Latest

13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿಯಾಗಿದ್ದ ಶಿಕ್ಷಕಿ..!: ಗರ್ಭಪಾತಕ್ಕೆ ಕೋರ್ಟ್ ಮೊರೆ.

ಗುಜರಾತ್‌ನ ಸೂರತ್ ನಗರದ ಅಚ್ಚರಿ ಮೂಡಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಟ್ಯೂಷನ್‌ಗೆ ಬರುತ್ತಿದ್ದ 13 ವರ್ಷದ ಬಾಲಕನೊಂದಿಗೆ ಅವೈಧ ಸಂಬಂಧ ಹೊಂದಿ ಗರ್ಭಿಣಿಯಾಗಿದ್ದ 23 ವರ್ಷದ ಯುವ ಶಿಕ್ಷಕಿ ಇದೀಗ ಗರ್ಭಪಾತಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ನಾಚಿಕೆಗೇಡು ತರಿಸಿದ್ದು, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈಕೆ ತನ್ನ ಶಿಷ್ಯನನ್ನು ಬಲವಂತವಾಗಿ ಪ್ರೀತಿಯ ಬಲೆಗೆ ಸೆರೆಹಾಕಿ, ನಂತರ ಆತನನ್ನು ಒಪ್ಪಿಗೆಯಿಲ್ಲದೆ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ. ಕಳೆದ ಏಪ್ರಿಲ್ 29ರಂದು ಸುದೀರ್ಘ ಹುಡುಕಾಟದ ಬಳಿಕ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ಶಿಕ್ಷಕಿಯನ್ನು ಬಂಧಿಸಿದರು. ಈ ಸಂಬಂಧ ಬಾಲಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸದ್ಯ ಶಿಕ್ಷಕಿ ಸೂರತ್ ಜೈಲಿನಲ್ಲಿ ಬಂಧಿಯಾಗಿದ್ದು, ತನಗೆ ಗರ್ಭವಿದ್ದು, ಅದಕ್ಕೆ ಕಾರಣ 13 ವರ್ಷದ ವಿದ್ಯಾರ್ಥಿಯೇ ಎಂಬ ಹೇಳಿಕೆ ನೀಡಿದ್ದಾಳೆ. ಪ್ರಕರಣದ ತೀವ್ರತೆಯನ್ನು ಗಮನಿಸಿದ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.

ಇದೀಗ ಶಿಕ್ಷಕಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ತನ್ನ ಹಾಗೂ ಗರ್ಭದಲ್ಲಿರುವ ಭ್ರೂಣದ ಜೀವಕ್ಕೆ ಅಪಾಯವಿದೆ. ಹೆರಿಗೆಯ ವೇಳೆ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಮನವರಿಕೆ ಮಾಡಿದ್ದಾಳೆ. ಹೀಗಾಗಿ ಗರ್ಭಪಾತಕ್ಕೆ ಕಾನೂನು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾಳೆ.

ಈ ಸಂಬಂಧ ನ್ಯಾಯಾಲಯ, ಪ್ರಕರಣದ ವರದಿಯನ್ನು ಪಡೆಯಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಮುಂದಿನ ನಿರ್ಧಾರಕ್ಕಾಗಿ ವಿಚಾರಣೆ ಮುಂದೂಡಲಾಗಿದೆ.

ಈ ಘಟನೆ ಸಾಮಾಜಿಕವಾಗಿ ಹಾಗೂ ಕಾನೂನು ಹಿನ್ನಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನ ಹಕ್ಕುಗಳ ರಕ್ಷಣೆಯ ವಿಚಾರವೂ ಪ್ರಮುಖ ಅಂಶವಾಗಿದೆ.

nazeer ahamad

Recent Posts

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

3 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

3 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

4 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

4 hours ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

4 hours ago