Latest

ಯುಪಿಐ ವ್ಯವಹಾರದ ಮೇಲೆ ತೆರಿಗೆ ಇಲಾಖೆಯ ನೋಟಿಸ್‌ ಶಾಕ್ : ಹೂವಿನ ವ್ಯಾಪಾರಿಗೆ ₹52 ಲಕ್ಷ ಬಿಲು!

ಬೆಂಗಳೂರು, ಜುಲೈ 18: ಡಿಜಿಟಲ್ ಪಾವತಿಯ ಸುಲಭ ಮಾರ್ಗವೆನಿಸಿದ ಯುಪಿಐ (UPI) ಬಳಕೆ ಈಗ ಸಣ್ಣ ವ್ಯಾಪಾರಿಗಳಿಗೆ ಶಾಪವಾಯಿತೆ ಎಂಬ ಅನುಮಾನ ಹುಟ್ಟುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ವ್ಯಾಪಾರಿಗಳಿಗೆ ಈಗ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್‌ಗಳು ಬರುತ್ತಿದ್ದು, ಇಡೀ ಚಿಲ್ಲರೆ ವ್ಯಾಪಾರ ವಲಯವೇ ಬೆಚ್ಚಿಬಿದ್ದಂತಾಗಿದೆ.

ತಾಜಾ ಉದಾಹರಣೆ – ಬೆಂಗಳೂರು ಉಳ್ಳಾಲದ ಹೂವಿನ ವ್ಯಾಪಾರಿ ಸೋಮೇಗೌಡ. ಕಳೆದ ದಶಕದಿಂದ ಹೂವಿನ ವ್ಯಾಪಾರದಲ್ಲಿ ತೊಡಗಿರುವ ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ₹52 ಲಕ್ಷ ಪಾವತಿಸಬೇಕೆಂದು ನೋಟಿಸ್ ಬಿದ್ದಿದೆ. ಈ ಕುರಿತು ಮಾತನಾಡಿದ ಸೋಮೇಗೌಡ, “ನಾನು ಸಣ್ಣ ಮಟ್ಟದ ವ್ಯಾಪಾರಿ. ಹೂವಿನ ವ್ಯಾಪಾರದ ಲಾಭವೇ ಕಡಿಮೆ. ಒಂದು ತಿಂಗಳ ಹಿಂದೆ ನೋಟಿಸ್ ಬಂದಿದೆ. ಇಷ್ಟು ಭಾರಿ ಮೊತ್ತ ಎಲ್ಲಿಂದ ಕೊಡಬೇಕು?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ನಂತರ ಬೆಂಗಳೂರಿನ ಅನೇಕ ಚಿಲ್ಲರೆ ಅಂಗಡಿಗಳು ಯುಪಿಐ ಬಳಕೆಯನ್ನು ನಿಲ್ಲಿಸಲು ಆರಂಭಿಸಿದ್ದು, ‘ಕ್ಯಾಶ್ ಓನ್ಲಿ – ದಯವಿಟ್ಟು ನಗದು ನೀಡಿ’ ಎಂಬ ಪೋಸ್ಟರ್‌ಗಳು ಅಂಗಡಿಗಳ ಮುಂದೆ ತಾನೇ ಹೇಳಿಕೊಳ್ಳುತ್ತಿವೆ. ಈ ಬೆಳವಣಿಗೆ ಡಿಜಿಟಲ್ ಲೆನ್‌ದೆನ್‌ಗೆ ಓರೆಯಾಗುತ್ತಿರುವ ಚಿಕ್ಕ ವ್ಯಾಪಾರಿಗಳ ಆರ್ಥಿಕ ಅಸ್ಥಿರತೆಗೆ ಸಂಕೇತವೆಂಬಂತಾಗಿದೆ.

ಅಧಿಕಾರಿಗಳ ಪ್ರಕಾರ, ಯುಪಿಐ ಅಥವಾ ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ದಾಖಲಾಗುತ್ತಿರುವ ಲೆನ್‌ದೆನ್ ಮಾಹಿತಿಯ ಆಧಾರದ ಮೇಲೆ ತೆರಿಗೆ ಲೆಕ್ಕಾಚಾರ ನಡೆಯುತ್ತಿದೆ. ಆದರೆ, ಕಡಿಮೆ ಆದಾಯದ ಮೇಲೆ ದುಡ್ಡು ಓಡಿಸುತ್ತಿರುವ ಸಣ್ಣ ವ್ಯಾಪಾರಿಗಳು ನಿಜಕ್ಕೂ ಬಿದ್ದಿರುವ ಸಮಸ್ಯೆಗೆ ಸ್ಪಂದನೆ ಬೇಕೆಂದು ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.

nazeer ahamad

Recent Posts

ರೀಲ್ಸ್ ಹುಚ್ಚಾಟದ ದುರಂತ: ಹುಬ್ಬಳ್ಳಿಯಲ್ಲಿ ಬಾಲಕ ಸಾವು – ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…

3 hours ago

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

16 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

18 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago