ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ವ್ಯಾಪಾರಿಯ ಗಮನವನ್ನು ಬೇರೆ ಕಡೆ ಸೆಳೆದು ರೂ 1,68,442 ಹಣವನ್ನು ಹಾಗೂ ಮೂರು ಚೆಕ್ ಗಳನ್ನು ಕಳ್ಳತನ ಮಾಡಿದ್ದಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 10 ರಂದು ಮುಂಡಗೋಡದ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ದೇವರಾಮ ಖವಾಸ ಎಂಬ ಬಟ್ಟೆ ವ್ಯಾಪಾರಿಯು ಆನವಟ್ಟಿ ,ಹಾನಗಲ್, ಮುಂಡಗೋಡ ದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಸಂಗ್ರಹಿಸಿದ್ದ ರೂ 1,68,442 ಹಣವನ್ನು ಹಾಗೂ ಬ್ಯಾಗ್ ನಲ್ಲಿದ್ದ ಕೆನರಾ ಬ್ಯಾಂಕಿನ ಎರಡು,ಎಸ್.ಬಿ.ಐ ಬ್ಯಾಂಕಿನ 1 ಚೆಕ್ ಗಳನ್ನು ಕಳ್ಳತನ ಮಾಡಿದ್ದಾರೆಂದು ದೂರು ದಾಖಲಿಸಿದ್ದರು.ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಂಡಗೋಡ ಪೊಲೀಸರು ಹುಬ್ಬಳ್ಳಿಯ ರಾಕೇಶ ಗುಂಜಾಳ ಎಂಬಾತನನ್ನು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯು ಭಾಗಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಉತ್ತರ ಕನ್ನಡದ ಎಸ್.ಪಿ.ಸುಮನ್ ಪನ್ನೆಕರ್,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್,ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ,ಪಿ.ಎಸ್.ಐ ಬಸವರಾಜ್ ಮಬನೂರ,ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ,ಪ್ರೊಬೇಷನರಿ ಪಿ.ಎಸ್.ಐ ಮಹೇಶ ಮಾಳಿ,ಎ.ಎಸ್.ಐ ಮಣಿಮಾಲನ್ ಮೇಸ್ತ್ರೀ,ಸಿಬ್ಬಂದಿಗಳಾದ ಮಹ್ಮದ ಸಲಿಂ,ಕೊಟೇಶ್ ನಾಗರವಳ್ಳಿ ಅಣ್ಣಪ್ಪ ಬಡಿಗೇರ,ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ, ಕಾಶಿರಾಯ ಕನ್ನಾಳ, ಸಂಗಮೇಶ ದೊಡ್ಡವಾಡ ,ಎ.ಎಚ.ಸಿ ನಾಗರಾಜ ಬೇಗಾರ ಮುಂಡಗೋಡ ಪೊಲೀಸ್ ಠಾಣೆ ಹಾಗೂ ಕಾರವಾರ ತಾಂತ್ರಿಕ ಸಿಡಿಆರ್ ವಿಭಾಗದ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುನಾಥ ಹರಿಜನ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…