ಬೆಂಗಳೂರು, ಫೆಬ್ರವರಿ 8: ನಗರದ ಕೋರಮಂಗಲದಲ್ಲಿ ಪುಡಿ ರೌಡಿಯೊಬ್ಬನ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಟೀ ಶಾಪ್‌ನಲ್ಲಿ ಹಂಗಾಮಾ
ಘಟನೆ ಕಳೆದ ರಾತ್ರಿ ಕೋರಮಂಗಲದ ಒಂದು ಚಹಾ ಅಂಗಡಿಯಲ್ಲಿ ನಡೆದಿದೆ. 25 ವರ್ಷದ ಗೌತಮ್ ಎಂಬಾತ, ಕೈಯಲ್ಲಿ ಲಾಂಗ್ ಹಿಡಿದು ಅಂಗಡಿಗೆ ನುಗ್ಗಿ, ಮಾಲೀಕನಿಗೆ ಬೆದರಿಕೆ ಹಾಕಿ ಬಿಟ್ಟಿ ಸಿಗರೇಟ್ ಪಡೆದುಕೊಂಡಿದ್ದಾನೆ. ಈ ದ್ರುಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರವೇ ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂದಿದೆ.
ಪೊಲೀಸರ ತ್ವರಿತ ಕಾರ್ಯಾಚರಣೆ
ಪೊಲೀಸರು ಸಿಸಿಟಿವಿ ದೃಶ್ಯ ಮತ್ತು ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ, ಬೆಂಗಳೂರಿನ ಪೊಲೀಸರು ಈ ಪ್ರಕರಣದ ಕುರಿತು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಹಾಸ್ಯ ಶೈಲಿಯ ಪ್ರತಿಕ್ರಿಯೆ
ಪೊಲೀಸರ ಹಂಚಿದ ವಿಡಿಯೊದಲ್ಲಿ ಮೊದಲು ಆರೋಪಿಯ ಅವಾಜ್ ದೃಶ್ಯವಿದ್ದು, ನಂತರ ಜನಪ್ರಿಯ ಕನ್ನಡ ಚಿತ್ರ ‘ಸೂರ್ಯವಂಶ’ದ ಡೈಲಾಗ್ – “ಈ ಫಿಗರ್‌ನ ಎಲ್ಲೋ ನೋಡ್ದಂಗಯ್ತಲ್ಲ!” – ಎಂಬ ಹಾಸ್ಯಭರಿತ ಸಂಭಾಷಣೆ ಸೇರಿಸಲಾಗಿದೆ. ಅಂತಿಮವಾಗಿ, ಎಫ್‌ಐಆರ್ ಪ್ರತಿಯನ್ನು ತೋರಿಸಿ, ಪ್ರಕರಣಕ್ಕೆ ಸೀರಿಯಸ್ ಟಚ್ ನೀಡಿದ್ದಾರೆ.
ಈ ಘಟನೆಯಿಂದ ಕೋರಮಂಗಲದ ಸಾರ್ವಜನಿಕರಲ್ಲಿ ಭಯ ಮೂಡಿದ್ದರೂ, ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದು, ಇದೀಗ ಆರೋಪಿಯ ಕತೆ ಅದೆಷ್ಟೋ ಮೆಮೇ ಪೇಜ್‌ಗಳಲ್ಲಿ ಹಾಸ್ಯಕ್ಕಾಗಿ ಬಳಸಲ್ಪಡುತ್ತಿದೆ!
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…