ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ತಲವಾರು ತೋರಿಸಿ ಇಬ್ಬರು ನಾಗರಿಕರನ್ನು ಬೆದರಿಸಿರುವ ಘಟನೆ ವರದಿಯಾಗಿದೆ. ಸಂಘಪರಿವಾರದ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಈ ಘಟನೆ ನಡೆದಿರುವುದರಿಂದ ಸ್ಥಳೀಯರಲ್ಲೂ ಆತಂಕ ಮನೆಮಾಡಿದೆ.
ಪಂಜಿಮೊಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಂಜಿಮೊಗರು ನಿವಾಸಿ ಮೊಯ್ದಿನಬ್ಬ (37) ಮತ್ತು ಶಾಂತಿನಗರದ ನಾಸಿರ್ (38) ಎಂಬವರನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರು ತೋರಿಸಿ ಬೆದರಿಸಿದ್ದಾರೆ. ಅವರು ಹೆಲ್ಮೆಟ್ ಧರಿಸಿದ್ದಾಗಿದ್ದು, ತಲವಾರು ಹಾಯಿಸಿ ಬೆದರಿಕೆಯುಂಟುಮಾಡಿ ಸ್ಥಳದಿಂದ ಪರಾರಿಯಾದರೆನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತರು ಕಾವೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, “ನಮ್ಮ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಘಟನೆಯು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಪೊಲೀಸರಿಂದ ಹೆಚ್ಚಿನ ಪೇಟ್ರೋಲಿಂಗ್ ಕೈಗೊಳ್ಳಲಾಗಿದೆ.
ಬೆಂಗಳೂರು: ನಗರದ ಟಿ. ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡು ರಸ್ತೆಯಲ್ಲೇ ಯುವತಿಯೊಬ್ಬರ ಕೈ ಹಿಡಿದು ಕಿರುಕುಳ ನೀಡಿದ ಯುವಕನ ವಿರುದ್ದ…
ರಾಯಚೂರು: ಇತ್ತೀಚೆಗೆ ಉದ್ಘಾಟನೆಯಾದ ನೂತನ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದಿದೆ ಎಂಬ ಇಮೇಲ್ ಸಂದೇಶ one ಆತಂಕದ ವಾತಾವರಣ…
ಉಡುಪಿ: ಅಕ್ರಮ ಮರಳು ಸಾಗಣೆಯನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಮೇಲೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ವ್ಯಕ್ತಿಯೋರ್ವ ಆಕೆಯನ್ನೂ…
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಭೂಗತಲೋಕ ಪಾತಕಿಗಳಿಂದ ಜೀವ ಬೆದರಿಕೆ ಕರೆಗಳು ಬಂದಿರುವ ವಿಷಯ ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಯಿತು. ಈ…
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಪೆದ್ದಕೋತಪಲ್ಲಿ ಗ್ರಾಮದಲ್ಲಿ ಮೂರೂ ಮಕ್ಕಳ ದುರ್ಘಟನಾತ್ಮಕ ಸಾವು ನಡೆಯಿದೆ. ಗ್ರಾಮದಲ್ಲಿಯೇ ಇರುವ ಪೋತಿನೇನಿ ಕೊಳದಲ್ಲಿ ಈಜಲು…