
ಮಂಡ್ಯ ಜಿಲ್ಲೆಯ, ಕೆ ಆರ್ ಪೇಟೆ ತಾಲೂಕಿನ ಸೀಳನೆರೆ ಹೋಬಳಿ, ಮುರುಕನಹಳ್ಳಿ ಗ್ರಾಮ ಪಂಚಾಯತಿ ಪಿ ಡಿ ಓ ಹಾಗು ಬಿಲ್ ಕಲೆಕ್ಟೆರ್ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ.
ಮುರುಕನಹಳ್ಳಿ ಗ್ರಾಮ ಪಂಚಾಯತ್ ಪಿ ಡಿ ಓ ಸಯ್ಯದ್ ಮುಜಾಕಿರ್, ಹಾಗು ಬಿಲ್ ಕಲೆಕ್ಟೆರ್ ನಾಗೇಶ್, ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಹೊನ್ನೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ
ರೈತರೊಬ್ಬರಿಂದ ಮನೆಯ ಖಾತೆ ಮಾಡಿಕೊಡಲು 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 20 ಸಾವಿರ ಲಂಚದ ಹಣ ಪಡೆಯುವಾಗ ಮಂಡ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡವು, ಪಿಡಿಓ ಹಾಗು ಬಿಲ್ ಕಲೆಕ್ಟೆರ್ ಲಂಚ ಪಡೆಯುತ್ತಿದ್ದಾಗ ದಿಡೀರ್ ದಾಳಿ ನಡೆಸಿ ಅಧಿಕಾರಿಗಳನ್ನು ಬಂಧಿಸಿದ್ದಾರೆ, ಬಂಧಿತರಿಂದ ಮುಂಗಡವಾಗಿ ಪಡೆಯುತ್ತಿದ್ದ 20 ಸಾವಿರ ಲಂಚದ ಹಣವನ್ನು ವಶಪಡಿಸಿಕೊಂಡಿರುತ್ತಾರೆ.
ವರದಿ: ಎಲ್ ಎನ್ ಮೂರ್ತಿ