ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ವ್ಲಾಗರ್ ಮತ್ತು ಆಕೆಯ ಪತಿ, ಹನಿಟ್ರ್ಯಾಪ್ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರಿಂದ ಬಂಧನವಾಗಿದ್ದಾರೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ವ್ಲಾಗರ್ ರಶೀದಾ (28) ಮತ್ತು ಆಕೆಯ ಪತಿ ನಿಶಾದ್ ಬಂಧಿತ ಆರೋಪಿಗಳು. ಇಬ್ಬರು ಕೂಡ ತ್ರಿಸ್ಸೂರ್ನ ಕುನ್ನಮಕುಲಮ್ ಮೂಲದವರು. ವ್ಲಾಗರ್ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಈಕೆಯ ವಿಡಿಯೋ ನೋಡಿಯೇ ಆಕೆಯ ಹನಿಟ್ರ್ಯಾಪ್ ಬಲೆಗೆ 68 ವರ್ಷದ ವೃದ್ಧ ಬಿದ್ದಿದ್ದ. ಆತನಿಗೆ 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ದಂಪತಿ ವಿರುದ್ಧದ ಪ್ರಕರಣ ದಾಖಲಾಗಿತ್ತು.
ಕಿಲಾಡಿ ಲೇಡಿ ರಶೀದಾ ಕಲ್ಪಕಂಚೇರಿಯಲ್ಲಿ ಅತ್ಯಂತ ಪ್ರಭಾವಿ ಸ್ಥಳೀಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದಳು. ಪ್ರೀತಿಯ ನೆಪ ಮಾಡಿ ಒಮ್ಮೊಮ್ಮೆ ಮನೆಗೆ ಕರೆಸಿ ಹತ್ತಿರವಾಗುತ್ತಿದ್ದಳು. ಆಕೆಯ ವಿಡಿಯೋ ನೋಡಿದವರು ಸುಲಭವಾಗಿ ಆಕೆಯ ಬಲೆಗೆ ಬೀಳುತ್ತಿದ್ದರು. ಹನಿಟ್ರ್ಯಾಪ್ ಮಾಡಲು ಆಕೆಯ ಪತಿ ನಿಶಾದ್ ಎಲ್ಲ ವ್ಯವಸ್ಥೆಯನ್ನು ಮಾಡುತ್ತಿದ್ದ. 68 ವರ್ಷದ ಸಂತ್ರಸ್ತನನ್ನು ಪರಿಚಯಿಸಿಕೊಂಡಿದ್ದ ರಶೀದಾ, ಆಗಾಗ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ಪತಿಗೆ ಬಿಸಿನೆಸ್ ಮಾಡಲು ಹಣ ಬೇಕು ಎಂದು ಕೇಳಿದ್ದಳು.
ರಶೀದಾ ಮಾತು ನಂಬಿ ಸಂತ್ರಸ್ತ ಆಕೆಗೆ ಹಣ ನೀಡಿದ್ದನು. ಕೆಲವು ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಳು. ಯಾವಾಗ ಸಂತ್ರಸ್ತನ ಮನೆಯವರಿಗೆ ಹನಿಟ್ರ್ಯಾಪ್ನಿಂದ ಹಣ ಕಳೆದುಕೊಂಡಿರುವ ವಿಚಾರ ಗೊತ್ತಾಯಿತೋ ಅವರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ರಶೀದಾ ಮತ್ತು ಆಕೆಯ ಗಂಡನನ್ನು ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದಾರೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…