Latest

ವಿದ್ಯಾರ್ಥಿನಿಯಿಂದ ಉಪನ್ಯಾಸಕಿಗೆ ಹಲ್ಲೆ: ಗುರು ಗೌರವ ಮರೆಯುತ್ತಿರುವ ನವಪೀಳಿಗೆಗೆ ನೆಟ್ಟಿಗರ ಕಿಡಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಜನಪದ ನುಡಿಯ ಅರ್ಥವನ್ನು ನವಪೀಳಿಗೆಯ ಕೆಲವರು ಮರೆತಂತಾಗಿದೆ. ಹಳೆಯದಿನಗಳಲ್ಲಿ ಗುರುಗಳಿಗೆ ಭಯವೂ ಇತ್ತು, ಭಕ್ತಿಯೂ ಇತ್ತು. ಆದರೆ ಈಗ ಕೆಲವೊಂದು ಸಂದರ್ಭಗಳಲ್ಲಿ ಶಿಕ್ಷಕರ ವಿರುದ್ಧವೇ ಕೈಕೈ ಹಾಕುವ ಸ್ಥಿತಿಗೆ ವಿದ್ಯಾರ್ಥಿಗಳು ಇಳಿಯುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ ಇತ್ತೀಚಿನ ಘಟನೆ ಈ ಮಾತಿಗೆ ಸಜೀವ ಉದಾಹರಣೆ.

ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿ ಓರ್ವ ವಿದ್ಯಾರ್ಥಿನಿ ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ, ಆಕೆಯ ವರ್ತನೆ ಗಮನಿಸಿದ ಮಹಿಳಾ ಉಪನ್ಯಾಸಕಿ ಶಿಸ್ತಿಗೆ ಕರೆತಂದು, ಆಕೆಯಿಂದ ಫೋನ್‌ನ್ನು ಕಸಿದುಕೊಂಡರು. ಈ ಘಟನೆಗೆ ಕೋಪಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಲು ಆರಂಭಿಸಿದಳು.

ವಿವಾದ ಮುಂದುವರೆದಂತೆಯೇ, ವಿದ್ಯಾರ್ಥಿನಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಉಪನ್ಯಾಸಕಿಯ ಮೇಲೆ ಹಲ್ಲೆ ನಡೆಸಿದಳು. ತಕ್ಷಣವೇ ಉಪನ್ಯಾಸಕಿಯು ಕೂಡ ತಾಳ್ಮೆ ಕಳೆದುಕೊಂಡು ವಿದ್ಯಾರ್ಥಿನಿಗೆ ಪ್ರತಿದಾಳಿ ಮಾಡಿದರು. ಈ ಗಲಾಟೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು.

ಈ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಹೊರಬಿದ್ದ ಬಳಿಕ ವಿದ್ಯಾರ್ಥಿನಿಯ ವರ್ತನೆಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈವರೆಗೆ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಈ ಘಟನೆ, ಗುರು-ಶಿಷ್ಯರ ನಡುವಿನ ಪರಸ್ಪರ ಗೌರವದ ಬಾಳದಂಟು ಕ್ಷೀಣಿಸುತ್ತಿರುವುದನ್ನು ತೋರಿಸುತ್ತಿದೆ. ವಿದ್ಯಾರ್ಥಿಗಳ ಶಿಸ್ತಿನ ಕುಸಿತ ಮತ್ತು ಶಿಕ್ಷಕರ ಮೇಲಿನ ವಿಶ್ವಾಸದ ಕೊರತೆ ಹೇಗೆ ಭವಿಷ್ಯವನ್ನು ಹಾನಿಗೊಳಿಸಬಹುದು ಎಂಬುದಕ್ಕೆ ಇದು ಎಚ್ಚರಿಕೆ  ಪರಿಣಮಿಸಿದೆ.

nazeer ahamad

Recent Posts

ಬಾಗಲಕೋಟೆ ನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…

2 days ago

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

2 months ago