ಬೆಂಗಳೂರು: ಅತ್ಯಾಚಾರ ಮತ್ತು ಮಹಿಳೆಯ ಗೌಪ್ಯತೆ ಉಲ್ಲಂಘನೆಯ ಗಂಭೀರ ಪ್ರಕರಣದಲ್ಲಿ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ದೇಶಾದ್ಯಂತ ಕೇವಲ ರಾಜಕೀಯ ವಲಯದಲ್ಲಿ ಅಲ್ಲ, ಇಡೀ ಸಮಾಜದಲ್ಲೇ ತೀವ್ರ ಸಂಚಲನ ಮೂಡಿಸಿದ್ದ ಈ ಪ್ರಕರಣದ ವಿಚಾರಣೆ ಬಳಿಕ, ಕಾನೂನು ತನ್ನ ಕರಾಳ ರೂಪ ತೋರಿಸಿದೆ.

ತೀರ್ಪು ಪ್ರಕಟವಾದ ಬಳಿಕ ಕೋರ್ಟ್ ಹಾಜರಾದ ಪ್ರಜ್ವಲ್ ರೇವಣ್ಣ, ಕಣ್ಣೀರು ಹಾಕುತ್ತಾ ದಯೆಯ ಮಂಡಿಸಿದರು. “ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಏಕೈಕ ತಪ್ಪೆಂದರೆ ರಾಜಕೀಯದಲ್ಲಿ ವೇಗವಾಗಿ ಬೆಳೆಯುವುದು” ಎಂದು ನ್ಯಾಯಮೂರ್ತಿಯ ಎದುರು ಭಾವನಾತ್ಮಕವಾಗಿ ಮಾತನಾಡಿದ ಅವರು, “ದಯವಿಟ್ಟು ನನಗೆ ಕಡಿಮೆ ಶಿಕ್ಷೆ ವಿಧಿಸಿ” ಎಂದು ಬೇಡಿಕೆ ಇಟ್ಟರು.

ಪ್ರಜ್ವಲ್ ರೇವಣ್ಣ ತಮ್ಮ ನ್ಯಾಯಾಲಯದ ಹೇಳಿಕೆಯಲ್ಲಿ, ತಮ್ಮ ಮೇಲೆ ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಸತ್ತಿಲ್ಲದ ಸಹಿತ ಮಹಿಳೆಯರು ದೂರು ನೀಡಿರುವುದು ಸಂಶಯಾಸ್ಪದವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. “ಅನೇಕ ಮಹಿಳೆಯರು ದೂರು ನೀಡಿದರು ಎನ್ನುತ್ತಾರೆ. ಆದರೆ ಯಾರೂ ಸ್ವಯಂಪ್ರೇರಣೆಯಿಂದ ದೂರು ನೀಡಿಲ್ಲ. ಎಲ್ಲರೂ ಚುನಾವಣೆಗೆ ಆರು ದಿನಗಳ ಮುಂಚೆ ಬಂದಿದ್ದಾರೆ. ಇದೊಂದು ನಾಟಕ” ಎಂದು ಅವರು ಆರೋಪಿಸಿದರು.

“ನಾನು ಬಿಇ ಮೆಕ್ಯಾನಿಕಲ್ ಪದವೀಧರ, ಕಳೆದ ಆರು ತಿಂಗಳಿಂದ ನನ್ನ ತಾಯಿ-ತಂದೆ ಯಾರನ್ನೂ ನೋಡಿಲ್ಲ. ನನ್ನ ಕುಟುಂಬದವರಿಂದ ದೂರವಾಗಿದ್ದೇನೆ. ಇದು ನನ್ನ ಜೀವನದ ಅತೀವ ಕಷ್ಟದ ಸಮಯ” ಎಂದು ತಮ್ಮ ಆಂತರಿಕ ದುಃಖವನ್ನು ಶೇರ್ ಮಾಡಿಕೊಂಡರು.

ಈ ನಡುವೆ, ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದಗಳು ಬಹಳ ಬಲವಾಗಿದ್ದು, ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾಗಿತ್ತು. ಪರಿಣಾಮವಾಗಿ ನ್ಯಾಯಾಲಯವು ಯಾವುದೇ ರಿಯಾಯಿತಿ ನೀಡದೆ ಜೀವಾವಧಿ ಶಿಕ್ಷೆ ಘೋಷಿಸಿದೆ.

ಈ ತೀರ್ಪು ರಾಜ್ಯ ರಾಜಕೀಯದಲ್ಲಿ ದೊಡ್ಡ ಆತಂಕ ಮೂಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬದ ಸದಸ್ಯನಾದ ಪ್ರಜ್ವಲ್ ವಿರುದ್ಧ ಈ ತೀರ್ಪು ಜೆಡಿಎಸ್‌ಗೆ ಭಾರೀ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಬಹುದೆಂಬ ಅಂದಾಜು ವ್ಯಕ್ತವಾಗುತ್ತಿದೆ.

error: Content is protected !!