
ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ನಿಖಿಲ್.ಬಿ. ಐಪಿಎಸ್, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ರವಿಶಂಕರ್ ಮತ್ತು ಜಗದೀಶ್ ರವರ ಮಾರ್ಗದರ್ಶನದಲ್ಲಿ ನಂದಕುಮಾರ್ ಪೊಲೀಸ್ ಉಪಾಧೀಕ್ಷಕರು, ಮುಳಬಾಗಿಲು ಉಪ-ವಿಭಾಗ ರವರ ನೇತೃತ್ವದಲ್ಲಿದಲ್ಲಿ ಪಿ.ಐ ಎಂ.ಬಿ ಗೊರವಿನ ಕೊಳ್ಳ ಶ್ರೀನಿವಾಸಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯಾದ ಪಿ.ಎಸ್.ಐ ಜಯರಾಮ್, ಸಂತೋಷ್, ಪತ್ರಿ ಬಸಪ್ಪ, ವಾಸು ಮತ್ತು ಸಂಪತ್ ರವರು ದಿನಾಂಕ 09-02-2025 ರಂದು ಸಂಜೆ ಬಂಗವಾದಿ ಗ್ರಾಮದ ಬಳಿ ಇರುವ ಕೆರೆ ಬಳಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ 04 ಜನರನ್ನು ವಶಕ್ಕೆ ಪಡೆದು ಪಂದ್ಯಕ್ಕೆ ಪಣವಾಗಿಟ್ಟಿದ್ದ ರೂ. 3200/-ನಗದು, ಒಂದು ಕೋಳಿ, ವಶಕ್ಕೆ ಪಡೆದು ಒಟ್ಟು 04 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ: ರೋಶನ್ ಜಮೀರ್