Latest

ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಹಠಾತ್ ದಾಳಿ : ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ದಿನಗಳಲ್ಲಿ ಸ್ವತ್ತಿನ ಅಪರಾಧಗಳ ವರದಿಯಾಗುವ ಹಾಗೂ ಅಕ್ರಮ ಬಡ್ಡಿ ವ್ಯವಹಾರ, ಗ್ಯಾಬ್ಲಿಂಗ್ ಇತ್ಯಾದಿ ಅಕ್ರಮ ಚಟುವಟಿಕೆಗಳ ಕುರಿತು ದೂರು ಹಾಗೂ ಮಾಹಿತಿ ಬಂದ ಹಿನ್ನಲೆಯಲ್ಲಿ ದಿನಾಂಕ: 03-02-2025 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 04-02-2025 ರ ಬೆಳಗ್ಗೆ 06 ಗಂಟೆಯವರೆಗೆ ವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನನಿತ್ಯದ ಗಸ್ತಿನ ಜೊತೆಗೆ ಹೆಚ್ಚುವರಿಯಾಗಿ ವಿಶೇಷ ರಾತ್ರಿ ಗಸ್ತನ್ನು ನಿಯೋಜಿಸಿ. ಪ್ರಮುಖ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಬ್ಯಾಂಕ್ ಎಟಿಎಂ, ಲಾಡ್ಜ್, ರೆಸಾರ್ಟ, ಬೀಗ ಹಾಕಿದ ಮನೆಗಳು, ಒಂಟಿ ಮನೆಗಳನ್ನು ಚೆಕ್ ಮಾಡಿ. ಹೆಚ್ಚುವರಿ ಚೆಕ್ ಪೊಸ್ಟಗಳನ್ನು ತೆಗೆದು ಸಂಶಯಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಚೆಕ್ ಮಾಡಿ. ನಿಗಾ ಇಟ್ಟು
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಬ್ಲಿಂಗ್ ಹಾಗೂ ಇತರೇ ಅಕ್ರಮ ವ್ಯವಹಾರ ನಡೆಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಮುಂಡಗೋಡ ಪಿ.ಐ ರವರು ಡಿ.ಎಸ್.ಪಿ ಶಿರಸಿ ರವರಿಂದ ದಾಳಿ ನಡೆಸಲು ಅನುಮತಿ ಪಡೆದು ಮಾನ್ಯ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ಮಾನ್ಯ ಪೊಲೀಸ್ ಉಪಾಧಿಕ್ಷಕರು, ಶಿರಸಿ ರವರ ನೇತೃತ್ವದಲ್ಲಿ 21 ತಂಡವನ್ನು ರಚನೆ ಮಾಡಿ ಏಕಕಾಲದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಾದ 1] ಪೈರೋಜಖಾನ ಅಹ್ಮದಖಾನ ಖಾನಜಾದೆ ಸಾ||ಇಂದಿರಾನಗರ, ಮುಂಡಗೋಡ, 2]ಮಹ್ಮದ ಶಫೀ ಮುನೀರಹ್ಮದ ಮುಗಳಿಕಟ್ಟಿ ಸಾ||ಇಂದಿರಾನಗರ, ಮುಂಡಗೋಡ, 3]ಸಾಹೀದ್ ಅಬ್ದುಲಖಾದರ ಮಿಟ್ಟಿವಾಲೆ ದೇಶಪಾಂಡೆನಗರ, ಮುಂಡಗೋಡ, 4]ಮಂಜುನಾಥ ನಾಗೇಂದ್ರ ಕಾಜಗಾರ ಸಾ॥ಸಾಲಗಾಂವ ತಾ!ಮುಂಡಗೋಡ, 5]ಕರಿಂಖಾನ್ ಹಿಮ್ಮತಖಾನ್ ಖಾನಜಾದೆ ಸಾ||ನೂರಾನಿಗಲ್ಲಿ, ಮುಂಡಗೋಡ, 6] ಸಂಜು ಕೃಷ್ಣ ಹರಿಜನ ಸಾ॥ಆನಂದನಗರ, ಮುಂಡಗೋಢ. 7]ಕಿರಣ ನಾರಾಯಣ ಚವ್ಹಾಣ ಸಾ॥ಹಳ್ಳೂರ ಓಣಿ. ಮುಂಡಗೋಡ, 8] ವಿಶಾಲ ಅಣ್ಣಪ್ಪ ಶೆಟ್ ಸಾ।।ಹುಬ್ಬಳ್ಳಿರೋಡ್. ಮುಂಡಗೋಡ, 9]ವಸಂತ ಕರಿಯಪ್ಪ ಕೊರವರ ಸಾ||ಗಾಂಧಿನಗರ, ಮುಂಡಗೋಡ, 10]ಮಹ್ಮದಜಾಫರ್ ರಾಜೇಸಾಬ ಚವಡಿ ಸಾ|ಇಂದಿರಾನಗರ, 11)ಅಮೀರಖಾನ್ ಶೇರಖಾನ್ ಪಠಾಣ ಸಾ।।ಆನಂದನಗರ ಪ್ಲಾಟ್ ಮುಂಡಗೋಡ, 12)ಸುನೀಲ ಸುಧಾಕರ ಶೆಟ್ಟಿ ಸಾ।।ಕೆ.ಹೆಚ್.ಬಿ ಕಾಲೋನಿ, ಮುಂಡಗೋಡ ರವರ ವಾಸದ ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲಿಸಲಾಗಿ ಸದರಿ ಮೇಲ್ಕಂಡ ವ್ಯಕ್ತಿಗಳು ಅಕ್ರಮವಾಗಿ ಬಡ್ಡಿ ವ್ಯವಹಾರದ ವಸೂಲಿಗೆ ಸಾರ್ವಜನಿಕರಿಗೆ ತೊಂದರೆ ಕೊಡುವ ಸಂಭವ ಕಂಡುಬಂದಿದ್ದರಿಂದ ಈ ಮೇಲಿನ 12 ಜನರ ವಿರುದ್ದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.
ಹಾಗೂ
ದಿನಾಂಕ:-04/02/2025 ರಂದು ಪಿ.ಎಸ್.ಐ ಹನುಮಂತ ಕುಡಗುಂಟಿ ಹಾಗೂ ಠಾಣೆಯ ಸಿಬ್ಬಂದಿಯವರು ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಮ್ ಹತ್ತಿರ ಆರೋಪಿತರಾದ 1] ಮಹಮ್ಮದ ಸಾದೀಕ್ ಮೋದಿನಸಾಬ ಗಾಜೀಪೂರ ಸಾ||ಇಂದಿರಾನಗರ ಪ್ಲಾಟ್ ಮುಂಡಗೋಡ 2] ವಾಸಿಂಖಾನ್ ಗೂಡುಖಾನ್ ಬೆಂಡಿಗೇರಿ ಸಾ|ಆನಂದನಗರ ಮುಂಡಗೋಡ 3] ಮಕ್ಬೂಲ್ ಅಹಮದ ರಜಾಕಷಾ ಯಳ್ಳೂರು ಸಾ।।ಯಲ್ಲಾಪೂರ ರಸ್ತೆ ಮುಂಡಗೋಡ 4] ಮದುಸಿಂಗ್ ತ ಗಂಗಾರಾಮಸಿಂಗ್ ರಜಪೂತ ಸಾ||ಬಸಾಪೂರ, ಮುಂಡಗೋಡ 5] ವಿರೇಶ ಶಂಬು ಹುಲಗೂರು ಸಾ||ನಂದೀಶ್ವರ ನಗರ ಮುಂಡಗೋಡ 6] ಮಂಜುನಾಥ ಕಾಂತೇಶ ಹೊಟ್ಲರ್ ಸಾ॥ಕಂಬಾರಗಟ್ಟಿ ಪ್ಲಾಟ್ ಮುಂಡಗೋಡ ಮತ್ತು ಇನ್ನೂ ಇಬ್ಬರೂ ತಮ್ಮ ತಾಬಾ ಇದ್ದ ಎರಡು ಕಟ್ಟಿಗೆಯ ಬಡಿಗೆಗಳು, ಎರಡು ಕಬ್ಬಿಣದ ರಾಡಗಳು ಹಾಗೂ ಖಾರದ ಪುಡಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅಥವಾ ರಸ್ತೆಯಲ್ಲಿ ಓಡಾಡುವ ಜನರಿಗೆ ದರೋಡೆ ಮಾಡುವ ಉದ್ದೇಶದಿಂದ ತಯಾರಿಲ್ಲದ್ದಾಗ 5 ಜನರು ಸಿಕ್ಕಿದ್ದು ಇನ್ನು 3 ಜನ ಓಡಿ ಹೋಗಿದ್ದು, ಸದರಿ ಆರೋಪಿತರ ವಿರುದ್ದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ನಂತರ, ಮಂಜುನಾಥ ಕಾಂತೇಶ ಹೋಟಕರ್ @ ಶೇರಖಾನೆ ಪ್ರಾಯ-26 ವರ್ಷ ಉದ್ಯೋಗ-ಕೂಲಿಕೆಲಸ ಸಾ||ಕಂಬಾರಗಟ್ಟಿ ಪ್ಲಾಟ್, ಮುಂಡಗೋಡ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ದಾಖಲೆಗಳು ಸಿಕ್ಕಿದ್ದು ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಹಕಾರಿ ಸಂಘ ಶಿರಸಿ ಇವರಿಗೆ ಮಾಹಿತಿ ನೀಡಿದಂತೆ ಸದರಿ ಅಧಿಕಾರಿಯವರು ಈ ಬಗ್ಗೆ ಕಾನೂನು ಕ್ರಮ ಜರೂಗಿಸಲು ಮುಂಡಗೊಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇವರ ದೂರಿನ ಮೇರೆಗೆ ಜಮೀರ ನಜೀರ ಅಹಮ್ಮದ್ ದರ್ಗಾವಾಲೆ ಮತ್ತು ಕಾಂತೇಶ ಹೋಟಕರ ಇವರ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ

ಮುಂದುವರೆದು, ಮಕ್ಬೂಲ್ ಅಹಮದ ತಂದೆ ರಜಾಕಷಾ ಯಳ್ಳೂರು, ಯಲ್ಲಾಪೂರ ರಸ್ತೆ ಮುಂಡಗೋಡ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ದಾಖಲೆಗಳು ಸಿಕ್ಕಿದ್ದು ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಹಕಾರಿ ಸಂಘ ಶಿರಸಿ ಇವರಿಗೆ ಮಾಹಿತಿ ನೀಡಿದಂತೆ ಸದರಿ ಅಧಿಕಾರಿಯವರು ಈ ಬಗ್ಗೆ ಕಾನೂನು ಕ್ರಮ ಜರೂಗಿಸಲು ಮುಂಡಗೊಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇವರ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ದಿನಾಂಕ: 20/01/2025 ರಂದು ಸಂಜೆ 07-00 ಗಂಟೆಯ ಸುಮಾರಿಗೆ ಶ್ರೀ ಕರಿಂಖಾನ್
ಹಿಮ್ಮತಖಾನ ಖಾನ್‌ಜಾದೆ ಸಾ।।ನೂರಾನಿಗಲ್ಲಿ, ಮುಂಡಗೋಡ ಇವರು ಮನೆಯಲ್ಲಿ ಇರುವಾಗ ಜಮೀರ ಅಹ್ಮದ ದರ್ಗಾವಾಲೆ ಈತನು ತನ್ನೊಂದಿಗೆ ಮದರಷಾ ಮಕಾಂದರ, ಮಕ್ಖುಲ್‌ ಅಹ್ಮದ ಯಳ್ಳೂರ, ಮಹ್ಮದಸಾಧೀಕ ಚಾವುರ, ನಾಬಿರಾಜ ಅಗಡಿ, ಮಂಜು ನವಲೆ, ದೀಪಕ ರೊಟ್ಟಿಗವಾಡ, ರಾಹುಲ ಹಲಿಯಪ್ಪನವರ, ಶಾಹೀಲ್ ಜೀಲಾನಿ. ಮಧುಸಿಂಗ್ ರಜಪೂತ. ಮೊಹ್ಮದಸಾಧೀಕ ಗಾಜಿಪೂರ, ವಾಸಿಮಖಾನ ಬೆಂಡಿಗೇರಿ ಹಾಗೂ ಶಬೀರ ಮಸ್ತಮದಾನಿ ಇವರನ್ನು ಕರೆದುಕೊಂಡು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶಮಾಡಿ ನನಗೆ ಅಡ್ಡಗಟ್ಟಿ ಕೊಟ್ಟಿರುವ ಅಸಲು 30,000/-ರೂಪಾಯಿಗೆ ಬಡ್ಡಿ ಸೇರಿ ಒಟ್ಟು 60.000/-ರೂಪಾಯಿ ಆಗಿದೆ ಎಷ್ಟ ಬಾರಿ ಹೇಳಬೇಕು ನನಗೆ ಕೊಡಬೇಕಾದ ಒಟ್ಟು ಹಣ ಕೊಡು ಇಲ್ಲದಿದ್ದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸಾಮಾನುಗಳು ತೆಗೆದುಕೊಂಡು ಹೊಗುತ್ತೇನೆ. ಅಂತಾ ಹೇಳಿ ಹೆದರಿಸಿ ಅವಾಚ್ಯವಾಗಿ ಬೈಯ್ದು ಕೋಡಬೆಕಾದ ಹಣವನ್ನು ಕೊಡದೆ ಹೊದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದಾಗ ನನಗೆ ದುಡ್ಡಿನ ಸಮಸ್ಯೆ ಇದೆ ಇನ್ನೂ ಸ್ವಲ್ಪ ದಿನಗಳ ಕಾಲಾವಕಾಶ ಕೊಡಿ ಅಂತಾ ಕೇಳಿದರೂ ಸಹ ಕಾಲವಕಾಶ ಕೊಡದೆ ಅವನ ಹತ್ತಿರ ಇದ್ದ 5000/- ರೂ ಗಳನ್ನು ತೆಗೆದುಕೊಂಡು ಹೋಗಿದ್ದಾಗಿ ದಿನಾಂಕ:-04/02/2025 ರಂದು ಠಾಣೆಗೆ ಬಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ವಿಶೇಷ ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ಅಕ್ರಮವಾಗಿ ಗ್ಯಾಂಬ್ಲಿಂಗ್ .ಕಾನೂನು ಬಾಹಿರ ಚಟುವಟಿಕೆಗಳು, ಬಡ್ಡಿ ವ್ಯವಹಾರವನ್ನು ಹತ್ತಿಕ್ಕಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಕೂಡ ಈ ನಿಟ್ಟಿನಲ್ಲಿ ನಿಗಾವಹಿಸಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಬಡ್ಡಿ ವ್ಯವಹಾರವನ್ನು ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ದಿನಾಂಕ: 03-02-2025 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 04-02-2025 ರ ಬೆಳಗ್ಗೆ 6 ಗಂಟೆಯವರೆಗೆ ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ ಹಾಗೂ ಮೀಟರ್ ಬಡ್ಡಿ ವ್ಯವಹಾರ ಮಾಡುವ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ. ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago