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಬಂಧಿತ, ಆಭರಣ ವಶ”

ಹುಬ್ಬಳ್ಳಿ: ನಗರದ ಎಪಿಎಂಸಿ ಈಶ್ವರನಗರ, ಸಮೃದ್ಧಿ ಬಡಾವಣೆ, ಎಸ್.ಆರ್ ನಗರ, ಅಂಕೋಲೆಕರ್ ಲೇಔಟ್ ಮತ್ತು ಎಂ.ಐ.ಜಿ ಕಾಲನಿಗಳಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣದಲ್ಲಿ ಮೂವರನ್ನು ಬಂಧಿಸಿ, ಓರ್ವ ಅಪ್ರಾಪ್ತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಕಳ್ಳತನ ಹಾಗೂ ವಶಪಡಿಸಿಕೊಂಡ ಸರಕುಗಳು

2024ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ಭಾಗದಲ್ಲಿ ಸರಣಿ ಕಳ್ಳತನಗಳು ನಡೆದಿದ್ದವು. ತನಿಖೆ ನಡೆಸಿದ ಎಪಿಎಂಸಿ ನವನಗರ ಠಾಣೆ ಪೊಲೀಸರು ಸಿದ್ದಪ್ಪ ಅಂಬಿಗೇರ, ವಿಷ್ಣು ಅಂಬಿಗೇರ ಮತ್ತು ಕುನಾಲಸಿಂಗ್ ಎಂಬುವವರನ್ನು ಬಂಧಿಸಿದ್ದಾರೆ. ಈಚೆಗೆ ಬಂಧಿತರಿಂದ 60 ಗ್ರಾಂ ತೂಕದ ಬಂಗಾರ (ರೂ. 4,50,000 ಮೌಲ್ಯ), 360 ಗ್ರಾಂ ತೂಕದ ಬೆಳ್ಳಿ ಆಭರಣ (ರೂ. 37,000 ಮೌಲ್ಯ) ಮತ್ತು ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಕಾರ್ಯಾಚರಣೆ

ಈ ಕಾರ್ಯಾಚರಣೆಯನ್ನು ಎಪಿಎಂಸಿ ನವನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಮಿವುಲ್ಲಾ ಕೆ. ಅವರ ನೇತೃತ್ವದಲ್ಲಿ ಪಿಎಸ್‌ಐ ದೇವೇಂದ್ರ ಮಾವಿನಿಂಡಿ, ಎಂ.ಬಿ ಈಟಿ ಹಾಗೂ ಸಿಬ್ಬಂದಿಗಳಾದ ರವಿ ಆರ್. ಹೊಸಮನಿ, ಬೀರನೂರ, ಸಿ.ವೈ. ಬಕ್ಕಸದ, ಬಿ.ಎಸ್. ಮನ್ನೂರ ಮತ್ತು ತಾಂತ್ರಿಕ ವಿಭಾಗದ ಎಂ.ಎಸ್. ಚಿಕ್ಕಮಠ, ಆರ್.ಕೆ. ಭಡಂಕರ, ರವಿ ಗೋಮಪ್ಪನವರ ನಡೆಸಿದರು.

ಪೊಲೀಸರ ಕಾರ್ಯಚರಣೆ ಯಶಸ್ವಿಯಾಗಿದ್ದು, ಸ್ಥಳೀಯ ನಿವಾಸಿಗಳು ತೋಂದರೆಮುಕ್ತರಾಗಿದ್ದಾರೆ.

nazeer ahamad

Recent Posts

ಬಾಗಲಕೋಟೆಯಲ್ಲಿ ರಾತ್ರಿ 11 ಗಂಟೆಯ ಬಳಿಕ ನಿಯಮ ಉಲ್ಲಂಘಿಸಿ ಮರಳು ಸಾಗಾಟ: ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್‌ಗಳ ಸಂಚಾರ, ಅಧಿಕಾರಿಗಳು ಮೌನ!?

ಬಾಗಲಕೋಟೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ…

1 day ago

ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮಕ್ಕಳ ಮಾನ್ಯತಾ ಅವಧಿಯಲ್ಲೂ ಬದಲಾವಣೆ, ಹೊಸ ನಿಯಮ ಜಾರಿ

ನವದೆಹಲಿ: ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಪಾಸ್‌ಪೋರ್ಟ್‌ನ ಮಾನ್ಯತಾ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು…

1 day ago

ಗೌರಿಬಿದನೂರಿನಲ್ಲಿ ಅಪಘಾತಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ

ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ…

5 days ago

ಸರ್ಕಾರಿ ಶಾಲಾ ಮಕ್ಕಳಿಗೆ ಅನ್ಯಾಯ: ನೂರು ರೂಪಾಯಿಗೂ ಬೆಲೆಬಾಳದ ಶೂಗಳನ್ನು ವಿತರಿಸಿರುವ ಸರ್ಕಾರ, ಒಂದೇ ತಿಂಗಳಿಗೆ ಹಾಳದ ಶೂಗಳು..!

ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…

5 days ago

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: ಖರಾಬು ಜಮೀನು ದಾಖಲೆ ತಿದ್ದುಪಡಿಗೆ ಬೇಡಿಕೆ..!

ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…

5 days ago

ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದಕ್ಕೆ ರಕ್ತದೊಕುಳಿ: ಅಣ್ಣ–ತಮ್ಮಂದಿರ ಜಗಳದಲ್ಲಿ ತಂದೆ–ಮಗಳು ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ

ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…

5 days ago