
ತ್ರಿಶೂರ್, ಜುಲೈ 30: ಗರ್ಭಿಣಿ ಮಹಿಳೆ ಮನೆಯ ಟೆರೇಸ್‌ನಲ್ಲಿ ನೇಣು ಬಿಗಿದು ಮೃತಪಟ್ಟಿರುವ ಪ್ರಕರಣವೊಂದು ಗಂಭೀರ ತಿರುವು ಪಡೆದಿದ್ದು, ಪತಿ ಹಾಗೂ ಅತ್ತೆಯ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ.
ಮೃತಳನ್ನು ಫಸೀಲಾ (22) ಎಂದು ಗುರುತಿಸಲಾಗಿದ್ದು, ಅವರು ಕೊಟ್ಟಪರಂಬಿಲ್ ಮೂಲದವರಾಗಿದ್ದಾರೆ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಫಸೀಲಾ ಗರ್ಭಿಣಿಯಾಗಿದ್ದು, ಕೆಲವು ದಿನಗಳಿಂದ ಪತಿ ನೌಫಲ್ ಮತ್ತು ಅತ್ತೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು ಎಂಬ ದೂರಿದೆ.
ಪತ್ನಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು, ಕುಟುಂಬದಲ್ಲಿ ನಡೆದಿದ್ದ ಕಲಹ ಮತ್ತು ವೈವಾಹಿಕ ಭಿನ್ನಾಭಿಪ್ರಾಯಗಳು ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ನೌಫಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಇನ್ನಷ್ಟು ಮಾಹಿತಿ ಬಯಲಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಪತಿ ನೌಫಲ್ ಮತ್ತು ಅತ್ತೆ ವಿರುದ್ಧ ಕೌಟುಂಬಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392