Categories: CrimeLatest

ನಂಜನಗೂಡಿನಲ್ಲಿ ಬೆಚ್ಚಿಬೀಳಿಸುವ ಪ್ರಕರಣ: ಯುವಕನ ಅಪಹರಣ, ಬಲವಂತವಾಗಿ ಮಂಗಳಮುಖಿ ವೇಷ ಮತ್ತು ಸೆಕ್ಸ್ ವರ್ಕ್ ಗೆ ಬಳಕೆ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವಕನೊಬ್ಬನನ್ನು ಅಪಹರಿಸಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಹಣ ಸಂಗ್ರಹ ಹಾಗೂ ಸೆಕ್ಸ್ ವರ್ಕ್‌ಗೆ ಬಳಸಿದ ಆರೋಪಗಳು ಕೇಳಿಬಂದಿವೆ. ಈ ಘಟನೆ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದು, ಪೀಡಿತ ಯುವಕ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.

ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ (ಅಕ್ಷತಾ) ಎಂಬ ಯುವಕ ಈ ಪ್ರಕರಣದ ಪೀಡಿತನಾಗಿದ್ದಾನೆ. ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ಹಾಗೂ ಆಕೆಯ ತಂಡದ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.

ಸುಮಾರು ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್ ಅವರನ್ನು ಅನಿತಾ ಮತ್ತು ಆಕೆಯ ತಂಡ ಮೋಸದಿಂದ ಕರೆದೊಯ್ದು ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ಮಂಗಳೂರಿಗೆ ಕರೆದೊಯ್ದು ಬಲವಂತವಾಗಿ ಸೀರೆ, ಆಭರಣಗಳನ್ನು ಹಾಕಿಸಿ ಮಂಗಳಮುಖಿಯರ ವೇಷದಲ್ಲಿ ಬೀದಿಗಳಲ್ಲಿ ಹಾಗೂ ಅಂಗಡಿಗಳ ಮುಂದೆ ಹಣ ಸಂಗ್ರಹಿಸಲು ಒತ್ತಾಯಿಸಿದ್ದಾರೆ.

ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ವರೆಗೆ ಕಲೆಕ್ಷನ್ ಮಾಡಿಸಿ, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್‌ಗಳನ್ನು ತಯಾರಿಸಿ ಅಪ್‌ಲೋಡ್ ಮಾಡಲಾಗಿದೆ ಎಂಬ ಆರೋಪವೂ ಇದೆ. ಅಲ್ಲದೆ ಮಂಗಳೂರು ಹಾಗೂ ಕೇರಳ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್‌ಗೆ ಬಳಸಲಾಗಿದೆ ಎಂದು ಪೀಡಿತ ಯುವಕ ದೂರಿನಲ್ಲಿ ತಿಳಿಸಿದ್ದಾರೆ.

ಇದರ ನಡುವೆ, ಆಧಾರ್ ಕಾರ್ಡ್‌ನಲ್ಲಿ ಟ್ರಾನ್ಸ್ಜೆಂಡರ್ ಎಂದು ನಮೂದಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರವೂ ಪಡೆಯಲಾಗಿದೆ ಎನ್ನುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ನೀಡಿದೆ. ಮುಂದಿನ ಹಂತದಲ್ಲಿ ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತ ಲಿಂಗ ಬದಲಾವಣೆಗೆ ಯೋಜನೆ ರೂಪಿಸಿದ್ದರ ಬಗ್ಗೆ ಮಾಹಿತಿ ತಿಳಿದ ನಂತರ, ಅನಿಲ್ ಕುಮಾರ್ ಈ ಜಾಲದಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ.

ತಾನು ಸಂಪಾದಿಸಿದ ಸುಮಾರು 3 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ಬೆದರಿಕೆ ಹಾಕಿದ್ದು, ತಾನು ಕಳ್ಳತನ ಮಾಡಿದ್ದಾಗಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಪೀಡಿತ ಯುವಕ ಮಂಗಳೂರಿನಿಂದ ನಂಜನಗೂಡಿಗೆ ಮರಳಿ ಬಂದಿದ್ದಾನೆ.

ಆದರೆ, ನಂತರವೂ ಆರೋಪಿಗಳು ಅವರನ್ನು ಮತ್ತೆ ದಂಧೆಗೆ ತಳ್ಳಲು ಪ್ರಯತ್ನಿಸಿದ್ದು, ಮನೆಗೆ ಬಂದು ಗಲಾಟೆ ಮಾಡಿರುವುದಾಗಿ ಆರೋಪಿಸಲಾಗಿದೆ. ಮಾನಸಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಮೈಸೂರು ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂಜನಗೂಡು ಪೊಲೀಸರು ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಪೀಡಿತ ಯುವಕನಿಗೆ ಶೇ.90 ರಷ್ಟು ದೃಷ್ಟಿ ಸಮಸ್ಯೆ ಇದ್ದು, ಅವನಿಗೆ ಲೈಂಗಿಕ ದೌರ್ಬಲ್ಯ ಇಲ್ಲದಿದ್ದರೂ ಟ್ರಾನ್ಸ್ಜೆಂಡರ್ ಪ್ರಮಾಣಪತ್ರ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಒಟ್ಟಾರೆ, ಅಮಾಯಕ ಯುವಕರನ್ನು ಬಲವಂತವಾಗಿ ಮಂಗಳಮುಖಿಯರಾಗಿ ಪರಿವರ್ತಿಸಿ ದುರ್ಬಳಕೆ ಮಾಡುವ ಕರಾಳ ಜಾಲ ಇನ್ನೂ ಸಕ್ರಿಯವಾಗಿದೆ ಎಂಬ ಆತಂಕವನ್ನು ಈ ಪ್ರಕರಣ ಮತ್ತೊಮ್ಮೆ ಎತ್ತಿಹಿಡಿದಿದೆ. ಪ್ರಕರಣದ ಹಿಂದೆ ಇರುವ ನಿಜವಾದ ಸಂಗತಿಗಳು ಏನು, ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಯಿತೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಉತ್ತರ ನೀಡಬೇಕಾಗಿದೆ.

ಭ್ರಷ್ಟರ ಬೇಟೆ

Recent Posts

ನಾಸಿಕ್ ಬಿಪಿಒ ಘಟಕದಲ್ಲಿ ನಮಾಜ್ ಮಾಡಬೇಕು, ಗೋಮಾಂಸ ತಿನ್ನಬೇಕೆಂದು ಹಿಂದೂ ಯುವತಿರಿಗೆ ಕಿರುಕುಳ: ಎಸ್‌ಐಟಿ ತನಿಖೆ

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಮುಖ ಐಟಿ ಸೇವಾ ಕಂಪನಿಗೆ ಸಂಬಂಧಿಸಿದ ಬಿಪಿಒ ಘಟಕದಲ್ಲಿ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಉದ್ಯೋಗಿಗಳ ಮೇಲೆ…

8 hours ago

ಬಳ್ಳಾರಿಯಲ್ಲಿ ಲೋಕಾಯುಕ್ತ ಬೇಟೆ: ಮೀನುಗಾರಿಕೆ ಇಲಾಖೆ ಅಧಿಕಾರಿ ಮನೆಯಲ್ಲಿ ‘ಕುಬೇರ’ನ ಖಜಾನೆ!

ಗಣಿ ನಾಡು ಬಳ್ಳಾರಿಯಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರಿಗೆ ಭಾರೀ…

8 hours ago

ಭೀಕರ ರಸ್ತೆ ಅಪಘಾತ: BMW ಕಾರಿನ ಮೇಲೆ ಲಾರಿ ಪಲ್ಟಿ, ಹೈಕೋರ್ಟ್ ವಕೀಲರ ದುರ್ಮರಣ

ಆಂಧ್ರಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಹೈಕೋರ್ಟ್ ವಕೀಲರು ದಾರುಣವಾಗಿ ಮೃತಪಟ್ಟಿದ್ದಾರೆ. ಸಿಮೆಂಟ್ ತುಂಬಿದ ಟ್ಯಾಂಕರ್…

12 hours ago

ಕೆಲವೇ ದಿನಗಳಲ್ಲಿ ಸಾಯುತ್ತಿದ್ದೇನೆ, ನಿನ್ನ ಬೆತ್ತಲೆ ನೋಡಬೇಕು ಎಂದು ನಂಬಿಸಿ ವಿಡಿಯೋ ಪಡೆದು ಶಿಕ್ಷಕಿಗೆ ಟಾರ್ಚರ್..!

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಿಕ್ಷಕಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಮೋಸಗೊಳಿಸಿ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯೊಬ್ಬನು ಇನ್‌ಸ್ಟಾಗ್ರಾಂ…

12 hours ago

2 ಲಕ್ಷ ಲಂಚ ಬೇಡಿಕೆ: ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್‌ಗೆ ಲಂಚ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತರ…

13 hours ago

15 ನಿಮಿಷದಲ್ಲಿ ಕಾಣೆಯಾದವಳು,1500 ಅಡಿ ಆಳದಲ್ಲಿ ಪತ್ತೆ: ಶ್ರೀನಂದಾ ಸಾವು ಹೇಗಾಯ್ತು?

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾಗಿದ್ದ ಘಟನೆ…

15 hours ago