ಬೆಳಗಾವಿ: ನಗರದ ಕೃಷ್ಣದೇವರಾಯ ವೃತ್ತದಲ್ಲಿ ಸ್ಥಳಿಯ ಯೂನಿಕ್ ಶಾಪ್‌ನಲ್ಲಿ ಶನಿವಾರ ತಡರಾತ್ರಿ ಅಹಿತಕರ ಘಟನೆ ನಡೆದಿದೆ. ರಾತ್ರಿ 12 ಗಂಟೆ ನಂತರವೂ ಶಾಪ್ ಓಪನ್ ಇಟ್ಟಿದ್ದ ಮಾಲೀಕನ ವಿರುದ್ಧ ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಮಾಹಿತಿಯ ಪ್ರಕಾರ, ನಿಗದಿತ ಸಮಯ ಮೀರಿದರೂ ಅಂಗಡಿ ತೆರೆದಿದ್ದ ಕಾರಣ ಮಾರ್ಕೆಟ್ ಪೊಲೀಸ್ ಠಾಣೆಯ ಸಿಬ್ಬಂದಿ ದಿಢೀರ್ ದಾಳಿ ನಡೆಸಿದರು. ಈ ವೇಳೆ ಅಂಗಡಿಗೆ ಸೇರಿದ ಕೆಲ ಗ್ರಾಹಕರು ಅಚಾನಕ್ ಪೊಲೀಸರ ಆಗಮನದಿಂದ ಗಾಬರಿಗೊಂಡು ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ಶಾಪ್ ಮಾಲೀಕನಿಗೆ ಲಾಠಿಯಿಂದ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ.

ಪೋಲೀಸರ ತೀವ್ರ ಕ್ರಮಕ್ಕೆ ಗುರಿಯಾದ ಮಾಲೀಕನ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭವಾಗಿದ್ದು, ಸಂಬಂಧಿಸಿದ ಶಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಮೀರಿ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Related News

error: Content is protected !!