Latest

ಬೆಂಗಳೂರಿನಿಂದ ಲಕ್ನೋ ಹೊರಟಿದ್ದ ಮಹಿಳೆ​ ಮೇಲೆ ಟಿಸಿ ದರ್ಪ​!

ಜನಸಾಮಾನ್ಯರ ಮೇಲೆ ದರ್ಪ ತೋರಿಸೋಕೆ ಹೋದ್ರೆ ಏನಾಗುತ್ತೇ ಅನ್ನೋಕೆ ಈ ಘಟನೆಯೇ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್​ ಜೊತೆ ಮಾತಿನ ಚಕಮಕಿ ನಡೆಸ್ತಿರೋ ಮಹಿಳೆ. ಮಾತಿಗೆ ಮಾತು ಬೆಳೆದು ಟಿಸಿ ಮುಂದೆ ಕಣ್ಣೀರು. ಮಹಿಳೆಯ ಕಣ್ಣೀರ ಕಥೆ ಕಂಡು ಟಿಕೆಟ್​ ಕಲೆಕ್ಟರ್​ ಅನ್ನ ತರಾಟೆಗೆ ತೆಗೆದುಕೊಂಡ ಸಹ ಪ್ರಯಾಣಿಕರು. ಇಂತದೊಂದು ದೃಶ್ಯ ಕಂಡು ಬಂದಿರೋದು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ.
ಕೆ.ಆರ್​ ಪುರಂನ ರೈಲ್ವೇ ನಿಲ್ದಾಣದಿಂದ ಲಖನೌಗೆ ಪ್ರಯಾಣ ಬೆಳೆಸಲು ಮಹಿಳೆಯೊಬ್ಬರು ತಮ್ಮ ಲಗೇಜ್ ಸಮೇತರಾಗಿ ಆಗಮಿಸಿದ್ರು. ಈ ವೇಳೆ ಮಹಿಳೆಯನ್ನ ಕಂಡ ಟಿಕೆಟ್​ ಕಲೆಕ್ಟರ್​ ಒರ್ವ ಟಿಕೆಟ್​ ತೋರಿಸುವಂತೆ ಸೂಚಿಸಿದ್ನಂತೆ. ಈ ವೇಳೆ ಟಿಕೆಟ್​ ತೋರಿಸಿದ ಮಹಿಳೆಗೆ ಟಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ. ಟ್ರೈನ್​ ಏರುವ ಮುನ್ನವೇ ಟಿಸಿ ನನ್ನ ಬಳಿ ಟಿಕೆಟ್​ ಕೇಳಿದ್ದು ಎಷ್ಟು ಸರಿ ಅಂತ ಸಹ ಮಹಿಳೆ ಅಸಮಾಧಾನ ಹೊರಹಾಕಿದ್ದಾಳೆ. ಅಲ್ಲದೇ ಮಹಿಳೆಯನ್ನ ಚುಡಾಯಿಸುವ ದೃಷ್ಠಿಯಿಂದ ಟಿಕೆಟ್​ ಕಲೆಕ್ಟರ್​ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಮಹಿಳೆ ಆರೋಪಿಸಿದ್ದಾರೆ. ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಕಣ್ಣೀರಿಡ್ತಿರೋದನ್ನ ಕಂಡ ಸಹ ಪ್ರಯಾಣಿಕರು ಟಿಸಿಯನ್ನ ತರಾಟೆಗೆ ತೆಗೆದುಕೊಂಡು ಎಳೆದಾಡಿದ್ದಾರೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್​ ಆಗ್ತಿದ್ದು, ಟಿಸಿ ವರ್ತನೆ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಸಿ ಮದ್ಯಪಾನ ಮಾಡಿ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಹೇಳಲಾಗ್ತಿದೆ.
ಟಿಕೆಟ್​ ಕಲೆಕ್ಟರ್​ ಮಹಿಳೆಯೊಂದಿಗೆ ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್​ ಆಗ್ತಿದ್ದ ವೇಳೆ ಸಹ ಪ್ರಯಾಣಿಕರು ಆತನನ್ನ ಎಳೆದು ತಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ಈ ದೃಶ್ಯ ಎಲ್ಲೆಡೆ ವೈರಲ್​ ಆಗಿ ಭಾರೀ ವಿರೋಧ ವ್ಯಕ್ತವಾಗಲು ಶುರುವಾಯ್ತೋ ತಕ್ಷಣ ಎಚ್ಚೆತ್ತ ರೈಲ್ವೇ ಅಧಿಕಾರಿಗಳು ಟಿಕೆಟ್​ ಕಲೆಕ್ಟರ್​ ಅನ್ನ ಕೆಲಸದಿಂದ ಅಮಾನತು ಮಾಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಹಿಳೆ ಮೇಲೆ ಅಧಿಕಾರದ ದರ್ಪ ತೋರಿದ ಟಿಕೆಟ್​ ಕಲೆಕ್ಟರ್​ ಕೆಲಸ ಕಳೆದುಕೊಂಡು ಮನೆ ಸೇರಿದ್ದಾನೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago