ಕಾರವಾರ: ಸರ್ಕಾರಿ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ವೈದ್ಯರೊಬ್ಬರು ಅದನ್ನು ಅನಧಿಕೃತವಾಗಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.ಈ ಸುದ್ದಿಯನ್ನು ಭ್ರಷ್ಟರ ಬೇಟೆ ಪತ್ರಿಕೆ ಜನವರಿ ಸಂಚಿಕೆಯಲ್ಲಿ ಪ್ರಕಟವಾಗಿತ್ತು.ಉತ್ತರ ಕನ್ನಡ ಜಿಲ್ಲಾಧಿಕಾರಿ ಗಳು ಜಿಲ್ಲಾ ಆಯುಷ್ ಸರ್ಕಾರಿ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಔಷ ದ ಕದ್ದ ಕಳ್ಳ
ವೈದ್ಯ ಡಾ .ಸಂಗಮೇಶ ಪರಂಡಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಕೇಂದ್ರದಲ್ಲಿದ್ದ ದಾಸ್ತಾನು ಹಾಗೂ ರಿಜಿಸ್ಟರ್ ಪುಸ್ತಕದಲ್ಲಿದ್ದ ಔಷಧಿ ನಡುವೆ ವ್ಯತ್ಯಾಸ ಕಂಡು ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಡಿಸೆಂಬರ್ 10ರಂದು ಆಸ್ಪತ್ರೆಯ ವೈದ್ಯ ಡಾ ಸಂಗಮೇಶ ಪರಂಡಿ ಅನಧಿಕೃತವಾಗಿ ಔಷಧಿಗಳನ್ನು ಒಯ್ದಿರುವುದು ಪತ್ತೆಯಾಗಿತ್ತು. 25ರಷ್ಟು ಚೂರ್ಣದ ಡಬ್ಬಿಯನ್ನು ಅವರು ಒಯ್ದಿದ್ದರು. ಅವರು ಅದನ್ನು ಯಾವ ಉದ್ದೇಶಕ್ಕೆ ಒಯ್ದರು? ಯಾರಿಗೆ ವಿತರಿಸಿದರು? ಎಂದು ಮೇಲಧಿಕಾರಿಗಳು ಪ್ರಶ್ನಿಸಿದರೂ ಯಾವುದಕ್ಕೂ ಕ್ಯಾರೆ ಮಾಡದೆ ಏನು ಉತ್ತರಿಸಿರಲಿಲ್ಲ.
ಆಸ್ಪತ್ರೆಯ ಔಷಧ ನಾಪತ್ತೆಯಾಗಿರುವುದರಿಂದ ಔಷಧ ಸಂಗ್ರಹಣೆಯಲ್ಲಿ ತೊಂದರೆಯಾಗುವುದು, ರೋಗಿಗಳ ಅಗತ್ಯಕ್ಕೆ ತಕ್ಕ ಹಾಗೇ ಔಷಧ ನೀಡಲು ಆಗದಿರುವ ಬಗ್ಗೆ ಮೇಲಧಿಕಾರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನಲೆ ಡಾ ಸಂಗಮೇಶ್ ಅವರಿಗೆ ಆಯುಷ್ ಇಲಾಖೆಯ ಆಯುಕ್ತರಿಂದ ನೋಟಿಸ್ ಜಾರಿಯಾಗಿತ್ತು.
ಆಯುಷ್ ಇಲಾಖೆ ಔಷಧಗಳು ಹಾಳಾಗಿರುವುದು ಹಾಗೂ ಅದನ್ನು ಸುಟ್ಟು ನಾಶ ಮಾಡಿದ ಬಗ್ಗೆ ಡಾ ಸಂಗಮೇಶ ಅವರು ಈ ಹಿಂದೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದು, ಆ ಬಗ್ಗೆಯೂ ನೋಟಿಸ್ ಮೂಲಕ ಪ್ರಶ್ನಿಸಲಾಗಿದೆ. ಇದೇ ರೀತಿ ವರ್ತನೆ ಮುಂದುವರೆದರೆ ಸೇವೆಯಿಂದಲೇ ವಜಾ ಮಾಡುವ ಬಗ್ಗೆಯೂ ಆಯುಷ್ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆಯುಷ್ ಇಲಾಖೆಯಲ್ಲಿನ ಔಷಧಿಗಳ ಬಗ್ಗೆ ಡಾ ಸಂಗಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.ಈ ಹಿಂದೆ ತಾನೇ ಈ ಡಾಕ್ಟರ ಸಂಗಮೇಶ ಔಷಧಿಗಳನ್ನು ಅನಧಿಕೃತವಾಗಿ ಸುಟ್ಟು ಹಾಕಿ , ಬೆರೆಯವರ ಮೇಲೆ ಸುಳ್ಳು ದೂರು ಸಲ್ಲಿಸಿದ್ದರು. ಈಗ ಆ ಕೇಸ ಕೂಡ ಇವರ ಬುಡಕ್ಕೆ ಬಂದಿದ್ದು ಜಿಲ್ಲಾಧಿಕಾರಿಗಳ ಅಧಿಕೃತ ಆದೇಶ ಮಾತ್ರ ಭಾಕಿ ಇತ್ತು. ಇದಾದ ನಂತರ ಡಾ ಸಂಗಮೇಶ ಅವರ ಮೇಲೆ ರೋಗಿಯೊಬ್ಬರು ಹಲ್ಲೆ ನಡೆಸಿ ಅವರು ಆಸ್ಪತ್ರೆಗೆ ಸಹ ದಾಖಲಾಗಿದ್ದರು.ಪ್ರಕಟವಾಗಿತ್ತು.ಉತ್ತರ ಕನ್ನಡ ಜಿಲ್ಲಾಧಿಕಾರಿ ಗಳು ಜಿಲ್ಲಾ ಆಯುಷ್ ಸರ್ಕಾರಿ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಔಷ ದ ಕದ್ದ ಕಳ್ಳ
ವೈದ್ಯ ಡಾ .ಸಂಗಮೇಶ ಪರಂಡಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…