
ದುಬೈ: ಜನಪ್ರಿಯ ತಜಕಿಸ್ತಾನದ ಗಾಯಕ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಅಬ್ದು ರೋಜಿಕ್ ಅವರನ್ನು ಶನಿವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಾಂಟೆನೆಗ್ರೊ ದೇಶದಿಂದ ಶನಿವಾರ ಮುಂಜಾನೆ ಸುಮಾರು 5 ಗಂಟೆಗೆ ದುಬೈಗೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ರೋಜಿಕ್ ಅವರನ್ನು ಸ್ಥಳೀಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಅವರ ನಿರ್ವಹಣಾ ಸಂಸ್ಥೆ ಖಲೀಜ್ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.
ರೋಜಿಕ್ ಬಂಧನದ ಬಗ್ಗೆ ನಿಖರವಾದ ಕಾರಣವನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಪ್ರಾಥಮಿಕ ಮಾಹಿತಿಯಂತೆ “ಕಳ್ಳತನಕ್ಕೆ ಸಂಬಂಧಿಸಿದ ಆರೋಪ” ಆಧಾರದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿಗೆ ಏರಿದ ರೋಜಿಕ್
ಅಬ್ದು ರೋಜಿಕ್ ತಮ್ಮ ಗಾಯನ ಪ್ರತಿಭೆಯ ಮೂಲಕ ಮಾತ್ರವಲ್ಲ, ಬಿಗ್ ಬಾಸ್ ಸೀಸನ್ 16 ರಿಯಾಲಿಟಿ ಶೋ ಮೂಲಕವೂ ಭಾರತೀಯ ರಸಿಕರ ನಡುವೆಯೂ ಗಮನಸೆಳೆದಿದ್ದಾರೆ. ಅವರ “ಓಹಿ ದಿಲಿ ಜೋರ್”, “ಚಾಕಿ ಚಾಕಿ ಬೋರಾನ್” ಮತ್ತು “ಮೋಡರ್” ಮುಂತಾದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿವೆ.
ಅವರ ಬಂಧನದ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದ್ದು, ಅಧಿಕೃತ ಪ್ರತಿಕ್ರಿಯೆಗೆ ನೋಡಬೇಕಾಗಿದೆ.