Crime

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು ಗಂಡನ ಮನೆಗೆ ಬಂದವಳು ಇಂದು ಹೆಣವಾಗಿದ್ದಾಳೆ.

19 ವರ್ಷದ ನವ್ಯಾಶ್ರೀ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾದ ಗಂಡ ಸತೀಶ್ ಕುಮಾರ್ ಎಂಬಾತನೇ ಕೊಲೆಗೈದಿರುವ ಘಟನೆ ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದಿದೆ ಎಂದು ವರದಿ ಆಗಿದೆ.

ಕುಡಿತದ ದಾಸನಾಗಿದ್ದ ಸತೀಶ್ ಕುಮಾರ್
ಮದುವೆಯಾಗಿ ಕೇವಲ 8 ತಿಂಗಳಾಗಿದೆ ಅಷ್ಟೇ, ಪುಟ್ಟ ಗೂಡಲ್ಲಿ ಸಂಸಾರ ಕಟ್ಟಿಕೊಂಡಿದ್ದ ನವ್ಯಾಶ್ರೀ ಬದುಕು ಕೊಲೆಯಲ್ಲಿ ಅಂತ್ಯ ಕಂಡಿದೆ. ನವ್ಯಾ ಪತಿ ಸತೀಶ್ ಕುಮಾರ್ ಕುಡಿತದ ಚಟಕ್ಕೆ ಬಿದ್ದಿದ್ದ ನಿತ್ಯ ಕುಡಿದು ಮನೆಗೆ ಬರ್ತಿದ್ದ. ಕಳೆದ ರಾತ್ರಿ ಕೂಡ ಚೆನ್ನಾಗಿ ಕುಡಿದು ಮತ್ತಿನಲ್ಲೇ ಮನೆಗೆ ಬಂದಿದ್ದಾನೆ.

ಈ ಒಂದು ಪ್ರಶ್ನೆಗೆ ಹೆಣವಾದಳು ನವ್ಯಾ
ಕುಡಿದು ಬಂದ ಗಂಡನ ಬಳಿ ನವ್ಯಾ ಕೇಳಿದ್ದು ಒಂದೇ ಪ್ರಶ್ನೆಯಂತೆ. ಪ್ರತಿನಿತ್ಯ ಕುಡಿದು ಲೇಟ್ ಆಗಿ ಬರ್ತೀಯಾ ಯಾಕೆ ಎಂದಿದ್ದಾಳೆ. ಈ ಒಂದು ಪ್ರಶ್ನೆ ತನ್ನ ಜೀವವನ್ನೇ ತೆಗೆಯುತ್ತೆ ಅನ್ನೋ ಅರಿವು ನವ್ಯಾಳಿಗೆ ಇರಲಿಲ್ಲ. ಇದೇ ವೇಳೆ ಗಂಡ-ಹೆಂಡ್ತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಅಮಲಿನಲ್ಲಿ ಸತೀಶ್, ನವ್ಯಾಗೆ ರಾಡ್ನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವ್ಯಾಶ್ರೀಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ನವ್ಯಾಶ್ರೀ ಸಾವನ್ನಪ್ಪಿದ್ದಾಳೆ. ಮೃತ ದೇಹವನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಘಟನೆ ಬಳಿಕ ಸತೀಶ್ ಕುಮಾರ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಅಂಜನ್ ಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಅವಿನಾಶ್

ಭ್ರಷ್ಟರ ಬೇಟೆ

Recent Posts

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

3 weeks ago

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

3 months ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

3 months ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

5 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

5 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

5 months ago