Latest

ತಾಯಿ-ಮಗಳ ಅನುಮಾನಾಸ್ಪದ ಸಾವು: ಗಂಡನ ಮೇಲೆ ವರದಕ್ಷಣೆ ಕಿರುಗೋಳ ಹಾಗೂ ಕೊಲೆ ಆರೋಪ..?

ನಂಜನಗೂಡು: ಮದುವೆ ಆಗಿ 22 ವರ್ಷಗಳೇ ಕಳೆದರೂ ಗಂಡನಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ ಗೃಹಿಣಿ ಹಾಗೂ ಆಕೆಯ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕು ಹುಲ್ಲ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ತಾಯಿ ಮತ್ತು ಮಗಳ ಅನುಮಾನಾಸ್ಪದ ಸಾವಿನ ಬಗ್ಗೆ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು ಈ ಇಬ್ಬರ ಸಾವಿಗೆ ಪತಿ ಗಂಡನೇ ಹೊಣೆ ಎಂದು ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ.
ತಾಯಿ ಮಗಳ ಸಾವಿಗೆ ಕಾರಣ ಕೇಳಲು ಹೋದ ಗ್ರಾಮಸ್ಥರ ಜೊತೆ ಪೊಲೀಸರು ಸಂಯಮದಿಂದ ವರ್ತಿಸದೆ ಕೊಲೆ ಆರೋಪ ಹೊತ್ತವರ ಪರ ಶಾಮಿಲಾಗಿ ದರ್ಪ ಮೆರೆದಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.
ಅಲ್ಲದೆ ಪತಿರಾಯನೇ ಪತ್ನಿ ಹಾಗೂ ಮಗಳನ್ನ ಕೊಲೆ ಮಾಡಿ ನೇಣು
ಹಾಕಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
.ತಾಯಿ ಮಹದೇವಮ್ಮ( 38) ಮಗಳು ಸುಪ್ರಿಯ(20) ಮೃತ ದುರ್ದೈವಿಗಳು. ಕೊಲೆ ಆರೋಪ ಹೊತ್ತ ಪತಿ ಜಯರಾಮು ಘಟನೆ ಬೆಳಕಿಗೆ ಬಂದ ಕೆಲವು ಗಂಟೆಗಳ ಕಾಲ ನಾಪತ್ತೆಯಾಗಿ ನಂತರ ಪ್ರತ್ಯಕ್ಷವಾಗಿದ್ದಾನೆ. ಎಂದು ತಿಳಿದು ಬಂದಿದೆ.ಸುಮಾರು 22 ವರ್ಷಗಳ ಹಿಂದೆ ಎಚ್ ಡಿ ಕೋಟೆ ತಾಲೂಕು ನೂರಲ ಕುಪ್ಪೆ ಗ್ರಾಮದ ಮಹದೇವಮ್ಮಳನ್ನ ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಸುಪ್ರಿಯ ಎಂಬ 20 ವರ್ಷದ ಮಗಳಿದ್ದಾಳೆ.  22 ವರ್ಷಗಳೆ ಉರುಳಿದರೂ ಜಯರಾಮು ಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ. ಈ ವಿಚಾರದಲ್ಲಿ ಪತ್ನಿ ಜೊತೆ ಆಗಾಗ ಜಗಳವಾಡುತ್ತಲೇ ಇದ್ದ.
ಇದರಿಂದ ಮಗಳು ಸುಪ್ರಿಯ ಸಹ ಮನನೊಂದಿದ್ದಳು ಎಂದು ಹೇಳಲಾಗಿದೆ ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಳೆಂದು ತಿಳಿದು ಬಂದಿದೆ ಆದರೆ ಪೊಲೀಸರಿಂದಾಗಲಿ
ಅಥವಾ ಗಂಡನ ಮನೆಯವರಿಂದಾಗಲಿ ಮಹದೇವಮ್ಮ ಗೆ ನ್ಯಾಯ ದೊರೆತಿಲ್ಲವೆಂದು ತವರು ಸಂಬಂಧಿಕರು ಆರೋಪಿಸಿದ್ದಾರೆ.ಗಂಡನ ವರದಕ್ಷಿಣೆ ದಾಹಕ್ಕೆ ಬೇಸತ್ತಿದ್ದ ಮಹದೇವಮ್ಮ ಹಾಗೂ ಮಗಳು ಮನೆಯ ಬಳಿ ಇರುವ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಆರೋಪಿಸಿರುವ ಮೃತ ಮಹಿಳೆ ಮಹಾದೇವಮ್ಮ ತವರು ಮನೆಯ ಸಂಬಂಧಿಕರು ಪೊಲೀಸರ ವರ್ತನೆಯನ್ನೂ ಸಹ ಖಂಡಿಸಿದ್ದಾರೆ.

ಗಂಡನ ಕಿರುಕುಳದಿಂದ ಹೆಂಡತಿ ಮಹದೇವಮ್ಮ ಒಬ್ಬಳೇ ಸಾಯಬೇಕಿತ್ತು ಆದರೆ ಇಲ್ಲಿ ತಾಯಿ ಮಗಳು ಇಬ್ಬರು ಹೇಗೆ ನೇಣು ಬಿಗಿದುಕೊಂಡು ಸಾವನ್ನಪ್ಪಲು ಸಾಧ್ಯ..? ಎಂದು ಅನುಮಾನ ವ್ಯಕ್ತಪಡಿಸಿ ಇದು ಕೊಲೆ ಮಾಡಿ ನೇಣು ಬಿಗಿದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ

ಸ್ಥಳಕ್ಕೆ ಡಿ ವೈ ಎಸ್ ಪಿ ರಘು,ವೃತ್ತ ನಿರೀಕ್ಷಕ ಚಂದ್ರಶೇಖರ್, ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಶವಗಳನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವಗಳನ್ನು ನೀಡಲಾಗಿದೆ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ , ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿ ಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ: ಮೋಹನ್

nazeer ahamad

Recent Posts

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

2 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

2 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

2 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

3 hours ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

3 hours ago