ಗೌರಿಬಿದನೂರು: ನಗರದ 12ನೇ ವಾರ್ಡ್ ತ್ಯಾಗರಾಜ ಕಾಲೋನಿಯ ಅಶ್ವತ್ಥ್ ನಾರಾಯಣ್ ಎಂಬುವರ ಮನೆಯ ಬೀಗ ಹೊಡೆದು ಕಳ್ಳರು ತಮ್ಮ ಕೈಚಳಕವನ್ನು ತೋರಿಸಿರುವ ಘಟನೆ ಗೌರಿಬಿದನೂರು ನಗರದ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ತ್ಯಾಗರಾಜ ಕಾಲೋನಿಯಲ್ಲಿ ವಾಸವಿರುವ ಅಶ್ವತ್ಥ್ ನಾರಾಯಣ್ ಶೆಟ್ಟಿ, ಶೈಲಜಾ ದಂಪತಿಗಳು ಆರೋಗ್ಯ ತಪಾಸಣೆಗೆಂದು ಮನೆಗೆ ಬೀಗ ಹಾಕಿಕೊಂಡು ಕಳೆದ ಶುಕ್ರವಾರದಂದು ಬೆಂಗಳೂರಿಗೆ ಹೋಗಿರುತ್ತಾರೆ ಆರೋಗ್ಯ ತಪಾಸಣೆ ಮುಗಿಸಿಕೊಂಡವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿರುವ ಮಗ ಆಕಾಶ್ ಮನೆಗೆ ಹಬ್ಬಕ್ಕೆಂದು ಹೋಗಿದ್ದು ಅಲ್ಲೇ ಉಳಿದುಕೊಂಡಿರುತ್ತಾರೆ.
ಮೂರ್ನಾಲ್ಕು ದಿನಗಳಿಂದ ಬೀಗ ಜಡಿದಿರುವ ಮನೆಯನ್ನು ಗಮನಿಸಿದ ಖದೀಮರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಮನೆ ಬೀಗ ಒಡೆದು ಒಳಗೆ ನುಗ್ಗಿ ಎರಡು ಬೀರುಗಳನ್ನು ತೆಗೆದು 3 ಚಿನ್ನದ ನೆಕ್ಲೇಸ್ , 4 ಚಿನ್ನದ ಚೈನುಗಳು, 1 ಜೊತೆ ಬಳೆ, 3 ಬ್ರಾಸ್ಲೈಟ್, 7 ಚಿನ್ನದ ಉಂಗುರಗಳೊಂದಿಗೆ ಒಂದು ಲಕ್ಷ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ಶೈಲಜಾ ತಿಳಿಸಿದ್ದಾರೆ.
ಅಶ್ವಥ್ ನಾರಾಯಣ್ ಶೆಟ್ಟಿ ತಮ್ಮನಾದ ಜನಾರ್ಧನ್ ಶೆಟ್ಟಿ ಅಣ್ಣನಿಗೆ ಫೋನಿನ ಮೂಲಕ ವಿಷಯ ತಿಳಿಸಿ ಕರಿಸಿದ್ದಾರೆ ಅದಕ್ಕೂ ಮುನ್ನ ಸ್ಥಳೀಯ ಪೊಲೀಸರಿಗೆ ಫೋನಿನ ಮೂಲಕ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಚಂದ್ರಕಲಾ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು, ಬೆರಳಚ್ಚು ತಜ್ಞರು ಕರೆಸಿ ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಮನವಿ: ಏನೆಂದರೆ ನಗರ ಮತ್ತು ತಾಲ್ಲೂಕಿನ ಜನತೆ ಮನೆಗಳಿಗೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಅಪರಾಧಿಗಳನ್ನು ಪತ್ತೆಹಚ್ಚಲು ಇಲಾಖೆಗೆ ಸಹಕಾರ ನೀಡಲು ಕೋರಲಾಗಿದೆ.
ಇಂತಹ ಘಟನೆಗಳು ವಾರ್ಡ್ಗಳಲ್ಲಿ ಮರುಕಳಿಸದೆ ಮುನ್ನಚ್ಚರಿಕೆಯಾಗಿ ಪೊಲೀಸ್ ಇಲಾಖೆ ವತಿಯಿಂದ ಈ ಹಿಂದೆ ವಾರ್ಡ್ ಬೀಟ್ ಸಭೆ ಕರೆದು ಸಾರ್ವಜನಿಕರಿಗೆ ಅಪರಾಧ ತಡೆಗಟ್ಟಲು ಜಾಗೃತಿಗೊಳಿಸಿದರು. ಎಚ್ಚೆತ್ತುಕೊಳ್ಳದ ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ನಗರದಲ್ಲಿ ಪದೇಪದೇ ಕಳ್ಳತನಗಳು ನಡೆಯುತ್ತಲೇ ಇವೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…