Latest

ಮೀಸಲು ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ: ಪರವಾನಿಗೆ ಪಡೆಯಲು ರೈತರಲ್ಲಿ ಡಿ.ಸಿ. ಮನವಿ

ಕಲಬುರಗಿ-ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಸಿ. ಯಶವಂತ ವಿ. ಗುರುಕರ್ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಒಂದು ಸಕ್ಕರೆ ಕಾರ್ಖಾನೆ ಮೀಸಲು ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ ಮಾಡಲು ಬಯಸಿದ್ದಲ್ಲಿ ಕರ್ನಾಟಕ ಶುಗರಕೇನ್ (ರೆಗ್ಯೂಲೇಷನ್ ಮತು ಡಿಸ್ಟ್ರಿಬೂಷನ್) ಕಾಯ್ದೆಯ ಶೆಡ್ಯೂಲ್-2 ಪ್ರಕಾರ ನಿಗಧಿತ ನಮೂನೆ-2ರಲ್ಲಿ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ ಅದರೊಂದಿಗೆ 100 ರೂ. ಸೆಲ್ಫ್ ಚೆಕ್ ಮತ್ತು ನಿಗದಿತ ಶುಲ್ಕ 5 ರೂ. ಗಳನ್ನು ಕೆ2 ಚಲನ್ ಮೂಲಕ ಲೆಕ್ಕ ಶೀರ್ಷಿಕೆ 0070-60-800-3-04-000 ಗೆ ಸಂದಾಯ ಮಾಡಿ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಆಹಾರ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಕೌಂಟರನಲ್ಲಿ ಅರ್ಜಿ ಸಲ್ಲಿಸಿದಲ್ಲಿ ನಮೂನೆ-1ರಲ್ಲಿ ಕಬ್ಬು ರಫ್ತಿಗೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲೆಯ ಚಿಣಮಗೇರಾದ ಕೆ.ಪಿ.ಆರ್.ಶುಗರ್ ಕಂಪನಿಗೆ 16 ಗ್ರಾಮಗಳ 18 ಲಕ್ಷ ಕಬ್ಬು ಮತ್ತು ಎನ್.ಎಸ್.ಎಲ್ ಶುಗರ್ ಕಾರ್ಖಾನೆ ವ್ಯಾಪ್ತಿಯ 110 ಗ್ರಾಮಗಳ 13 ಲಕ್ಷ ಟನ್ ಕಬ್ಬು ಕಟಾವಿಗೆ ಪರವಾನಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಈ ಬಾರಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 60 ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಪ್ರಸಕ್ತ 2022-23ನೇ ಸಾಲಿಗೆ ಕಬ್ಬು ನುರಿಸುವ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಸಕ್ಕರೆ ಕಾರ್ಖಾನಗೆಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಇತ್ತೀಚಿಗೆ ಜಿಲ್ಲೆಯಲ್ಲಿ ರೈತ ಮತ್ತು ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಗೆ ತಂದಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಒಟ್ಟಾರೆ 60 ಕೋಟಿ ರೂ. ಲಾಭವಾಗಲಿದೆ. ಗುರುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದ್ದು, ಅಲ್ಲಿ ಎಫ್.ಆರ್.ಪಿ. ದರ ನಿಗದಿಯಾಗಲಿದೆ. ಇದರನ್ವಯ ಜಲ್ಲೆಯಲ್ಲಿ ಸಭೆ ನಡೆಸಿ ದರ ನಿಗದಿಪಡಿಸಲಾಗುವುದು ಎಂದು ಡಿ.ಸಿ. ಅವರು ತಿಳಿಸಿದರು.
ವರದಿ ನಾಗರಾಜ್ ಗೊಬ್ಬುರ್

ಭ್ರಷ್ಟರ ಬೇಟೆ

Recent Posts

ಮಂಗಳೂರು: ನೇತ್ರಾವತಿ ನದಿಯಿಂದ ಮರಳು ಕಳ್ಳ ಸಾಗಾಟ – ಪಿಕಪ್ ಹಾಗೂ ಸ್ಕೂಟರ್ ವಶಕ್ಕೆ

ಮಂಗಳೂರು ನಗರದಲ್ಲಿ ಮರಳು ಕಳ್ಳ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆಯ ವೇಳೆ…

1 hour ago

ಭಟ್ಕಳ ಸಮುದ್ರ ದುರಂತ: ದೋಣಿ ಮುಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರು ರಕ್ಷಣೆ

ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು,…

1 hour ago

ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿ ಮೇಲೆ ಪ್ರಿಯಕರನಿಂದ ಹಲ್ಲೆ!

ಸಕಲೇಶಪುರ (ಹಾಸನ ಜಿಲ್ಲೆ), ಜುಲೈ 30 – ಬೆಳಗೋಡು ಹೋಬಳಿಯ ಲಕ್ಮೀಪುರ ಗ್ರಾಮದಲ್ಲಿ ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿಯ…

2 hours ago

ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನ ವಿಡಿಯೋ ಕಾಲ್! ಶಿಕ್ಷಕಿ ವಿರುದ್ ಪೋಕ್ಸೋ

ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನವಾಗಿ ವಿಡಿಯೋ ಕಾಲ್ ಮಾಡಿರುವ ತೀವ್ರ ಆರೋಪದ ಮೇಲೆ…

2 hours ago

ಮಾಕನೂರಿನಲ್ಲಿ ಜೂಜಾಟ ದಾಳಿ: ₹1.74 ಲಕ್ಷ ನಗದು ವಶ, 18 ಮಂದಿ ವಿರುದ್ಧ ಕೇಸ್

ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದ ಸಮೀಪದ ಲಾಟೇರ್‌ ಜಮೀನಿನ ಬಳಿ ನಿರ್ಮಾಣದಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಸೋಮವಾರ ರಾತ್ರಿ…

3 hours ago

ನಕಲಿ ಅಕೌಂಟ್‌ನಿಂದ ಅವಹೇಳನೆ: ಎಸ್. ನಾರಾಯಣ ಪೊಲೀಸರಿಗೆ ದೂರು”

ಬೆಂಗಳೂರು, ಜುಲೈ 30: ಹಿರಿಯ ನಟ ಹಾಗೂ ನಿರ್ದೇಶಕ ಎಸ್. ನಾರಾಯಣ ಅವರು ತಮ್ಮ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ…

4 hours ago