Latest

ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನ ಹತ್ಯೆ!

ಮುಸಲ್ಮಾನ ಯುವತಿಯನ್ನು ವಿವಾಹವಾದ ಹರೀಶ ಹೆಸರಿನ ಯುವಕನನ್ನು ಯುವತಿಯ ಸಹೋದರರು ದೇವಸ್ಥಾನದ ಹತ್ತಿರ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತೇಲಂಗಾಣಾದ ಭಾಗ್ಯನಗರದಲ್ಲಿ ನಡೆದ್ದಿದೆ.
ದೇವರಕೊಂಡಾದಲ್ಲಿ ವಾಸಿಸುವ ಹರೀಶನು 7 ತಿಂಗಳ ಹಿಂದೆ ಭಾಗ್ಯನಗರದ ಎಲ್ಲಾರೆಡ್ಡಿಗುಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದನು. ಅಲ್ಲಿ ಅವನಿಗೆ ಮುಸಲ್ಮಾನ ಯುವತಿಯ ಪರಿಚಯವಾಗಿತ್ತು. ಅವರಲ್ಲಿ ಪ್ರೀತಿ ನಿರ್ಮಾಣವಾಗಿತ್ತು. ಆದರೆ, ಯುವತಿಯ ಕುಟುಂಬದವರಿಗೆ ಅದು ಒಪ್ಪಿಗೆಯಿರಲಿಲ್ಲ. ಯುವತಿಯ ಸಹೋದರರು ಹರೀಶನನ್ನು ಅವಳಿಂದ ದೂರವಿರುವಂತೆ ಹೇಳಿದ್ದರು ಮತ್ತು ಅವನ ಮೇಲೆ ಹಲ್ಲೆ ಮಾಡಿದ್ದರು. ತದನಂತರವೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. 10 ದಿನಗಳ ಹಿಂದೆ ಅವರು ಕದ್ದುಮುಚ್ಚಿ ವಿವಾಹ ಮಾಡಿಕೊಂಡರು.

ಆದರೆ, ಅವರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ಹರೀಶನ ಕುಟುಂಬದವರಿಗೆ ‘ಅವನು ಎಲ್ಲಿ ವಾಸಿಸುತ್ತಿದ್ದಾನೆ ?’ ಎನ್ನುವುದು ತಿಳಿದಿರಲಿಲ್ಲ. ಇನ್ನೊಂದೆಡೆ ಮುಸಲ್ಮಾನ ಯುವತಿಯೂ ನಾಪತ್ತೆಯಾಗಿದ್ದರಿಂದ ಅವಳ ಸಹೋದರರು ಹುಡುಕುತ್ತಿದ್ದರು. ಅವರು ಹರೀಶನ ಸ್ನೇಹಿತ ಶಿವನನ್ನು ಅಪಹರಿಸಿ ಅವನಿಂದ ಹರೀಶನ ಮಾಹಿತಿಯನ್ನು ಪಡೆದುಕೊಂಡರು.

ಯುವತಿಯ ಸಹೋದರರಿಗೆ ದುಲಪಲ್ಲಿ ಪ್ರದೇಶದಲ್ಲಿ ಹರೀಶ ಇದ್ದಾನೆಂದು ತಿಳಿದಾಗ ಅವನನ್ನು ಭೇಟಿಯಾಗಲು ಹೋದನು. ಅವನನ್ನು ಅಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಭೇಟಿಯಾದಾಗ ಯುವತಿಯ ಸಹೋದರರು ಹರೀಶನ ಮೇಲೆ ಹಲ್ಲೆ ಮಾಡುತ್ತಾ ಚೂರಿಯಿಂದ ಇರದಿದ್ದಾನೆ. ಆ ಸಮಯದಲ್ಲಿ ಯುವತಿಯೂ ಅಲ್ಲಿ ಉಪಸ್ಥಿತಳಿದ್ದಳು. ಆಕೆಯ ಸಹೋದರನು ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, 5 ಜನರನ್ನು ವಶಕ್ಕೆ ಪಡೆದಿದ್ದಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago