Corruption

ಜನನ ಪ್ರಮಾಣ ಪತ್ರ ನೀಡಲು 3 ತಿಂಗಳ ಅವಧಿ ಪಡೆದ ನಂತರವೂ ಹಣ ಕೇಳಿದ ಭ್ರಷರು!

ಕುಂದಗೋಳ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ತಂದಿದ್ದೇವೆ ಓದುಗರೆ…!
ಈ ಕಾರ್ಯಾಲಯದಲ್ಲಿ ಪ್ರಮಾಣ ಪತ್ರಗಳಿಗೆ ರೈತರು, ಸಾರ್ವಜನಿಕರು ದುಡ್ಡು ಕೊಟ್ಟರೆ ಮಾತ್ರ ಇಲ್ಲಿ ಅರ್ಜಿಗಳು ವಿಲೇವಾರಿ ಹೊಂದುತ್ತವೆ. ಇಲ್ಲವಾದಲ್ಲಿ ನಾಳೆ ಬಾ ಅಂತ ಹೇಳಿ ಕಳಸುತ್ತಾರೆ. ಇಷ್ಟು ದಿನಗಳವಳಿಗೆ ಅರ್ಜಿ ವಿಲೇವಾರಿ ಹೊಂದಬೇಕು ಎಂದು ತಹಶೀಲ್ದಾರ್ ಕಛೇರಿಯ ಒಳಾಂಗಣ ದಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಹಣ ಕೊಟ್ಟರೆ ಸಾಕು ಬೇಗನೆ ಪ್ರಮಾಣ ಪತ್ರಗಳನ್ನು ವಿತರಸುತ್ತಾರೆ. ಹಾಗಾದರೆ ಬಡವರ ಪಾಡು…?

ಕುಂದಗೋಳ ಮೂಲದ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು 2022ರ ಜೂನ್ ತಿಂಗಳಿನಲ್ಲಿ ಜನನ ಪ್ರಮಾಣತಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸದು ಮೂರು ತಿಂಗಳ ನಂತರ ಅಂದರೇ ಸೆಪ್ಟಂಬರ್ 2022 ರಲ್ಲಿ ಜನನ ಪ್ರಮಾಣ ಪತ್ರವನ್ನು ಸರಕಾರಿ ಕಛೇರಿ ಸಿಬ್ಬಂದಿ ನೀಡಿದ ನಂತರ ಐವತ್ತು ರೂಪಾಯಿ ನೀಡುವಂತೆ ಹೇಳಿರುತ್ತಾನೆ. ಜನನ ಪ್ರಮಾಣ ಪತ್ರ ನೀಡಲು ಮೂರು ತಿಂಗಳ ಕಾಲ ಸಮಯವನ್ನು ತೆಗದುಕೂಂಡಿದ್ದಾರೆ ಎಂದರೇ ಎಷ್ಟರಮಟ್ಟಿಗೆ ಸರಕಾರಿ ಕಛೇರಿಗಳಲ್ಲಿ ಕೆಲಸ ಬೇಗ ಸಾಗುತ್ತದೆ? ಮೂರು ತಿಂಗಳ ಅವದಿ ಪಡೆದ ನಂತರವೂ ಹಣ ಕೇಳುತ್ತಿದ್ದಾರೆ ಎಂದರೇ ಇವರುಗಳು ಎಂತ ಲಂಚ ಬಾಕರೀರಾಬೇಕು?

ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಛೇರಿ ಒಳಾಂಗಣದ ನಾಮಫಲಕ ದಲ್ಲಿ ಜನನ ಮತ್ತು ಮರಣ ಪತ್ರದಲ್ಲಿ ಏಳು ದಿನಗಳಿಂದ ಹದಿನೈದು ದಿನಗಳವಳಿಗೆ ಕೊಟ್ಟಿರುವ ಅರ್ಜಿಯನ್ನು ವಿಲೇವಾರಿ ಮಾಡಿ ತಕ್ಷಣ ಪ್ರಮಾಣ ಪತ್ರ ನೀಡಬೇಕು ಎಂದು ನಾಮಫಲಕದಲ್ಲಿ ಗೋಡೆಗೆ ನೇತು ಹಾಕಿದ್ದಾರೆ. ಆದರೆ ಹೆಸರಿಗೆ ಮಾತ್ರ ಅನ್ನಬಹುದು. ಈ ನಾಮಫಲಕ.
ಕುಂದಗೋಳ ತಾಲೂಕಿನ ದಂಡಾಧಿಕಾರಿ ಕಛೇರಿಯಲ್ಲಿ ಸಾಕಷ್ಟು ಪ್ರಮಾಣ ಪತ್ರಗಳು ದೊರೆಯುತ್ತೇವೆ ಅಂತ ಸೇವೆಗಳ ಪಟ್ಟಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಅದರಂತೆ ಈ ಪ್ರಮಾಣ ಪತ್ರಕ್ಕೆ ಇಷ್ಟು ಸರಕಾರಿ ಶುಲ್ಕ ಅಂತ ಹಾಕದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರಕ್ಕೆ ಇದೊಂದು ಕಾರಣವಾದರೆ ಅಧಿಕಾರಿಗಳು ನಾವು ಕೆಲಸ ಮಾಡಿರುತ್ತೇವೆ ಸ್ವಲ್ಪ ಹಣ ಕೊಡಿ ಅಂತ ಬಾಯಿಬಿಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅಧಿಕಾರಿಗಳಿಗೆ ಸರಕಾರ ವೇತನ ನೀಡುವುದಿಲ್ಲವ? ಎಂಬ ಪ್ರಶ್ನೆ ಉಳಿದಿದೆ. ಜನಸಾಮಾನ್ಯರ ಪರಿಸ್ಥಿತಿ ಏನು? ಸಾರ್ವಜನಿಕರು ಸರಕಾರಕ್ಕೆ ತೆರಿಗೆ ಹಣ ಪಾವತಿಸುತ್ತಾರೆ. ಅದೇ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತದೆ. ಅಷ್ಟೇಲ್ಲದೆ ಸಂಬಳಗಿಂತ ಗಿಂಬಳಕ್ಕೆ ಕೈ ಚಾಚುತ್ತಾರೆ. ಇಲ್ಲಿನ ಅಧಿಕಾರಿಗಳು. ಜಿಲ್ಲಾಧಿಕಾರಿ ಇತ್ತ ಕಡೆ ಗಮನ ಕೋಡದೇ ಇರುವುದೂಂದು ಕಾರಣ ಅಂತ ಹೇಳಬಹುದು.
ಇದಕ್ಕೆ ಅನುಸಾರವಾಗಿ ದೇಶದ ಪ್ರಧಾನ ಮಂತ್ರಿ “ಮೈ ನಹೀ ಕಾಹೋಂಗ್ ಕಾಣೇ ನೈ ದೇವೋಂಗ್” ಅಂತ ಅಬ್ಬರದ ಭಾಷಣದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಜನರು ಪಾಡು ನಿಮ್ಮ ಗಮನಕ್ಕೆ ಬಂದಿಲವ್ವಾ ಅನ್ನೋದು ಒಂದು ಕಡೆಯಾದರೆ, ಭಂಡ ಅಧಿಕಾರಿಗಳ ಲಂಚಾವತಾರ ಬ್ರೇಕ್ ಬಿಳವುದು ಯಾವಾಗ ಇದೊಂದು ಕಡೆ.
ಒಟ್ಟನಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಇಳಿದುಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗಳ ಅಮಾನತು ಮಾಡಿ ಸೂಕ್ತವಾದ ಕ್ರಮ ಜರುಗಿಸಬೇಕು.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಶಿಕ್ಷಕಿಯ ಪ್ರೀತಿ ನಿರಾಕರಣೆ: ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ

ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…

6 days ago

ರೈಲಿನ ಶೌಚಾಲಯದಲ್ಲಿ ರೋಮ್ಯಾನ್ಸ್! ಯುವಕ ಯುವತಿಯ ವಿಡಿಯೋ ವೈರಲ್

ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…

6 days ago

ಚಿತ್ರದಲ್ಲಿ ಡ್ರಗ್ ಪೆಡ್ಲರ್ ಪಾತ್ರ, ವಾಸ್ತವದಲ್ಲೂ ಮಾದಕ ದಂಧೆ – ವಿದೇಶಿ ನಟನ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…

6 days ago

ಅಫ್ಘಾನಿಸ್ತಾನದಲ್ಲಿ ಬಸ್ ಅಪಘಾತ: 71 ಸಾವು, 17 ಮಕ್ಕಳು ಬಲಿಯಾದ ದುರಂತ

ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

6 days ago

ಇನ್‌ಸ್ಟಾಗ್ರಾಂ ಪರಿಚಯ ದುರಂತ: ಬಿಜ್ನೋರ್‌ನಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…

7 days ago

“ಸುಪ್ರೀಂ ತೀರ್ಪಿಗೆ ಬೇಸರಗೊಂಡ ಪ್ರಾಣಿ ಪ್ರೇಮಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ದಾಳಿ”

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ…

7 days ago