ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾವಲಕೊಪ್ಪ ಕ್ರಾಸ್ ನಲ್ಲಿ ಇಂದು ವಿದ್ಯಾರ್ಥಿಗಳು ಬೆಳಿಗ್ಗೆ 8.00 ಗಂಟೆಯಿಂದಲೇ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಸುಮಾರು 150 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸೇರಿಕೊಂಡು ಕಾವಲಕೊಪ್ಪದ ಕ್ರಾಸ್ ನಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ರಸ್ತೆ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಆಕ್ರೋಶವನ್ನು ಹೊರ ಹಾಕಿದರು.ಇದರಿಂದ ಸುಮಾರು ಒಂದುವರೆ ಗಂಟೆಗಳ ಕಾಲ ರಸ್ತೆಯ ಎರಡು ಬದಿಗಳಲ್ಲಿಬಸ್ಸುಗಳು ಸಾಲಾಗಿ ನಿಂತಿದ್ದವು.
ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮುಂಡಗೋಡ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು ಮೊದಲು ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ನಂತರ ಹಿರಿಯ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ನಾಳೆಯಿಂದಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಹೌದು, ಈ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ಸರಿಯೇ ಇದೆ ಏಕೆಂದರೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಕಾರಣ.ಅದೇನೆಂದರೆ ಈ ಕ್ರಾಸ್ ನಲ್ಲಿ ಪ್ರತಿದಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಗಾಗಿ ಕಾಯ್ದು ಕಾಯ್ದು ಸುಸ್ತಾಗಿದ್ದಾರೆ ಮತ್ತು ಪ್ರತಿದಿನ ನಾಲ್ಕೈದು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ಸು ಸಿಗದೆ ಶಾಲಾ ಕಾಲೇಜುಗಳಿಗೆ ತೆರಳಲು ಆಗದೆ ಮರಳಿ ಮನೆಗೆ ತೆರಳಿದ ಉದಾಹರಣೆಗಳು ಇವೆ ಅದಕ್ಕಾಗಿಯೇ ಈ ವಿದ್ಯಾರ್ಥಿಗಳ ಸಹನೆಯ ಕಟ್ಟೆ ಇಂದು ಬೆಳಿಗ್ಗೆ ಒಡೆದು ಹೋಗಿ ಪ್ರತಿಭಟನೆಯ ಹಾದಿ ತುಳಿಯುವಂತೆ ಮಾಡಿದೆ.
ಈ ಸಮಸ್ಯೆ ಉದ್ಭವಿಸಲು ಸಾರಿಗೆ ಇಲಾಖೆಯ ಎಡವಟ್ಟು ಒಂದಿದೆ ಅದೇನೆಂದರೆ ಈ ಹಿಂದೆ ಈ ಮಾರ್ಗವಾಗಿ ತೆರಳುತ್ತಿದ್ದ ಶಿರಸಿ ಹುಬ್ಬಳ್ಳಿ ಬಸ್ ಗಳು ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದವು ಆದರೆ ಕೆಲವು ತಿಂಗಳುಗಳ ಹಿಂದೆ ಈ ಬಸ್ಸುಗಳನ್ನು “ನಿರ್ವಾಹಕ ರಹಿತ,ತಡೆರಹಿತ” ಎಂದು ಏಕಾಏಕಿ ತೀರ್ಮಾನ ಮಾಡಿದ್ದರಿಂದ ಈ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಯಿತು.ಈ ಸಮಸ್ಯೆ ಕೇವಲ ತಡೆರಹಿತ ಬಸ್ಸುಗಳಿಂದ ಮಾತ್ರ ಆಗುತ್ತಿಲ್ಲ, ಬೆಳಗ್ಗಿನ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರಳಲು ಬಸ್ಸುಗಳ ಕೊರತೆಯೂ ಸಹ ಕಾರಣವಾಗಿದೆ.ಈ ಕ್ರಾಸಿಗೆ ಬರುವಾಗಲೇ ಇರುವ ಕೆಲವೊಂದು ಬಸ್ಸುಗಳು ಸಂಪೂರ್ಣವಾಗಿ ತುಂಬಿಕೊಂಡು ಬಂದಿರುತ್ತವೆ ಹಾಗಾಗಿ ಈ ಸಮಸ್ಯೆ ಕಾತೂರಿನಿಂದಲೇ ಪ್ರಾರಂಭವಾಗುತ್ತದೆ .
ಏನ್ರೀ ಸಾರಿಗೆ ಅಧಿಕಾರಿಗಳೇ ನಿಮ್ಗೆ ಸ್ವಲ್ಪನಾದರೂ ಬುದ್ಧಿ ಬೇಡ್ವಾ?ಹೀಗೆ ಹೇಳುತ್ತಿರುವುದು ನಾವಲ್ಲ, ಸಾರ್ವಜನಿಕರು…ಏಕೆಂದರೆ ಸಾರಿಗೆ ಇಲಾಖೆಯವರು ಮಾಡಿರುವ ನಿರ್ವಾಹಕ ರಹಿತ,ತಡೆ ರಹಿತ ಎಂಬ ಬಸ್ಗಳಲ್ಲಿ ಶಿರಸಿಯಿಂದ ಬಿಡುವಾಗ ಕೇವಲ 25 ರಿಂದ 30 ಸೀಟುಗಳು ಮಾತ್ರ ತುಂಬಿರುತ್ತವೆ…ಪೂರ್ತಿ ತುಂಬದೆ ಬಸ್ಸನ್ನು ಓಡಿಸಿ ಉಳಿದ ಸೀಟಿನಿಂದ ಆದ ನಷ್ಟವನ್ನು ತುಂಬುವವರು ಯಾರು?
ಈ ಎಡವಟ್ಟಿನಿಂದ ಆದ ಸಮಸ್ಯೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿರಸಿಯಿಂದ ತಾಲೂಕಿನ ವಿವಿಧ ಶಾಲೆಗಳಿಗೆ ತೆರಳುವ ಶಿಕ್ಷಕ ಶಿಕ್ಷಕಿಯರಿಗೂ ತಟ್ಟಿದೆ.ಅದೇಗೆ ಅಂತೀರಾ ಬೆಳಿಗ್ಗೆ 9:30ಕ್ಕೆ ಪ್ರಾರ್ಥನಾ ಸಮಯಕ್ಕೆ ಹಾಜರಾಗುವ ಇವರುಗಳು ಬೆಳಿಗ್ಗೆ 5.30 ಅಥವಾ 6.00 ಗಂಟೆಗೆ ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ.ಮತ್ತು ಮಹಿಳಾ ಶಿಕ್ಷಕಿಯರ ಪರಿಸ್ಥಿತಿ ಅಂತೂ ಹೇಳತಿರದಾಗಿದೆ ಏಕೆಂದರೆ ಇವರು ಬೆಳಿಗ್ಗೆ 6:00 ಒಳಗಾಗಿ ತಮ್ಮ ಮನೆಯ ಕುಟುಂಬದವರಿಗೆಲ್ಲ ತಿಂಡಿ, ಊಟ ತಯಾರಿಸಿಟ್ಟು ಬರಬೇಕು ಇದು ಮಾನಸಿಕವಾಗಿ ಶಿಕ್ಷಕಿಯರಿಗೆ ತೊಂದರೆಯನ್ನು ಮಾಡುತ್ತಿದೆ.
ಈ ಸಮಸ್ಯೆ ಬಗೆಹರಿಯಬೇಕಾದರೆ ತಡೆ ರಹಿತ ಬಸ್ಸುಗಳನ್ನು ನಿಲ್ಲಿಸುವುದರ ಜೊತೆಗೆ, ಹೆಚ್ಚುವರಿ ಬಸ್ಸುಗಳನ್ನು ಮುಂಡಗೋಡದಿಂದ ಪಾಳಾ ಕ್ರಾಸ್ ವರೆಗೆ ಹೋಗಿ ಬರುವಂತೆ ಬಿಡಬೇಕಾಗಿದೆ, ಇಲ್ಲವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿರಸಿ ಹುಬ್ಬಳ್ಳಿ ಮಾರ್ಗವಾಗಿ ತೆರಳುವ ಕುಮಟಾ ಹುಬ್ಬಳ್ಳಿ, ಭಟ್ಕಳ ಹುಬ್ಬಳ್ಳಿ ಬಸ್ಗಳಂತಹ ಎಲ್ಲಾ ಬಸ್ ಗಳನ್ನು ನಿಲ್ಲಿಸುವ ವ್ಯವಸ್ಥೆ ಆಗಬೇಕಾಗಿದೆ…
ಇಷ್ಟೆಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಸಾರಿಗೆ ಇಲಾಖೆಯವರು ಇನ್ನಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಾಗಿದೆ..
ವರದಿ: ಮಂಜುನಾಥ ಹರಿಜನ
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…