ಈ ಸರ್ಕಾರದಲ್ಲಿ ತಾವು ಹೇಳಿದ ಕೆಲಸ ಆಗುತ್ತಿಲ್ಲ ಎಂದು ರೋಸಿಹೋದ ಶಾಸಕರೊಬ್ಬರು, ‘ನನ್ನನ್ನು ಯಾವುದೇ ಸಚಿವರ ಪಿಎ, ವಿಶೇಷಾಧಿಕಾರಿ ಮಾಡಿಬಿಡಿ’ ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪ್ರಸಂಗ ನಡೆದಿದೆ. ಕೆಲವು ಸಚಿವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಅನುದಾನ ಕೊಡುತ್ತಿಲ್ಲ, ನಾವು ಹೇಳಿದವರಿಗೆ ವರ್ಗಾವಣೆ ಮಾಡುತ್ತಿಲ್ಲ ಎಂದು ಮೂವತ್ತಕ್ಕಿಂತ ಹೆಚ್ಚು ಶಾಸಕರು ಸಹಿ ಸಂಗ್ರಹಿಸಿದ ಬೆನ್ನಲ್ಲೇ ಗುರುವಾರ ರಾತ್ರಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ನಡೆಸಿದರು.
ಈ ವೇಳೆ ಸಹಿ ಸಂಗ್ರಹ ಹಾಗೂ ಪತ್ರದ ವಿಚಾರವೂ ಪ್ರಸ್ತಾಪವಾಯಿತು. ಕೆಲವು ಹಿರಿಯ ಶಾಸಕರು ಮಾಧ್ಯಮದ ಜತೆ ಅನೌಪಚಾರಿಕ ಚರ್ಚೆ ನಡೆಸುವಾಗ ತಮ್ಮನ್ನು ಸಚಿವರು ನಡೆಸಿಕೊಂಡ ರೀತಿ ಬಗ್ಗೆ ಸಂಕಟ ತೋಡಿಕೊಂಡರು. ಒಬ್ಬ ಶಾಸಕರು, ಶಾಸಕರು ಯಾವ ಮಟ್ಟಿಗೆ ರೋಸಿಹೋಗಿದ್ದಾರೆಂದು ದಾಖಲೆಯನ್ನು ಸಹ ತೋರಿಸಿದರು. ದಾವಣಗೆರೆ ಜಿಲ್ಲೆಯ ಕಿರಿಯ ಶಾಸಕರೊಬ್ಬರು ಸಿಎಂಗೆ ಬರೆದ ಪತ್ರ ಈ ವೇಳೆ ಗಮನಕ್ಕೆ ತಂದರು. ನಮ್ಮ ಯಾವುದೇ ಬೇಡಿಕೆಗೆ ಸರ್ಕಾರದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರದಲ್ಲಿ ಸಚಿವರ ಪಿಎ, ಒಎಸ್ ಡಿ ಮಾತಾದರೂ ನಡೆಯುತ್ತದೆ. ನನ್ನನ್ನು ಈ ಕೆಲಸಕ್ಕೆ ನಿಯೋಜಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಪತ್ರ ಶಾಸಕರ ನಡುವೆ ಹರಿದಾಡಿದ್ದು, ನಗೆಯ ಬುಗ್ಗೆ ಉಮ್ಮಳಿಸಿದೆ. ‘ಶಿವ ಶಿವಾ…’ ಎಂದು ಪತ್ರ ಉಲ್ಲೇಖಿಸಿ ನಗೆಯಾಡಿದ್ದು ಜತೆಗೆ ಒಂದಿಬ್ಬರು ಸಚಿವರ ನಡವಳಿಕೆ ಬಗ್ಗೆ ತೀವ್ರತರ ಚರ್ಚೆ ಕೂಡ ಆಗಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…