ಕೊಟ್ಟೂರು:- ನನಗೆ ನಿನ್ನ ಜೊತೆ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿದೆ ನೀನು ನನ್ನ ಜೊತೆ ಇರಬೇಕೆಂದರೆ 5 ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಜೀವನ ಮುಂದುವರೆಯುತ್ತದೆ ಇಲ್ಲವಾದರೆ ವಿಚ್ಛೇದನ ನೀಡಬೇಕೆಂದು ಪ್ರತಿ ದಿನ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಪತ್ನಿ ಜ್ಯೋತಿ ತನ್ನ ಆರೋಪಿ ಪತಿ ಸಣ್ಣ ಮಾರೆಣ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ :
ಸಣ್ಣ ಮಾರೆಣ್ಣ ಎಂಬುವ ವ್ಯಕ್ತಿ ಮೂಲ ಹೊಸಪೇಟೆ ನಿವಾಸಿ ಈತನು ಕೂಡ್ಲಿಗಿ ತಾಲೂಕಿನ ಗುಂಡ ಮುಣುಗು ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ(VA)ಯಾಗಿ ಕೆಲಸ ನಿರ್ವಸುತ್ತಿದ್ದಾನೆ ಈತನು 13 ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದ ನಿವಾಸಿ ಜ್ಯೋತಿ ಎಂಬ ಮಹಿಳೆ ಜೊತೆ ವಿವಾಹ ಆಗಿದ್ದನು ಈ ವಿವಾಹ ಆಗಿ ಮೂರೇ ವರ್ಷಕ್ಕೆ ಗುಟ್ಟಾಗಿ ಮತ್ತೊಂದು ವಿವಾಹ ಆಗಿದ್ದಾನೆ ಎಂದು ತಿಳಿದ ಪತ್ನಿಯು ವಿಚಾರಿಸಿದಾಗ ಹೌದು ಇದು ನನ್ನ ಜೀವನ ನನ್ನ ಇಷ್ಟ ನಾನು ಎಷ್ಟು ಮದುವೆ ಬೇಕಾದರು ಆಗುತ್ತೇನೆ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಹಾಗೂ ನನಗೆ ಮದುವೆಗೆ ನೀಡಿದ ವರದಕ್ಷಿಣೆ ಸಾಲದು ಇನ್ನು 5 ಲಕ್ಷ ನೀಡಿದರೆ ಮಾತ್ರ ನಿನ್ನ ಜೊತೆ ಇರುತ್ತೇನೆ ಇಲ್ಲವಾದರೆ ಗುಟ್ಟಾಗಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹಲವಾರು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ ಇದರಿಂದಾಗಿ ನಾನು ಕಿರುಕುಳಕ್ಕೆ ಒಳಗಾಗಿ ಪತ್ನಿ ಜ್ಯೋತಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನನ್ನ ವಿವಾಹ ಆಗುವ ಮೊದಲೇ ಈತನಿಗೆ ಬೇರೆ ವಿವಾಹವಾಗಿತ್ತು ಆ ಹುಡಿಗಿಯ ಜೊತೆ ಹೊಂದಾಣಿಕೆ ಇಲ್ಲದ ಕಾರಣ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ನಂತರ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ನನ್ನ ತಾಯಿಯ ಹತ್ತಿರ ಬಂದು ಕಣ್ಣೀರು ಹಾಕಿ ರಕ್ತ ಸಂಬಂಧದ ನಾಟಕ ಮಾಡಿ ನನ್ನನು ವಿವಾಹ ಆಗಿ ನನಗೆ ಸಹ ಮೋಸ ಮಾಡುತ್ತಿದ್ದಾನೆ. ನನ್ನ ಕೊಲೆ ಮಾಡುವ ಉದ್ದೇಶದಿಂದ ಊಟದಲ್ಲಿ ವಿಷ ಹಾಕುವುದು, ಮಜ್ಜಿಗೆಯಲ್ಲಿ ವಿಷದ ಪೌಡರ್ ಹಾಕುವುದು, ನೀರಿನ ಟ್ಯಾಂಕರ್ ನಲ್ಲಿ ವಿಷ ಸೇರಿಸುವುದು ಹೀಗೆ ಹಲವಾರು ಬಾರಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ಪತ್ನಿ ಜ್ಯೋತಿ ತಿಳಿಸಿದ್ದಾರೆ.
ವರದಿ: ಮಣಿಕಂಠ. ಬಿ
ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…
Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…
ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…
ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…