ಕೋಲಾರ್ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ಲಂಚದ ಆರೋಪ. ಮೂಲಗಳ ಮಾಹಿತಿ ಪ್ರಕಾರ, ಸೀಜ್ ಮಾಡಿದ್ದ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡುವುದಕ್ಕಾಗಿ ಪಿಎಸ್‌ಐ ಸುನಿಲ್ ಕುಮಾರ್ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಂತೆ.

ಲಂಚದ ಮೊತ್ತವನ್ನು ಮಧ್ಯವರ್ತಿಗಳ ಮೂಲಕ ಪಡೆದಿರುವ ಬಗ್ಗೆ ಆರೋಪ ಹೊರಡಿದ್ದು, ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಪಿಎಸ್‌ಐ ವಿರುದ್ಧ ತನಿಖೆಗೆ ಕೈ ಹಾಕಿದ್ದಾರೆ. ಭಾರೀ ನಿಯೋಜನೆಯೊಂದಿಗೆ ಬೂದಿಕೋಟೆ ಠಾಣೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರು, ಠಾಣೆಯ ಬಾಗಿಲು ಮುಚ್ಚಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ವಿಭಾಗ, ತನಿಖೆಯ ಚುರುಕುಗೊಳಿಸಿರುವುದರಿಂದ ಇನ್ನಷ್ಟು ವಿವರಗಳು ಹೊರಬೀಳುವ ನಿರೀಕ್ಷೆಯಿದೆ. ಸಾರ್ವಜನಿಕ ವಲಯದಲ್ಲಿ ಈ ಘಟನೆಯು ಭಾರೀ ಚರ್ಚೆಗೆ ಕಾರಣವಾಗಿದೆ.

Related News

error: Content is protected !!