Crime

ಪತಿಗೆ ಮದ್ಯ ಕುಡಿಸಿ ನವವಿವಾಹಿತೆಯ ಮೇಲೆ ಅತ್ಯಾಚಾರ…!

ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಯಾಪಾಳ ಗ್ರಾಮದಲ್ಲಿ ನೊಂದ ಮಹಿಳೆಯ ನೆರೆಮನೆಯವನೊಬ್ಬ ಅತ್ಯಾಚಾರ ಎಸಗಿದ ಘಟನೆಯು ಬೆಳಕಿಗೆ ಬಂದಿದೆ. ಆರೋಪಿ, ಮಹಿಳೆಯ ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸುವುದಾಗಿ ನಂಬಿಸಿ, ದಂಪತಿಯನ್ನು ಸಿಂಗ್ಲಾ ಮಾರುಕಟ್ಟೆಗೆ ಕರೆದೊಯ್ದಿದ್ದಾನೆ.

ಮಾರುಕಟ್ಟೆಗೆ ತಲುಪಿದ ಬಳಿಕ, ಗಂಡನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಮದ್ಯಪಾನಕ್ಕೆ ಪ್ರೇರೇಪಿಸಿದ್ದ. ಗಂಡನು ತೀವ್ರವಾಗಿ ಮದ್ಯ ಸೇವಿಸಿದ ನಂತರ, ಹಿಂತಿರುಗುವ ದಾರಿಯಲ್ಲಿ ಆರೋಪಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ನಂತರ, ಅವರನ್ನು ಅವರ ಗ್ರಾಮದಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಮೊದಲು ಸಿಂಗ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಲೇಶ್ವರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಕೆಲಸದ ವಿಚಾರದಿಂದ ವ್ಯಕ್ತಿಯೊಬ್ಬನಿಗೆ ಚಾಕು ಇರಿತ: ಮೂವರು ಆರೋಪಿಗಳಿಂದ ಹಲ್ಲೆ

ಹುಬ್ಬಳ್ಳಿ: ಕೆಲಸದ ಸಂಬಂಧಿತ ವಿಚಾರವೇ ಕೊನೆಗೆ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆಯೆಂದು ಶಂಕಿಸಲಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ…

8 hours ago

ಭಾರಿ ಮಳೆಗೆ ಕುಸಿದ ನಾಡಕಚೇರಿ ಕಟ್ಟಡ – ಮುನ್ನೆಚ್ಚರಿಕೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ

ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾರಿ ಮಳೆಗೆ ನಾಡಕಚೇರಿ ಕಟ್ಟಡ ಕುಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಕಟ್ಟಡ ಕುಸಿತದ ವೇಳೆ…

9 hours ago

ಲಂಚದ ಬಲೆಗೆ ಬಿದ್ದ ಪಿಎಸ್‌ಐ: ಬೂದಿಕೋಟೆ ಠಾಣೆಯಲ್ಲಿ ಲೋಕಾಯುಕ್ತರ ದಾಳಿ

ಕೋಲಾರ್ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ಲಂಚದ ಆರೋಪ. ಮೂಲಗಳ ಮಾಹಿತಿ ಪ್ರಕಾರ,…

11 hours ago

ಪೊಲೀಸರ ಜೀಪ್‌ ಗುದ್ದಿಸಿದ ಪರಿಣಾಮ ಬೈಕ್‌ ಸವಾರನ ದುರ್ಮರಣ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಂತರಾಜ್ ಸರ್ಕಲ್ ಬಳಿ ದ್ವಿಚಕ್ರ ವಾಹನ ಮತ್ತು ಪೊಲೀಸ್‌ ಜೀಪ್‌ ನಡುವೆ ಸಂಭವಿಸಿದ ಭೀಕರ…

12 hours ago

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ: ಎನ್‌ಕೌಂಟರ್‌ನಲ್ಲಿ ಬಲಿಯಾದ ಆರೋಪಿ ಮಣ್ಣಿಗೆ”

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ ಐದು ವರ್ಷದ ಪುಟ್ಟ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ರಾಜ್ಯವನ್ನೇ ಬೆಚ್ಚಿಬಿಟ್ಟಿತ್ತು. ಮನೆಯ…

13 hours ago

ಚಿಗರಿ ಮಾರ್ಗದಲ್ಲಿ ಕಾರುಗಳ ಅಪಘಾತ: ಓರ್ವನ ಸಾವು ಮೂರಿಗೆ ಗಂಭೀರ ಗಾಯ..

ಧಾರವಾಡ: ಹುಬ್ಬಳ್ಳಿ-ಧಾರವಾಡ ಬಿ ಆರ್ ಟಿ ಎಸ್ ಕಾರಿಡಾರ್‌ನ ಪಿಬಿ ರಸ್ತೆ ಮೇಲೆ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ…

14 hours ago