ರಾಯಚೂರು (ಆ.3): ಕೆಲವು ದಿನಗಳ ಹಿಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಘಟನೆಯಲ್ಲಿ ಈಗ ಭಾರೀ ತಿರುವು ಮೂಡಿದ್ದು, ಪತಿ ತಾತಪ್ಪನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜುಲೈ 12 ರಂದು ರಾಯಚೂರಿನ ಗುರ್ಜಾಪುರ ಬಳಿಯ ಕೃಷ್ಣಾ ನದಿ ಸೇತುವೆಯ ಮೇಲೆ ಪತ್ನಿ ಪತಿಯನ್ನು ನದಿಗೆ ತಳ್ಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸುದ್ದಿಯ ಕೆಂದ್ರವಾಗಿತ್ತು. ವಿಡಿಯೋದಲ್ಲಿ ನದಿಯಲ್ಲಿ ಪತನವಾದ ತಾತಪ್ಪ ನೆರವಿಗೆ ಕೋರುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣುತ್ತಿತ್ತು. ಸ್ಥಳೀಯರು ಹಗ್ಗದ ಸಹಾಯದಿಂದ ಆತನನ್ನು ರಕ್ಷಿಸಿದ್ದರು.
ಈ ಸಂಬಂಧ ಮಾತನಾಡಿದ್ದ ತಾತಪ್ಪ, ಪತ್ನಿಯೇ ತನ್ನನ್ನು ಸೆಲ್ಫಿ ತೆಗೆಯುವ ನೆಪದಲ್ಲಿ ಸೇತುವೆಯ ಮೇಲೆ ನಿಲ್ಲಿಸಿ ನೀರಿಗೆ ತಳ್ಳಿದಾಳೆ ಎಂದು ಗಂಭೀರ ಆರೋಪ ಮಾಡಿದ್ದ. ಆದರೆ ಪತ್ನಿಯ ಮಾತು ವಿಭಿನ್ನವಾಗಿದ್ದು, ತಾತಪ್ಪ ತಾನಾಗಿಯೇ ನದಿಗೆ ಹಾರಿದ್ದಾನೆ ಹಾಗೂ ನಂತರ ತಪ್ಪು ಆರೋಪ ಹೊರೆಸುತ್ತಿದ್ದಾರೆ ಎಂದು ಹೇಳಿದ್ದಳು.
ಈ ಸನ್ನಿವೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದಾಗ, ಅಚ್ಚರಿಯ ಸಂಗತಿ ಬೆಳಕಿಗೆ ಬಂದಿತು. ತಾತಪ್ಪ ವಿವಾಹವಾದ ಯುವತಿ ವಯಸ್ಸು 18 ಕ್ಕೆ ಕಡಿಮೆ ಎಂಬ ಶಂಕೆಯ ಮೇರೆಗೆ ಪೊಲೀಸರು ಶಾಲಾ ದಾಖಲೆ ಪರಿಶೀಲಿಸಿದರು. ಅಧ್ಯಯನದ ಬಳಿಕ, ಯುವತಿ ಅಪ್ರಾಪ್ತೆಯೆಂಬುದು ಸ್ಪಷ್ಟವಾಯಿತು. ಇದರಿಂದ ಶಾಕಿಂಗ್ ಟ್ವಿಸ್ಟ್ ಸಿಕ್ಕಿದ್ದು, ತಾತಪ್ಪನ ವಿರುದ್ಧ ಪಾಕ್‍ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.
ಆದರೆ ಆರೋಪ ತಿಳಿಯುತ್ತಿದ್ದಂತೆಯೇ ತಾತಪ್ಪ ಪೊಲೀಸರ ಕೈಗೆ ಸಿಗದಂತೆ ಪರಾರಿಯಾಗಿದ್ದ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಮಹಿಳಾ ಠಾಣೆಯ ಪೊಲೀಸರು, ಹತ್ತಿ ಹುತ್ತಿ ಹುಡುಕಿ ಕೊನೆಗೂ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇಂದಿನ ಅಂತಿಮ ಕ್ರಮವಾಗಿ ತಾತಪ್ಪನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ತಾತಪ್ಪ ಅಪ್ರಾಪ್ತೆಯೆಂಬುದು ತಿಳಿದಿದ್ದರೂ ಆಕೆಯನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದನು ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬಂಧನೆ ನಡೆದಿದೆ.
ಈ ಪ್ರಕರಣವು ಈಗ ಕೇವಲ ನದಿ ಸೇತುವೆಯ ಸೆಲ್ಫಿ ಪ್ರಕರಣವಷ್ಟೇ ಅಲ್ಲ, ಬಾಲ್ಯವಿವಾಹ ಮತ್ತು ಲೈಂಗಿಕ ದೌರ್ಜನ್ಯ ಎಂಬ ಗಂಭೀರ ಆರೋಪಗಳತ್ತ ದಾರಿ ತಿರುಗಿದಿದ್ದು, ಆರೋಪಿಗೆ ಕಾನೂನು ಪ್ರಕಾರ ತೀವ್ರ ಶಿಕ್ಷೆಯ ಸಾಧ್ಯತೆ ಮೂಡಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088070392
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…