Categories: CrimeLatest

ಗಂಡನನ್ನು ಬಿಡಲು 25 ಲಕ್ಷ ಕೊಡು, ಇಲ್ಲವೇ ನನ್ನೊಂದಿಗೆ ಮಲಗು ಎಂದಿರುವ ಪೋಲಿ ಪೊಲೀಸ್ ಇನ್ಸ್‌ಪೆಕ್ಟರ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯಾದಂತೆ ಪರಿಣಮಿಸಿದ್ದು, ಅಧಿಕಾರ ದುರುಪಯೋಗ ಮತ್ತು ಮಹಿಳೆಯರ ಮೇಲಿನ ಕಿರುಕುಳದ ವಿಚಾರ ಚರ್ಚೆಗೆ ಕಾರಣವಾಗಿದೆ.

ಸಂತ್ರಸ್ತೆಯ ಪತಿ ಸಾಮಾಜಿಕ ಕಾರ್ಯಕರ್ತರಾಗಿದ್ದು, ಇತ್ತೀಚೆಗೆ ಕೆಲವು ಮಹಿಳೆಯರು ಇನ್ಸ್‌ಪೆಕ್ಟರ್ ವಿರುದ್ಧ ನೀಡಿದ ಕಿರುಕುಳದ ದೂರಿನಲ್ಲಿ ಅವರಿಗೆ ಸಹಾಯ ಮಾಡಿದ್ದರು. ಈ ಹಿನ್ನೆಲೆ ತಿಳಿದ ಇನ್ಸ್‌ಪೆಕ್ಟರ್, ಆ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಿಂಸೆ ನೀಡಲು ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಗಸ್ಟ್ ತಿಂಗಳಲ್ಲಿ ಮಹಿಳೆಯ ಪತಿಯನ್ನು ಬಂಧಿಸಿದ ಬಳಿಕ, ಬಿಡುಗಡೆಗಾಗಿ ಪತ್ನಿ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿದಾಗ, ಅವರು 25 ಲಕ್ಷ ರೂಪಾಯಿ ಹಣ ನೀಡಬೇಕು ಅಥವಾ ಅಸಭ್ಯ ಬೇಡಿಕೆಗೆ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಅಲ್ಲದೆ, ತಾನು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ನೀಡಿ ಈ ಸ್ಥಳಕ್ಕೆ ವರ್ಗಾವಣೆಯಾಗಿದ್ದೇನೆ ಎಂದು ಹೇಳಿ, ಹಣ ನೀಡದಿದ್ದರೆ ಪತಿಯ ಮೇಲೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರ್ಥಿಕವಾಗಿ ಅಸಹಾಯಕಳಾದ ಮಹಿಳೆ, ಸಾಧ್ಯವಾದಷ್ಟು 50 ಸಾವಿರ ರೂಪಾಯಿ ನೀಡಿ ಪತಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡಿಸಿಕೊಂಡಿದ್ದಾರೆ. ಆದರೆ ನಂತರವೂ ಕಿರುಕುಳ ನಿಲ್ಲದೇ, ಪತಿಯನ್ನು ಹುಡುಕುವ ನೆಪದಲ್ಲಿ ಮಹಿಳೆಯನ್ನು ಮತ್ತೆ ಮತ್ತೆ ಠಾಣೆಗೆ ಬರಲು ಒತ್ತಾಯಿಸಲಾಗುತ್ತಿದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಇದೇ ರೀತಿಯ ದೂರುಗಳನ್ನು ಇನ್ನೂ ಹಲವಾರು ಮಹಿಳೆಯರು ನೀಡಿದ್ದು, ಕುಟುಂಬ ಕಲಹಗಳ ಪ್ರಕರಣಗಳಲ್ಲಿ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ.

ಇದಲ್ಲದೆ, ಪತಿ ವಿದೇಶದಲ್ಲಿ ಇರುವ ಒಬ್ಬ ಮಹಿಳೆಯ ಮನೆಗೆ ರಾತ್ರಿ ವೇಳೆ ನುಗ್ಗಿದ ಘಟನೆಗೂ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿರುವುದಾಗಿ ವರದಿಯಾಗಿದೆ. ಈ ಎಲ್ಲ ಘಟನೆಗಳ ಬಗ್ಗೆ ಪೊಲೀಸ್ ಕಮಿಷನರ್‌ಗೆ ದೂರು ನೀಡಿದರೂ, ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಈ ಪ್ರಕರಣ ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.

ಭ್ರಷ್ಟರ ಬೇಟೆ

Recent Posts

ಸ್ನೇಹಿತನ ಸಹೋದರಿ ಜೊತೆ ಆಕ್ರಮ ಸಂಬಂಧ; ಕೊಲೆಯಲ್ಲಿ ಅಂತ್ಯ

ಗುಂಡ್ಲುಪೇಟೆ ಪಟ್ಟಣದ ಸಮೀಪದ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಮೂಖಹಳ್ಳಿ ಗ್ರಾಮದ…

16 hours ago

ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿ ಘೋಷಣೆ

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಸಂತಸದ ಸುದ್ದಿ ಬಂದಿದೆ. Railway Recruitment Board (ಆರ್‌ಆರ್‌ಬಿ) ದೇಶಾದ್ಯಂತ 11,127 ಅಸಿಸ್ಟಂಟ್…

20 hours ago

ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ಪತ್ನಿ; ರೆಡ್ ಹ್ಯಾಂಡ್ ಆಗಿ ಪೊಲೀಸರೊಂದಿಗೆ ಹೋಗಿ ಬಯಲಿಗೆಳೆದ ಪತಿ

ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ಇದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹಿಂದೆ…

22 hours ago

ಹುಚ್ಚುನಾಯಿ ಕಡಿತ, 13 ಜನಕ್ಕೆ ಗಾಯ.

ಪಟ್ಟಣದಲ್ಲಿ ಹುಚ್ಚುನಾಯಿ ಹಾವಳಿಯಿಂದಾಗಿ 13 ಜನಕ್ಕೆ ಕಚ್ಚಿ ಪಟ್ಟಣವನ್ನು ಬೆಚ್ಚಿ ಬೀಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಜಮ್ಮಾ ಮಸೀದಿ,…

1 day ago

ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ ಮಲಗಲು ಸಿದ್ಧ- ‘ವಡಾ ಪಾವ್ ಗರ್ಲ್’

ಸಾಮಾಜಿಕ ಮಾಧ್ಯಮಗಳಲ್ಲಿ ‘ವಡಾ ಪಾವ್ ಗರ್ಲ್’ ಎಂದು ಖ್ಯಾತಿ ಪಡೆದಿರುವ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಅವರು…

1 day ago

ನಕಲಿ ದಾಖಲೆಗಳಿಂದ ಉದ್ಯೋಗ ಪಡೆಯಲು ಯತ್ನ – ರಾಜ್ಯದಲ್ಲಿ 20 ಅತಿಥಿ ಉಪನ್ಯಾಸಕರು ಪತ್ತೆ..!

ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆಯಲು ಪ್ರಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ…

2 days ago